ಹನಿ ಪದ್ಯಗಳ ಮಾಲೆ... ಬಾಲಿವುಡ್‌ ಬಾಲೆಯರ ಮ್ಯಾಲೆ...


ಹನಿ ಪದ್ಯಗಳ ಮಾಲೆ... ಬಾಲಿವುಡ್‌ ಬಾಲೆಯರ ಮ್ಯಾಲೆ...
Malli Sannappanavar
ನರ್ಗೀಸ್‌

ರಾಜ್‌ಕಪೂರ್‌-ನರ್ಗೀಸ್‌
ಜನಪ್ರಿಯ ಜೋಡಿ ಎಂಬುದು
ಎಲ್ಲರಿಗೂ ಗೊತ್ತು !
ಅವಳು ಮೆಚ್ಚಿದ್ದು
ರಾಜಕಾರಣಿಯಾದ
ನಟ ಸುನಿಲ್‌ ದತ್ತು !!

*

ಸಾಯಿರಾಬಾನು

ಪಡೋಸನ್‌ ಚಿತ್ರದ
ಪಕ್ಕದ ಮನೆಯ
ಬೆಡಗಿ ಸಾಯಿರಾಬಾನು!
ಅವಳು ಮೆಚ್ಚಿದ್ದು
ದಿಲೀಪ್‌ಕುಮಾರ್‌ ಉರುಫ್‌
ಯೂಸುಫ್‌ ಖಾನು!!

*

ಶರ್ಮಿಳಾ ಟ್ಯಾಗೋರ್‌

ರೂಪ್‌ತೇರಾ ಮಸ್ತಾನಾ
ಹಾಡಿನ ಮಾದಕತೆಯ
ಬೆಂಗಾಳಿ ಬೆಡಗಿ!
ಅವಳು ಮೆಚ್ಚಿದ್ದು
ಟಗರುಗಣ್ಣಿನ
ಟೈಗರ್‌ ಪತೌಡಿ !!

*

ಜಯಾ ಬಚ್ಚನ್‌

‘ಗುಡ್ಡಿ’ ಚಿತ್ರದಿಂದ
ಜನಪ್ರಿಯಗೊಂಡ
ಜಯಾ ಭಾದುರಿ!
ಅವಳು ಮೆಚ್ಚಿದ್ದು
ಅಮಿತಾಭ್‌ ಅವನಿಗಿದೆ
ಈಗಲೂ ಬೇಡಿಕೆ ಭಾರಿ !!

*

ಹೇಮಾಮಾಲಿನಿ

ಡ್ರೀಮ್‌ಗರ್ಲ್‌ ಹೇಮಾಮಾಲಿನಿ
ಹುಟ್ಟಿದ್ದು ತಮಿಳುನಾಡಿನ
ತಿರುಚ್ಚಿ ಎಂಬ ಊರು!
ಅವಳು ಮೆಚ್ಚಿದ್ದು
ಧರ್ಮೇಂದ್ರ ಅವನೇ ‘ಶೋಲೆ’
ಚಿತ್ರದ ವೀರು!!

*

ಡಿಂಪಲ್‌ ಕಪಾಡಿಯಾ

ಬಾಬ್ಬಿ ಚಿತ್ರದಿಂದ
ಹುಡುಗರ ಹೃದಯಕ್ಕೆ
ಹಾಕಿದಳು ಕನ್ನ!
ಅವಳು ಮೆಚ್ಚಿದ್ದು
ಮಾಜಿ ಸೂಪರ್‌ಸ್ಟಾರ್‌
ರಾಜೇಶ್‌ ಖನ್ನಾ !!

*

ಶ್ರೀದೇವಿ

ಹಿಮ್ಮತ್‌ವಾಲಾದ
ಶ್ರೀದೇವಿ-ಜೀತೇಂದ್ರ
ಜೋಡಿಯಾಗಿತ್ತು ಸೂಪರ್‌!
ಅವಳು ಮೆಚ್ಚಿದ್ದು
ಬಾಲಿವುಡ್‌ನ ನಿರ್ಮಾಪಕ
ಬೋನಿ ಕಪೂರ್‌ !!

*

ಕಾಜೋಲ್‌

ಡಿ.ಡಿ.ಎಲ್‌.ಜೆ ಚಿತ್ರದಿಂದ
ಕಾಜೋಲ್‌ ಆದಳು
ಬಾಲಿವುಡ್‌ನ ನಂಬರ್‌ವನ್‌!
ಅವಳು ಮೆಚ್ಚಿದ್ದು
ಫೂಲ್‌ ಔರ್‌ ಕಾಂಟೇ ಚಿತ್ರದ
ಅಜೇಯ್‌ ದೇವಗನ್‌!!


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+