ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶ ನಿನ್ನ ಚರಣ ಭಜನೆ!

By Staff
|
Google Oneindia Kannada News

ಈಶ ನಿನ್ನ ಚರಣ ಭಜನೆ!
Prakash Hemavathi
ಕಂಜದಳ ನೇತ್ರನೇ
ಹೇ ಮೂಲೋಕದೊಡೆಯಾ
ನಂಜನೇ ನುಂಗಿ ಜಗದಂಜಿಕೆಯ
ತೊಡೆದೆಯಾ
ಕಾಲಭೈರವನೇ
ಹೇ ಕೈಲಾಸಗಿರಿವಾಸಿ
ಏನೆಂದು ಬಣ್ಣಿಸಲಿ ನಿನ್ನ
ಕೃಪಾಕಟಾಕ್ಷವ
ಈ ಜಗದಿತಕೆ ನೀ ನೀಡಿದ
ಕರುಣಾಪ್ರಸಾದವ

ರಾಮನೊಲಿದು ಪೂಜಿಸೆ ನೆಲೆಸಿದೀ
ರಾಮೇಶ್ವರದಿ
ರಾವಣಗೂ ಒಲಿದೆ ನೀ
ಭಕ್ತರೊಳು ಭೇದವ ತೋರದೆ
ಸಾಕ್ಷಿಯಾಗಿರಲದಕ್ಕಿಂದಿಗೂ
ಗೋಕರ್ಣವು
ಸಿದ್ದೇಶ್ವರನಾಗಿ ಸಿದ್ದಿಗೆ ಕುಳಿತೇ ನೀ
ಹೇಮಾವತಿಯಾಲು
ಕಾಪಾಲಿಕನಾಗಿ ಭಿಕ್ಷೆಗೂ ನಿಂತಿರುವೀ
ಪಚ್ಚಿಮರಾಹಿಯಾಲು
ಏನೆಲ್ಲಾ ರೂಪವೋ, ಏನೆಲ್ಲಾ ವೇಷವೋ,
ಏನೇನೆಲ್ಲಾ ಅವತಾರವೋ ತಂದೆ ನಿನ್ನದು
ಈ ಲೋಕದಿತಕಾಗಿ

ಭಸ್ಮವ ಧರಿಸಿ
ಸ್ಮಶಾನದೊಲು ವಾಸಿಸುತೆ
ದುಷ್ಟರಿಗೆ ಭೈರವನಾಗಿ
ಶಿಷ್ಟರಿಗೆ ರಕ್ಷಕನಾಗಿ
ಒಲಿದ ಶಿವೆಗರ್ದನಾರೀಶ್ವರನಾಗಿ
ಸ್ಕಂದ ಮುದ್ದುಗಣಪರಿಗೆ
ವಾತ್ಸಲ್ಯದಾಪಿತನಾಗಿ
ನಂದಿ ಭೃಂಗುಗಳಿಗೆ
ಕರುಣಾಮಯಿ ದೊರೆಯಾಗಿ
ಒಲಿದು ರಾಮಾರ್ಜುನರಿಗೆ
ಶಿವ ಧನುಸ್ಸಕರುಣಿಸಿ
ಒಲಿಯದಾ ದಕ್ಷನ
ಶಿರವಯಜ್ಞಕಾಹುತಿಯಾ
ಮಾಡಿದನೀನ್‌
ದುರ್ಗುಣನೇ ನಿರಾಕಾರಿಯೇ
ಎಲ್ಲಿ ನೋಡಿದರಲ್ಲಿ
ಎತ್ತ ನೋಡಿದರತ್ತ
ನೀನೇ ನೀನಾಗಿರುವೆ
ನೀನಿಲ್ಲದ ತೆರವಿಲ್ಲ ನಿನ್ನನ್ನಗಲಿದ ಜಗವಿಲ್ಲ
ನೀನೇ ಸತ್ಯ ನೀನೇ ನಿತ್ಯ ನೀನೇ ಮಂಗಳ
ಈ ಜಗಕ್ಕೆಲ್ಲಾ
ನಿನ್ನಿಂದಲೇ ಇಹ ನೀನೇ ಪರ
ನೀನೇ ಗುಣ ನಿನ್ನರಿವೇ ನಿರ್ಗುಣ
ನೀನಿಲ್ಲದೇನಿಲ್ಲ
ನಿನ್ನಿಂದಲೇಯಿಹುದೆಲ್ಲಾ
ನಿನ್ನಿರುವೇ ಆಸರೆ ಸಕಲಜೀವಾತ್ಮಕ್ಕೆಲ್ಲಾ
ನೀನೇ ಅಂತಃಶಕ್ತಿ
ನಿನ್ನಲ್ಲೇ ತುಂಬಿರಲಿ ನಮ್ಮೆಲ್ಲರ ಭಕ್ತಿ!

ನಿನ್ನೊಳೈಕ್ಯವಾಗಿರ್ಪುದೇ
ಎಮಗಿರುವಂತಿಮ ಮುಕ್ತಿ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X