ಡ್ಯಾಷ್‌ಬೋರ್ಡಿನ ಗಣಪ


ಡ್ಯಾಷ್‌ಬೋರ್ಡಿನ ಗಣಪ
Dashboardina Ganapa poem by Savitha Ravishankar
ಡ್ಯಾಷ್‌ಬೋರ್ಡಲಿ ಕುಳಿತಿಹ ಗಣಪನು ನಾನು
‘ಕಾರ್‌-ಮಿಕ’ರನು ಸಂರಕ್ಷಿಪೆ ನಾನು

ಗಾಡಿಯ ಉತ್ತುಂಗ ಶೃಂಗದೆ ಕುಳಿತು
ಮಂದಿಗೆ ಕಂಪನಿ ಕೊಟ್ಟಿಹೆನು
ಗಡಗಡ ಚಳಿಯಲೂ, ಸುಡುಸುಡು ಬಿಸಿಲಲೂ
ಗಾಡಿಯ ರಕ್ಷಣೆ ಮಾಡಿಹೆನು

ರಾಕ್‌, ಪಾಪ್‌, ಗಝಲು, ಭಾವಗೀತೆ
ಶಾಸ್ತ್ರೀಯ ಸಂಗೀತಕು ಕಿವಿ ಕೊಟ್ಟಿಹೆನು
ಸರಸ ಸಂವಾದಕೂ, ವಿರಸ ವಿವಾದಕೂ
ಕಿವಿ ಅಗಲಿಸಿ ಇಳಿ ಬಿಟ್ಟಿಹೆನು

ಸರಸರ ಸ್ಪೀಡಲೂ ಚಲಿಸಿಹೆನು
ಕುಟುಕುಟು ಟ್ರಾಫಿಕ್ಕೂ ಕಂಡಿಹೆನು
ಗಿರಗಿರ ಎಗ್ಜಿಟ್ಟ ತಿರುಗಿಹೆನು
ಭರಭರ ಫ್ಲೈಓವರ್‌ ಹಾರಿಹೆನು

ಗಜಿಬಿಜಿ ರಸ್ತೆಯ ನೋಡಿಹೆನು
ಮಜದಲಿ ವಿಂಡೊ ಶಾಪಿಂಗ್‌ ಮಾಡಿಹೆನು
ಗಾಡಿಯ ಒಡೆಯರು ಶಾಪಿಂಗ ಮುಗಿಸೆ
ತಾಳ್ಮೆಯಿಂ ಕುಳಿತು ಕಾದಿಹೆನು

ಹರೆಯದ ಹುಡುಗಾಟ ಕಂಡಿಹೆನು
ಗುಜುಗುಜು ಮಾತನು, ಕಿಸಕಿಸ ನಗುವನು
ಗದ್ದಲ ಮದ್ದಲ ತಿಪ್ಪರಲಾಗವನು
ಕಂಡೂ ಕಾಣದೊಲು ನಿಂದಿಹೆನು

ಮಕ್ಕಳ ಆಟಕೆ ಸೊಂಡಿಲನೆತ್ತಿ
ಕೇಕೆ ಹಾಕಿ ನಲಿ ನಲಿದಿಹೆನು
ಅಪ್ಪ ಅಮ್ಮರ ಅವಿರತ ಚಾಲನೆಗೆ
‘ಭಲೆ’ ಎಂದು ಮೆಚ್ಚಿಗೆ ಕೊಟ್ಟಿಹೆನು

ಡ್ಯಾಷ್‌ಬೋರ್ಡಿನ ಫೇಮಸ್‌ ಗಣಪನು ನಾನು
ಸರ್ವ ವಿಘ್ನ ವಿನಾಶಕ ನಾನು
ದಾರಿಯ ತೋರುತ, ಮಂಗಳ ಕೋರುತ
ಸನ್ಮತಿ, ಸದ್ಗತಿ ಬಿಡದೆಲೆ ನೀಡುತ
ಲೋಕವ ಕಾಯುವ ಗಣಪನು ನಾನು.

(ಸ್ಫೂರ್ತಿ : ವಿಚಿತ್ರಾನ್ನದಲ್ಲಿನ ಡ್ಯಾಷ್‌ಬೋರ್ಡ್‌ ಗಣಪನ ಡ್ಯಾಷಿಂಗ್‌ ಮಾತುಗಳು!)


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+