ಹೇ ಗಾಂಧಿ, ಮಹಾಚೇತನ


ಹೇ ಗಾಂಧಿ, ಮಹಾಚೇತನ
Gandhiji
Sharath, New Jersey
  • ಶರತ್‌, ನ್ಯೂಜೆರ್ಸಿ, ಯುಎಸ್‌ಎ
    [email protected]
ಹೇ ಗಾಂಧಿ, ಮಹಾ ಚೇತನ,
ಮರೆತಿಲ್ಲ ನಾವು, ನೀನೆಂದಿಗೂ ನಮ್ಮವ,
ಬಂದೊಮ್ಮೆ ನೋಡು ಊರೂರಿನಲ್ಲಿರುವ
ನಿನ್ನ ಹೆಸರ ರಸ್ತೆಗಳ, ನಿನ್ನ ಅರೆ ಬತ್ತಲೆ ಮೂರ್ತಿಗಳ

ಹೇ ಗಾಂಧಿ, ಮಹಾ ಚೇತನ,
ಮರೆತಿಲ್ಲ ನಮ್ಮ ಯುವ ಪೀಳಿಗೆ ನಿನ್ನ,
ಕಟಕಿಯಾಡುತ್ತಾರೆ ನಿನ್ನ ಹೆಸರನಂಟಿಸಿ
ಬೇರೆಯವರ ನಿರ್ಮಲ ನಿಷ್ಕಂಳಕ ಗುಣವನಣಕಿಸಿ

ಹೇ ಗಾಂಧಿ, ಮಹಾ ಚೇತನ,
ಮರೆತಿಲ್ಲ ನಮ್ಮ ಜನ ಪ್ರತಿನಿಧಿಗಳು ನಿನ್ನ,
ಸರಿಪಡಿಸಿಕೊಳ್ಳುವಾಗೆಲ್ಲ ತಮ್ಮ ತಲೆಯ ಮೇಲಿನ ಟೋಪಿ
ನೆನಪಿಸಿಕೊಳ್ಳುವರು ನಿನ್ನ, ನೀ ಅವಕಾಶ ರೂಪಿ

ಹೇ ಗಾಂಧಿ, ಮಹಾ ಚೇತನ,
ಮರೆತಿಲ್ಲ ನೀನಿಷ್ಟಪಟ್ಟ ಮುದ್ದು ಮಕ್ಕಳು ನಿನ್ನ,
ನೆನೆಯುವವು ಅಕ್ಟೋಬರ್‌ ಎರಡರ ರಜೆಯ ದಿನ
ಪಠ್ಯ ಪುಸ್ತಕದ ಮೂಲೆಯಲ್ಲಿನ, ಆ ಬೊಚ್ಚು ನಗೆಯ ಚಿತ್ರವನ್ನ

ಹೇ ಗಾಂಧಿ, ಮಹಾ ಚೇತನ,
ಮರೆತಿಲ್ಲ ಜನ ಸಾಮಾನ್ಯರು ಮನರಂಜನೆಗಳ ನಡುವೆಯೂ ನಿನ್ನ
ನೆನೆಯುವರು ನೋಡಿ, ಚಲನ ಚಿತ್ರ ಮಂದಿರದ ಕಡಿಮೆ ಕಾಸಿನ
ಮುಂದಿನ ಸಾಲುಗಳಲಿ, ಕೂರುವ ಬಡ ಮಂದಿಯನ್ನ

ಮೇಲಿನೆಲ್ಲ ರೂಪಗಳಲ್ಲಷ್ಟೇ ನಿನ್ನುಳಿವಿಂದು ಸೀಮಿತ
ಸತ್ಯ, ಅಹಿಂಸೆ, ತಾಳ್ಮೆ ಮರೆತು ಹೋಗಿದೆ, ಹೇ ರಾಷ್ಟ್ರಪಿತ
ಕಳೆದುಹೋಗಿವೆಯೆಲ್ಲೋ ನೀ ಹೇಳಿದೆಲ್ಲ ಪಾಠಗಳು
ಬೆಳೆದು ನಿಂತಿವೆಯಷ್ಟೆ ಸುಳ್ಳು, ಸ್ವಾರ್ಥ, ರಕ್ತಪಾತಗಳು


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+