ದೋಸೆ ಫ್ಯಾಮಿಲಿ


ದೋಸೆ ಫ್ಯಾಮಿಲಿ
ಫ್ಯಾಮಿಲಿ ಅಂದ್ರೆ ಅಪ್ಪ, ಅಮ್ಮ, ಮಕ್ಕಳು, ತಾತ, ಅಜ್ಜಿ ಹೀಗೆ ಅಲ್ವಾ? ಇಲ್ಲೊಂದು ದೋಸೆ ಫ್ಯಾಮಿಲಿ ಇದೆ ನೋಡಿ. ಎಲ್ಲಾ ಫ್ಯಾಮಿಲಿ ಬಿಜಿ ಆಗಿರೋ ಹಾಗೆ ದೋಸೆ ಫ್ಯಾಮಿಲಿಯಲ್ಲಿ ಎಲ್ಲರೂ ಎಷ್ಟು ಬಿಜಿ ಆಗಿದ್ದಾರೆ ...ಓದಿ.
Seema Ravishankar, North Carolina
ದೋಸೆ ಫ್ಯಾಮಿಲಿ ಒಂದೂರಲ್ಲಿತ್ತು
ಬಿಸಿಬಿಸಿ ಬಿಜಿಬಿಜಿ ಲೈಫ್‌ ಆಗಿತ್ತು

ಮಸಾಲೆ ದೋಸೆ ಮಾಲ್‌ಗೆ ಹೋಯ್ತು
ಸಾದಾ ದೋಸೆ ಸ್ಕೂಲ್‌ಗೆ ಹೋಯ್ತು
ಈರುಳ್ಳಿ ದೋಸೆ ಈಜೋಕೆ ಹೋಯ್ತು
ಬೆಣ್ಣೆ ದೋಸೆ ಬೆಂಗಳೂರ್‌ಗೆ ಹೋಯ್ತು

ಕಾಯಿ ದೋಸೆ ಕುಕ್ಕಿಂಗ್‌ ಮಾಡ್ತು
ಬೇಳೆ ದೋಸೆ ಬೇಕಿಂಗ್‌ ಮಾಡ್ತು
ನೀರು ದೋಸೆ ನಿಟ್ಟಿಂಗ್‌ ಮಾಡ್ತು
ಪೇಪರ್‌ ದೋಸೆ ಪೇಂಟಿಂಗ್‌ ಮಾಡ್ತು

ರಾಗಿ ದೋಸೆ ರಾಗಾ ಹಾಡ್ತು
ರವೆ ದೋಸೆ ರೇಡಿಯಾ ಕೇಳ್ತು
ತುಪ್ಪದ ದೋಸೆ ತಪ್‌ ಅಂತ ಬಿತ್ತು
ಮೆಂತ್ಯದ ದೋಸೆ ಮೆಲ್ಲಗೆ ನಕ್ತು

ಇಲ್ಲಿಗೆ ದೋಸೆ ಪುರಾಣ ಮುಗಿತು
ಅಲ್ಲಿಗೆ ಹೊಟ್ಟೆ ತಾಳಾ ಹೊಡಿತು

(About Seema (12): Seema Ravishankar is a 7th grader at Martin Middle school, North Carolina. She enjoyes reading and writing. Seema speaks, writes and reads kannada.

She won 1st place for kannada translation competation held at kannada sammelana Detroit 2002, and also won special prize for essay writing. She was the only one to write the essay in Kannada (about sankranti habba). Besides reading and writing her other hobbies are playing flute and community service)


ಸಿಂಧು-ಸೀಮಾ : ಸಾಧನ‘ಕೇರಿ’ಯ ಸವಿಗನ್ನಡ ಸೋದರಿಯರು!

ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+