ದುಡಿದು ಸೋತ ಪರದೇಸಿಯ ಕಂಗ್ಳಿಷ್ ಕವನ
| ದುಡಿದು ಸೋತ ಪರದೇಸಿಯ ಕಂಗ್ಳಿಷ್ ಕವನ | |
![]() |
ಬ್ರೀಫ್ ಕೇಸ್ ಬಿಚ್ಚಿ ಕಂಪ್ಯೂಟರ್ ಹಚ್ಚಿ ಬಾತ್‌ರೂಂಗ್ ಓಡ್‌ತಾನೆ ಧಡಬಡ ಬಾತ್‌ರೂಂಗ್ ಓಡ್ತಾನೆ ಹೆಸರಿಗ್ ಮಾತ್ರ ಸಮ್ಯಕ್‌ಸರ್ಯಾಗ್ ಹಾಜರಾಗ್ ತಾನೆ ಬಾಸಿನ್ ಮುಂದೆ ಬಿಜಿ ಬಿಜಿಯಾಗಿ ಓಡಾಡ್ ತಿರ್ತಾನೆ ಕ್ಯಾಲ್‌ಕ್ಯುಲೇಷನ್ ಕಷ್ಟ ಆದ್ರೆ ಚೈನೀಸ್‌ನ್ ಹುಡುಕ್ ತಾನೆ ಯಾರ್ಯಾರೋ ಕಷ್ಟ್‌ಪಟ್ ಬರ್ದಿದ್ದನ್ನ ತಿದ್‌ಕೊಂಡ್ ಕೂರ್ತಾನೆ ಪವರ್ಪಾಯಿಂಟ್ ಉಪ್‌ಯೋಗಿಸ್‌ಕೊಂಡು ಪ್ರೆಸೆಂಟ್ ಮಾಡ್ತಾನೆ ಕಾಫೀ ರೂಂನಲ್ ಹುಡ್‌ಗೀರ್ಜೊತೇ ಚಕ್ಕಂದ ಹೊಡೀತಾನೆ ಹನ್ನೊಂದೂವರೆ ಆಗಕ್ಕಿಲ್ಲ ಲಂಚಿಗ್ ಹೊರಡ್ತಾನೆ ಫೋನಲ್ ಘಂಟೇ-ಗಟ್ಲೆ ಹರಟೇ ಕೊಚ್ತಾ ಕೂರ್ತಾನೆ ಸ್ಪ್ರಿಂಗು ಸಮ್ಮರು ಬಂತೂ ಅಂದ್ರೆ ಗಾಲ್ಫ್ ಆಡ್‌ತಾನೆ ವರ್ಷ-ವರ್ಷ ಪ್ರಮೋಷನ್ ಗಿಟ್‌ಸಿ ಮ್ಯಾನೇಜರ್ ಆಗ್‌ತಾನೆ ಬಾಸಿಗ್‌ಬೆಣ್ಣೆ ಹಚ್ಚಕ್ ಬರ್ದವ್‌ನ್ ಸ್ಪರ್ಧೇಲ್ ಸೋಲ್‌ತಾನೆ ಅಮೇರಿಕನ್ ಒಬ್ಬ ಕೆಲ್ಸ ಮಾಡಕ್ ಆಫೀಸ್‌ಗ್ ಬರ್ತಾನೆ (ಡಿ.3ರಂದು ಲಾಸ್ ಏಂಜಲೀಸ್‌ನಲ್ಲಿ ನಡೆದ ಕನ್ನಡ ಸಾಹಿತ್ಯರಂಗದ ಎರಡನೇ ಸಮ್ಮೇಳನದ ಸಾಹಿತ್ಯಗೋಷ್ಠಿಯಲ್ಲಿ ಓದಿದ ಕವನ) |













Click it and Unblock the Notifications