ಓ ಮಲ್ಲಿಗೆ
| ಓ ಮಲ್ಲಿಗೆ | |
| ಇಂಗ್ಲಿಷ್‌ನಲ್ಲಿಯೂ ಪಾಟೀಲ್ ಪದ್ಯ ಬರೆಯುತ್ತಾರೆ. ಅಮೆರಿಕ ಮತ್ತು ಕೆನಡಾದಲ್ಲಿ ಅವು ಪ್ರಕಟಗೊಂಡಿವೆ. ಫ್ಲಾರಿಡಾದ ಇಂಟರ್‌ನ್ಯಾಷನಲ್ ಸೊಸೈಟಿ ಆಫ್ ಪೊಯೆಟ್ಸ್ ಆಯೋಜಿಸಿದ್ದ ಪ್ರತಿಷ್ಠಿತ ಸ್ಪರ್ಧೆಯಲ್ಲಿ, ಪಾಟೀಲ್‌ರ To Jasmine ಎನ್ನುವ ಆಂಗ್ಲ ಕವನಕ್ಕೆ ಅತ್ಯುತ್ತಮ ಕವನವೆಂಬ ಹೆಗ್ಗಳಿಕೆ ಸಂದಿದೆ. | |
![]() |
ಮಿಲಿಯಾಂತರ ಮನಗಳ ನೀ ಗೆಲ್ಲುವೆ ತೀಡುವ ಗಾಳಿಗೆ ಕುಣಿಯುವೆ ಕುಲುಕುತ ಜೇನಿನ ಗಾನಕೆ ಮೆಲ್ಲಗೆ ಬಳುಕುತ ತುಂಟದಿ ನಗುತ ಕುಡಿನೋಟ ಕದಿಯುವೆ ಮಂಜಿನ ಮುಸುಕಲಿ ಇಬ್ಬನಿ ಹೀರುತ ಸಂಜೆಯಗೆಂಪಲಿ ಲಕಲಕ ಹೊಳೆಯುತ ಲೋಕಕೆ ಶಾಶ್ವತ ದಿವ್ಯತೆ ಸೂಸುವೆ ಎಲೆಗಳ ಮರೆಯಲಿ ಅರಳುತ ನಾಚುತ ಘಂಘಮಘಮ ಪರಿಮಳ ಗರೆಯುತ ಮುದುಡಿದ ಮನಕೆ ಮುದವನು ನೀಡುವೆ ಅನಾದಿ ಕಾಲದಿ ದೂರದಿ ಮಿನುಗುವ ತಾರೆ ತಾರದ ಸಂತಸ ಚಣದಿ ತರುವ ನಿನ್ನಯ ಮರ್ಮವ ತಿಳಿಸೇ ಚೆಲುವೆ ಒಲವಿನ ಮಲ್ಲಿಗೆ ಮೋಹಕ ಮಲ್ಲಿಗೆ ಮಿಲಿಯಾಂತರ ಮನಗಳ ನೀ ಗೆಲ್ಲುವೆ |













Click it and Unblock the Notifications