ಎತ್ತ ನೋಡಿದರೂ.....! ಈರಣ್ಣ ಮೂಲೀಮನಿ(ಕಸ್ತೂರೀಪ್ರಿಯ), ದುಬೈ.iranna_1961& commat hotmail.comಎತ್ತ ನೋಡಿದರೂ ನಾ ಕಾಣುವೆ ತಾಯೆನಿನ್ನ ಕಂಗಳ ಮಾತೃಮಮತೆಯ ಛಾಯೆ//ಪ//ನಿನ್ನ ಮನಸನ್ನೇಕೆ ಕಲ್ಲು ಮಾಡಿದೆ ತಾಯಿಬಡತನದಲಿ ಬೆಂದು ಬಾಳಲಿ ಕಹಿಯುಂಡುಸಾಕಿದೀ ತಬ್ಬಲಿಯ ತಬ್ಬಿಕೊಳ್ಳುವ ಮುನ್ನತಿರುಗಿ ಬಾರದ ಊರ ಸೇರಿದೆ ನೀನೇಕೆ? //1//ನೀ ದೂರ ಹೋದರೂ ಖಾಲಿಯಾಗದು ಎಂದೂನೀ ನಮಗೆ ಉಣಿಸಿರುವ ನೆನೆಪಿನಾ ಬುತ್ತಿಆಂತರ್ಯದ ಪ್ರೀತಿ ಕೂಗಿ ಕರೆದಿದೆ ತಾಯಿಮಾರ್ದನಿಸಿ ಹೊಗಳುತಿದೆ ನಿನ ಬಾಳ ಸಾರ್ಥಕತೆ //2//ಬೆಳಗಿದ್ದೆ ನೀನೆಮ್ಮ ಹೃದಯಮಂದಿರದಲ್ಲಿನಂದದಾ ಒಲವಿನಾ ಹಣತೆಯಾಗಿಇರುವೆ ನೀ ಎಲ್ಲರಲಿ ಮನದ ಅಂಗಳದಲ್ಲಿಬತ್ತದಾ ಮಮತೆಯಾ ಒರತೆಯಾಗಿ //3//Post your viewsಮುಖಪುಟ / ಎನ್‌ಆರ್‌ಐ