ಮಧುರ ಗೀತೆವಿಭಾನುvibhaanu& commat hotmail.comಕಳೆದು ಹೋಗುವ ಬಾರಾಸಂಸಾರದಿಂದ ಅತಿ ದೂರಾ।ಆಗಸಕೊಂದು ಏಣಿಯನಿಟ್ಟುನಿನ್ ಕೈಯಲಿ ನನ್ ಕೈಯನಿಟ್ಟುಮೆಟ್ಟಿಲಕೊಂದೊಂದು ಮುತ್ತನು ಕೊಟ್ಟುಏರುವ ಎಲ್ಲರನೂ ಇಲ್ಲೇ ಬಿಟ್ಟು।ಕಳೆದು ಹೋಗುವ ಬಾರಾಸಂಸಾರದಿಂದ ಅತಿ ದೂರಾ।ಮಾಮರಕೊಂದುಯ್ಯಾಲೆಯ ಕಟ್ಟಿನಿನ್ನೊಳು ಬೆಸೆದ ನನ್ನಯ ದೃಷ್ಟಿಬೇನೆ ದುಃಖಗಳನೆಲ್ಲ ಮೆಟ್ಟಿಜೀಕುವ ಮರೆತು ಹೊಟ್ಟೆಗೆ ರೊಟ್ಟಿ।ಕಳೆದು ಹೋಗುವ ಬಾರಾಸಂಸಾರದಿಂದ ಅತಿ ದೂರಾ।ತೆಪ್ಪದಿ ಕುಳಿತು ನದಿಯಲಿ ತೇಲಿಸಿಮುಗಿಲಿನ ಬಣ್ಣವ ನೀರಲಿ ವೀಕ್ಷಿಸಿಮೌನದಿ ಎದೆ ಬಡಿತಗಳನಾಲಿಸಿನನ್ನೊಳು ನೀನು ನಿನ್ನೊಳು ನಾನುಕಳೆದು ಹೋಗುವ ಬಾರಾಸಂಸಾರದಿಂದ ಅತಿ ದೂರಾ।ನಾವೇ ಕೊರೆದ ಹೆದ್ಧಾರಿಯಲಿಜೊತೆ ಜೊತೆಯಲಿ ಹೆಜ್ಜೆಯನ್ಹಾಕಿಚಿಮ್ಮುವ ನವರಸಗಳ ಹನಿಸುತನೀಗುವ ಚಿಂತೆಯ ಬವಣೆಗಳಕಳೆದು ಹೋಗುವ ಬಾರಾಸಂಸಾರದಿಂದ ಅತಿ ದೂರಾ।Post your viewsಮುಖಪುಟ / ಎನ್‌ಆರ್‌ಐ