ನಾ ನಿನ್ನ ಮರೆವೆನೆ?

ವಿಹರಿಸುತಿದ್ದೆ ನನ್ನ ಕನಸಿನ ಲೋಕದಲ್ಲಿ.
ತನ್ನನ್ನು ನಾ ಮರೆತೆನೆಂದು ತಿಳಿದು,
ಕಳೆದ ವರುಷವು ಎಬ್ಬಿಸಿತು ನನ್ನ ತಿವಿದು
ಖಿನ್ನನಾಗಿ ಕೇಳಿತು ಎನ್ನ ಮರೆಯಲೇಕೆಂದು
ಹೊಸ ಕಾಲವು ಬರಲು ತನ್ನ ದೂರಮಾಡಲೇಕೆಂದು
ಹೇಳಿದೆ, ಅತ್ಯುತ್ತಮ ವರುಷ ನೀ ಎನಗೆ
ಮಾಡಿದೆ ಜೀವನ ಅನುಪಮ ಬೆಸುಗೆ
ಅನುಗ್ರಹಿಸಿದೆ ಅಪರೂಪದ ಚಿನ್ನವನ್ನು
ಎಂದೆಂದಿಗೂ ಆದರಿಸುವ ನನ್ನ ಪತಿಯನ್ನು.
ಅಯ್ಯೂ ಹುಚ್ಚಿ, ನಾ ನಿನ್ನ ಮರೆವೆನೆ!?












Click it and Unblock the Notifications