ಕುಂಬಾರನಿಗೊಂದು ವರ್ಷ ದೊಣ್ಣೆಗೊಂದು ನಿಮಿಷ
| ಕುಂಬಾರನಿಗೊಂದು ವರ್ಷ ದೊಣ್ಣೆಗೊಂದು ನಿಮಿಷ | |
![]() |
ತಂದೊಂದು ದೊಣ್ಣೆಯನು ಮತ್ತೊಬ್ಬ ಮುರಿದನದ ಸುಲಭದಿಂ ನಿಮಿಷದಲ್ಲೆ ನೀರು soap, wax ಹಾಕಿ carಆ ನಾನುಜ್ಜುತ್ತ ಹೊಳೆಸಿದೆನು ಗಂಟೆಗಟ್ಲೆ ಬೆಳಗಾಗ ಬೇಗೆದ್ದು ಅತಿಥಿಗಳಿಗೌತಣವ ಮಾಡಿರಲು ದಿವಸದಲ್ಲಿ ಕಲೆಗಾರ ಬಣ್ಣಗಳ ಭಾವಚಿತ್ರವನೊಂದ ನಿರ್ಮಿಸಿದ ವರುಷದಲ್ಲಿ ಸ್ವಚ್ಛ ಭಾಷೆಯ ನುಡಿಯೆ ಮಗಗೆ ಕಲಿಸಿರೆ ತಾಯಿ ಐದಾರು ವರುಷಗಳಲಿ ಗಗನಚುಂಬಿಗಳೆರಡ ನೂರಾರು ಜನ ಕಟ್ಟಲಾರೇಳು ವರುಷಗಳಲಿ ಬಲ್ಲ ಶಿಲ್ಪಿಯು ಕಲೆಯ ಬಲೆಯೆಂದು ವಿಗ್ರಹವ ನಿರ್ಮಿಸಿರೆ ವರುಷಗಳಲಿ ಮನವ ಹಿಡಿತದೊಳಿಟ್ಟು ಋಷಿ ತಪವ ಮಾಡುತಿರೆ ನೂರಾರು ವರುಷಗಳಲಿ ಗಾಢವಾದೆಣ್ಣೆಯನು ಭೂದೇವಿ ರಚಿಸಿದಳು ಲಕ್ಷಶತಮಾನಗಳಲಿ ಚೆಂದೊಳ್ಳೆ ಮಡಕೆಯನು ಕುಂಬಾರ ಮಾಡಿದನು ಕಷ್ಟದಿಂ ವರುಷದಲ್ಲಿ |













Click it and Unblock the Notifications