‘ಪಿತೃದೇವೋಭವ’
| ‘ಪಿತೃದೇವೋಭವ’ | |
| ಮಕ್ಕಳ ಪಾಲನೆ-ಪೋಷಣೆಯಲ್ಲಿ ಅಮ್ಮ ಕಾಣುವ ಕೈ ಆದರೆ, ಅಪ್ಪ ಕಾಣದ ಕೈ! ಜೂ.19ರಂದು ‘ವಿಶ್ವ ತಂದೆಯರ ದಿನ’. ಈ ಸಂದರ್ಭದಲ್ಲಿ ಅಪ್ಪನಿಗೊಂದು ಪ್ರೀತಿಯ ಕಾಣಿಕೆ ಇಲ್ಲಿದೆ. | |
![]() |
ನಿನಗೆ ನನ್ನ ಅನಂತ ಕೋಟಿ ನಮನ ಬಾಲ್ಯದ ನೆನಪಿನಾಳಂಗಳದಿ ಇಣುಕಿ ಸ್ಮರಿಸೆ, ನೀ ಕಲಿಸಿದ ಪಾಠ, ನೀತಿ, ಮಾರ್ಗದರ್ಶನ, ತೋರಿದ ವಾತ್ಸಲ್ಯ, ಮಮತೆ, ಎಡವಿ ಮುಗ್ಗುರಿಸಿದಾಗ ಎತ್ತಿಹಿಡಿಯುತಿದ್ದ ರೀತಿಗಳು, ಒಂದೇ ಎರಡೇ ಕರುಣೆಯ ಒಲುಮೆಗಳು ಮರೆಯಲಾಗದ ಮೈನವಿರೇಳಿಸುವ ಚಿರಸತ್ಯದ ಅನುಭವಗಳು ನೀ ನಡೆದು ತೋರಿದ ಜೀವನ ಸತ್ಯದ ಪಾಠವನು ಅಂದಿನಿಂದಲು ಅರೆಸುತ್ತಿಹೆ, ಬೀಳುತ್ತಿಹೆ, ಅರಸಿ,ಅರಸಿ, ಸೋಲುತ್ತಿಹೆ. ಜೀವನ ಸಾಗರದ ಆಳದಲ್ಲಿ, ವಿಧಿಯ ಲೀಲೆಯ ಅಡಿಯಲ್ಲಿ ಕಷ್ಟ, ಸುಖ, ನೋವು, ನಲಿವುಗಳಲ್ಲಿ ಪಯಣ ಮುಂದುವರೆಸಿದರೂ, ಎಷ್ಟೋ ಮೌಲ್ಯಗಳ ಎತ್ತರಕ್ಕೂ ಬೆಳೆದು ನಿಂತು ಕಾನನದ ಬಿಳಿಲುಗಳ ಸಂದಿನಲ್ಲೂ ತಡಕಾಡಿದರೂ, ನೀ ನಂದು ನೀಡಿದ ಒಲವಿನ ಅರೈಕೆ, ಉಣಿಸಿ ಬೆಳೆಸಿದ ಅತ್ಮ ವಿಶ್ವಾಸದ ಪರಿ ಮತ್ತೆಂದೂ ಸಿಗದು. ನಿನ್ನ ಈ ಮಗಳ ಬದುಕಿನ ಸಾಧನೆಯ ಮೆಟ್ಟಲಿಗೆ, |













Click it and Unblock the Notifications