‘ಅಮ್ಮ’, ಮಹಾತ್ಯಾಗಿ ಅಮ್ಮ
| ‘ಅಮ್ಮ’, ಮಹಾತ್ಯಾಗಿ ಅಮ್ಮ | |
| ಅಮ್ಮನನ್ನು ಎಷ್ಟು ಗುಣಗಾನ ಮಾಡಿದರೂ ಸಾಲದು. ಅಮ್ಮ ನ ಆತಿಥ್ಯ ಎಲ್ಲರಿಗೂ ಒಂದಲ್ಲ ಒಂದು ಅನುಭವ ನೀಡಿರುವುದು ಶುದ್ಧ ಸತ್ಯ. ಏನನ್ನೂ ಬಯಸದ ಅಮ್ಮನ ಪ್ರೀತಿಗೆ ಅಮ್ಮನ ಪ್ರೀತಿಯೇ ಸಾಟಿ. ಆಕೆಯ ಋಣ ತೀರಿಸುವ ಮಾತು ತುಂಬಾ ದೊಡ್ಡದು. | |
![]() |
ನನ್ನ, ಆ ಸಮಯ ಬಂದಾಗ ಹೆತ್ತಿದ್ದೆ ಮಗುವ ಆ ಮುಗ್ಧ ಮುಖವ ನೋಡಿ ಸೋತಿದ್ದೆ ಮುಗುಳ್ನಗೆಯ ಮುಖದಿಂದ ಅಕ್ಕರೆಯ ಸುರಿದಿದ್ದೆ ‘ಅಮ್ಮಾ’ ಎಂಬ ಕರೆಗೆ ಅರಳಿದ ಮುಖದಿ ಅವಸರದಿ ಓಡೋಡಿ ಬಂದೆ ‘ಅತ್ತು’ ಅಬ್ಬರದ ಕರೆಗೆ ಅನುಕಂಪದಿ ಅಭಿಮಾನ ತೋರಿಸಿ ನಿಂತೆ ‘ಕಂದಾ’ ಎಂಬ ಕೂಗಿಗೆ ಅನುಕರಿಸಿದ ಕಾಲ್ಗಳ ಹೆಮ್ಮೆಯಿಂದ ನೋಡುತ್ತಾ ನಿಂತೆ ‘ಕೋಪ’ ಕೆಂಡದಷ್ಟಾದರೂ, ತಂಪನು ತರಿಸಿ ನಗುತ್ತಾ ನಗಿಸಿದೆ ಬೆಳೆದುದ್ದಕ್ಕೂ ಮೈಮರೆತು ಕಾಪಾಡಿದೆ ಬಂಧುಬಳಗವನು ಸ್ನೇಹದಲಿ ಕಾಣೆಂದೆ ಬರೆದು, ಓದುಗಳ ಪಾಠಕೆ ನೀ ಮೊದಲ ಗುರುವಾದೆ ಬೇಕು ಬೇಡಗಳಿಗೆ ಸನ್ಮಾರ್ಗವ ತೋರಿಸಿದೆ ಉಳ್ಳಲ್ಲಿ ಸಹಾಯವೆಸಗಿದರೆ ಒಳಿತೆಂದೆ ಉಪ್ಪು ತಿಂದಲ್ಲಿಗೆ ವಂಚಕತನ ವಲ್ಲೆ ಎಂದೆ ಉಳಿಸಲು ಸುಧರ್ಮ, ಸತ್ಸಂಗಗಳ ಯತ್ನವ ಮಾಡೆಂದೆ ಉರಿದು ಬೀಳುವವರಿಗೂ, ಮುಪ್ಪಿದ್ದರೆ, ಕ್ಷಮಿಸೆಂದೆ ‘ಅಮ್ಮಾ’ ನೀ ಮನುಕುಲದ ‘ಮಹಾತಾಯಿ’ಯಾದೆ ‘ಅಮ್ಮಾ’ ನೀ ಮಾನವೀಯತೆಯ ‘ಮೊದಲ ಪ್ರತಿನಿಧಿ’ಯಾದೆ ‘ಅಮ್ಮಾ’ ನೀ ಸರ್ವಜೀವಿಗಳ ಸಹೃದಯತೆಯ ‘ಸಾಕಾರ’ವಾದೆ ‘ಅಮ್ಮಾ’ ನಾ ನಿನಗೆ ಸದಾ ‘ಚಿರಋಣಿ’ ಯಾದೆ! |













Click it and Unblock the Notifications