ಮೊದಲ ಮಳೆ ಸುಕುಮಾರ್ ಎಸ್. ರಘುರಾಂsukumar_raghuram& commat yahoo.comಬಿದಿಗೆ ಚಂದಿರನ ಕಾವಿಗೆ ಸೋತುಮೋಡವು ತಂಪನು ಸುರಿಸುತಿದೆದೀಪದ ಹಬ್ಬದ ಪ್ರಣತಿಯ ಕಾಂತಿಗೆನೀರಿನ ಚುಕ್ಕೆಯು ಕನ್ನಡಿಯಾಗಿದೆದೇಗುಲದಂಗಳದಲ್ಲಿನ ಜಾತ್ರೆಯುಪ್ರಕೃತಿಯ ಸೊಗಸಿಗೆ ನಲಿಯುತಿದೆರೈತನ ಹಟ್ಟಿಯ ಹೊಸಿಲಿನ ಆಚೆಗೆಹಸುರಿನ ದಿಕ್ಕಲಿ ಸಂಭ್ರಮ ಅಡಗಿದೆಹೂವಿನ ತೋಟದ ಹಕ್ಕಿಯ ಹಾಡಿಗೆತುಂತುರು ಹನಿಗಳ ತಾಳದ ಜೊತೆಯಿದೆಕಾಡು ಕಣಿವೆಯಲಿ ಹರಿಯುವ ನದಿಯುಹೊಸ ಉಡುಗೆಗೆ ಹಾತೊರೆಯುತಿದೆನಲ್ಲ ನಲ್ಲೆಯರ ಬೆತ್ತಲೆಯಾಟಕೆಮಣ್ಣಿನ ಘಮದಲಿ ಬಯಕೆಯ ಮತ್ತಿದೆಮೊದಲ ಮಳೆಯಿದು ಬರಿ ನೆಪ ಮಾತ್ರಅಮೃತಧಾರೆಗೆ ಜೀವ ನಿಯಮವಿದೆPost your viewsಮುಖಪುಟ / ಎನ್‌ಆರ್‌ಐ