ಅಮೆರಿಕನ್ನಡಿಗರಾದ ನವದಂಪತಿಗಳ ಸಂವಾದ
| ಅಮೆರಿಕನ್ನಡಿಗರಾದ ನವದಂಪತಿಗಳ ಸಂವಾದ | |
| ಇದು ಸುಮಾರು 30 ವರ್ಷಗಳ ಹಿಂದಿನ ಕಥೆ. ಆಗಿನ ಕಾಲದಲ್ಲಿ ಸಾಧಾರಣವಾಗಿ ಹೆಚ್ಚು ಜನ ಕನ್ನಡಿಗ ಗಂಡಸರು ಈ ದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದು, ಕೆಲವು ವರ್ಷಗಳು ಕಳೆದ ನಂತರ ಕೆಲಸಕ್ಕೆ ಸೇರಿ, ಮತ್ತೆ ಕರ್ನಾಟಕಕ್ಕೆ ಹಿಂತಿರುಗಿ, ಮದುವೆ ಮಾಡಿಕೊಂಡು ಇಲ್ಲಿ ದಾಂಪತ್ಯಜೀವನವನ್ನು ಪ್ರಾರಂಭಿಸುತ್ತಿದ್ದರು. ಅಂಥವರಲ್ಲಿ ಒಬ್ಬ ತನ್ನ ಹೆಂಡತಿಯಾಡನೆ ನಡೆಸಿದ ಸಂವಾದ ಹೀಗಿರಬಹುದು. (ಕವಿ ಕೆ. ಎಸ್. ನರಸಿಂಹಸ್ವಾಮಿಯವರನ್ನು ನೆನೆದು ಓದಬಹುದು). | |
![]() |
ಆ ದೇಶ ಭಾರತವೊ ಈ ದೇಶ ಅಮೆರಿಕವೊ ಚೆಂದ ನಿನಗಾವುದೆಂದು. ದಿನದಿನವು ಅಡಿಗೆಯನು ಮಾಡುತ್ತ ಬಳಲಿರುವೆ ನನಗಿಂಥ ಕೆಲಸ ಸಾಕೋ; ನಮ್ಮೂರ ವಡೆಯಂತೆ ಇಲ್ಲಿಹುದು doughnutಉ ಅದನೇಕೆ ತಿನ್ನಲಾರೆ? ವಡೆಗೊಂದು ತೂತುಂಟು doughnutಗೂ ತೂತುಂಟು ರುಚಿಯಂತು ಬೇರೆ ಬೇರೆ; ದೋಸೆಯಂತಿರುವಂಥ pancakeಅ ತಿನ್ನೋಣ ನಾವೀಗ ಬೇಗ ಬಾರೇ! ದೋಸೆಯೂ ಚಪ್ಪಟೆಯೆ pancakeಉ ಚಪ್ಪಟೆಯೆ ರುಚಿಯಂತು ಬೇರೆ ಬೇರೆ; ಕೋಸಂಬ್ರಿಯಂತೆಯೇ spaghettiಉ ಇಲ್ಲಿಹುದು ಅದನಾದ್ರು ತಿನ್ನಬಾರೇ! ಕೋಸಂಬ್ರಿ ತಣ್ಣಗಿದೆ saladಉ ತಣ್ಣಗಿದೆ ರುಚಿಯಂತು ಬೇರೆ ಬೇರೆ; ಚಪಾತಿಯಂತೆಯೇ burrito ಸಿಕ್ಕುವುದು ನೀನದನು ತಿನ್ನ ಬಾರೇ! ಚಪಾತಿ ಮೆತ್ತಗಿದೆ burrito ಮೆತ್ತಗಿದೆ ರುಚಿಯಂತು ಬೇರೆ ಬೇರೆ; ನಮ್ಮ ಶಾವಿಗೆಯಂತೆ spaghetti ಇಲ್ಲಿಹುದು ಅದನೀಗ ತಿನ್ನ ಬಾರೇ! ಶಾವಿಗೆಯು ನೂಲ್ನಂತೆ, ಅಂತೆಯೇ spaghetti, ರುಚಿಯಂತು ಬೇರೆ ಬೇರೆ; ಏನೇನೆ ಹೇಳಿದರೂ ಅದಕೆ ಮಾರುತ್ತರವ ಕೊಡುತಲೇ ಬರುವೆಯೇನೆ? ಬೆಂಗಳೂರಿಗೆ ಬಂದು ಮೆಚ್ಚಿ ನನ್ನನು ನೀನು ಅಮೆರಿಕೆಗೆ ಕರೆದು ತಂದೆ; (ನಿಮ್ಮ ಗಮನಕ್ಕೆ : ಈ ಕವನವನ್ನು ವಾಷಿಂಗಟನ್ ಡಿ. ಸಿ. ಯ ಬಳಿಯ ಕಾವೇರಿ ಕನ್ನಡ ಸಂಘವು ನಡೆಸಿದ್ದ ಸಾಹಿತ್ಯೋತ್ಸವದಲ್ಲಿ ಮಾರ್ಚ್ 12, 2005-ರಂದು ವಾಚಿಸಿದ್ದೆನು. ಮತ್ತೆ ಈ ಕವನ ಕಾವೇರಿಯು ಜೂನ್ 2005-ರಲ್ಲಿ ಪ್ರಕಟಿಸಿರುವ ‘ಭಾವನದಿ’ಯಲ್ಲಿ ಪ್ರಕಟವಾಗಿದೆ. ಬೇರೆ ಎಡೆಗಳಲ್ಲಿ ವಾಸವಾಗಿರುವ ಕನ್ನಡಿಗರಿಗೆ ಓದಲು ಇಷ್ಟವಾಗಬಹುದೆಂಬ ಅಭಿಪ್ರಾಯದಿಂದ ಇದನ್ನು ದಟ್ಸ್‌ಕನ್ನಡಕ್ಕೆ ಅರ್ಪಿಸಿದ್ದೇನೆ) |













Click it and Unblock the Notifications