ಮೈಲಿಗಲ್ಲು ಚಂಚಲಾ ದಾಸ್chanchaladoss& commat hotmail.comಮೂವತೈದು ವರುಷಗಳುಉರುಳಿ ಹೋದವು ನಲ್ಲಎಲ್ಲಿ ಹೋದವೋ ಏನೋನನಗಂತೂ ತಿಳಿದಿಲ್ಲ !ಹೊಸ ಬಾಳಿನ ಹೊಸಿಲಲಿನಿಂದೆವು ಅಂದುಹೊಸ ಜೋಡಿಯ ತೆರದಲೆಭಾವನೆ ಇಂದು!ಚಿಕ್ಕ ಚೊಕ್ಕದಾದ ಮನೆಸುತ್ತಲೂನು ಹೂವಬನೆಒಲವಿನೀ ರಾಜ್ಯದಲ್ಲಿಒಡತಿ ನಾನೆ! ಒಡೆಯ ನೀನೆ!ಪ್ರೀತಿಯ ಬಳ್ಳಿಯಲ್ಲಿಬಿಟ್ಟ ಎರಡು ಹೂವುಕಂಡ ಕನಸು,ಅಂದುಜೊತೆಯಾಗಿ ನಾವು!ಜೀವನದ ಹಾದಿಯಲಿನೋವು ನಲಿವುಸವಿಯುತಿಹೆವು ಜೊತೆಯಲಿಬೆಲ್ಲ ಬೇವು!ನೆಂಟರಿಲ್ಲದೂರಿನಲ್ಲಿನೆಲೆಸಿಹೆವು ನೀನು-ನಾನುಸ್ನೇಹಿತರೆ ನೆಂಟರಾಗಿನೀಡಿರುವರು ಬಾಳಿಗೆ-ಜೇನು !ಹಿಂದಿರುಗಿ ನೋಡಿದೆನುನಿಂತು ಈ ಮೈಲಿಗಲ್ಲಲಿಅರಿತೆನು ಈ ಬಾಳು ಜೊನ್ನುನೀನಿರಲು ಜೊತೆಯಲ್ಲಿ !Post your viewsಮುಖಪುಟ / ಎನ್‌ಆರ್‌ಐ