ಗರಡಿ ಗರುಡು - 3


ಗರಡಿ ಗರುಡು - 3
Krishnapriyan
ಕರಡಿಯಾಡನೆ ಕುಸ್ತಿಯಾಡಲೆಂದು ಹೋದ ಗರುಡು
‘ಕರಡಿ ಹಿಡಿಯದಿರುವ ನನ್ನ ಜೀವನ ಬಲು ಬರಡು’

ಎಂದುಕೊಂಡು ಹಿಮಾಲಯದ ತಪ್ಪಲಲ್ಲಿ ಹುಡುಕಿ
ಕರಡಿ ಇಲ್ಲಿ ಸಿಗುವುದೆಂದು ಕಾಡಲೆಲ್ಲ ತಡಕಿ

ಸಿಕ್ಕಿದಾಗ ಕರಡಿಯೆಡೆಗೆ ನುಗ್ಗಿ ಅದನು ಹಿಡಿದ
ಪಟ್ಟು ಹಾಕಿ ಚಿತ್ತು ಮಾಡಿ ಕೆನ್ನೆಗೆರಡು ಹೊಡೆದ

ಬೆಚ್ಚಿ ಬಿದ್ದ ಕರಡಿ‘ಗರುಡು! ಬಿಟ್ಟು ಬಿಡೋ ನನ್ನ
ಆದೊ ನೋಡು ಜೇನುಗೂಡಲಿರುವ ತುಪ್ಪವನ್ನ

ಮರವ ಹತ್ತಿ ಕಿತ್ತು ಗೂಡ ತರುವೆ ಜೇನುತುಪ್ಪ
ನೀನು ನಾನು ಕೂಡಿ ಅದನು ಮೆದ್ದುಬಿಡೋಣಪ್ಪ’

ಎಂದು ಹೇಳಿದಾಗ ಗರುಡು ಕರಡಿ ಬಿಟ್ಟುಬಿಟ್ಟ
ಬಿಟ್ಟ ಕರಡಿ ಮರವ ಹತ್ತಿ ಕಿತ್ತು ಜೇನು ಹುಟ್ಟ

ಗರುಡು ಕೈಗೆ ಎಸೆಯಿತಾಗ ಜೇನುಹುಳಗಳೆಲ್ಲ
ಗರುಡು ತಲೆಯ ಗುಯ್ಗುಡುತ್ತ ಮುತ್ತಿಕೊಂಡವಲ್ಲ!

ಹೆದರಿ ಬೆದರಿ ಗರುಡು ಎಲ್ಲು ನಿಲ್ಲದೆಯೇ ಓಡಿ
ಹೇಳ್ದ ನೂರ ಸಾರಿ ‘ಸದ್ಯ! ಬಚಾವಾದೆ ನೋಡಿ!

ಕರಡಿಯಾಸೆಯನ್ನು ನಾನು ಇಗೋ ಬಿಟ್ಟು ಬಿಟ್ಟೆ
ಇನ್ನು ಮೇಲೆ ನಾನು ಹಿಡಿವೆ ಒಂದೊ ಎರಡೊ ಚಿಟ್ಟೆ!’

(*ಕಪಿನಯ್ಯ ಅಲ್ಲ.)


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+