ಜೀವನ ಪಥ


ಜೀವನ ಪಥ
Jeevana Patha Poem by Maya Harapanahalli
  • ಮಾಯಾ ಹರಪನಹಳ್ಳಿ,
    ಸಿಲ್ವರ್‌-ಸ್ರ್ಪಿಂಗ್‌, ಮೆರಿಲ್ಯಾಂಡ್‌.
    [email protected]
ಜೀವ ಭಾವ ಜೀವನದ ನಾಡಿ ಬಡಿತ
ಎಣೆಸುವರಾರು ಸುಖ-ದುಃಖದ ಮಿಡಿತ
ಹಣೆಬರಹ ಜಾತಕ ಜ್ಯೊತಿಷ್ಯದ ಸೆಳೆತ
ನಡೆಯುವದೆಲ್ಲ ದೈವ ಶಕ್ತಿಯ ಸಂಕೇತ

ಬೆಳ್ಳಿ ಪಥದಲ್ಲಿ ಗ್ರಹ ತಾರೆಯ ಚಲನ
ಆಕಾಶ ಗಂಗೆಯಲ್ಲಿ ರವಿ ಚಂದ್ರಯಾನ
ನಭೋಮಂಡಲದಲ್ಲಿ ಅನಂತ ಪಯಣ
ಮನುಷ್ಯನ ಆಯುಷ್ಯದ ಅಳತೆ ಪ್ರಮಾಣ?

ದೇವನ ನಾಟಕದಲ್ಲಿ ನಮ್ಮದು ಪಾತ್ರ
ನಾಟಕ ನೋಡಿ ನಕ್ಕು ಅಳುವದು ನೇತ್ರ
ಬಾಳಿನ ಅನುಬಂಧ ಸಂಬಂಧದ ಸೂತ್ರ
ಭಗವಂತ ಬಯಸಿ ಆಡಿಸುವವರೆಗೆ ಮಾತ್ರ

ಪಡೆದದ್ದು ಹಿಂದಿನ ಕರ್ಮದ ಫಲ
ಜನ್ಮ-ಜನ್ಮಾಂತರದ ತೀರದ ಸಾಲ
ನಶ್ವರತೆಯಲ್ಲಿ ಅತೀತವಾದ ಕಾಲ
ಈಶ್ವರ ನಿರಂತರ ನಾಮದ ಬಲ


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+