ಅನಾದ್ಯನಂತ


ಈ ಕವನದ ವಸ್ತು ಇನ್ಫಿನಿಟಿ ಅಥವಾ ಅನಂತ. ಮೂರು ವಿಧದ ಅನಂತದ ಶ್ರೇಣಿಯನ್ನು ಗುರುತಿಸಿದ್ದೇನೆ - ಸೊನ್ನೆಯಿಂದ ಇನ್ಫಿನಿಟಿ ತನಕ, ನೆಗೆಟಿವ್‌ ಇನ್ಫಿನಿಟಿಯಿಂದ ಸೊನ್ನೆಯ ತನಕ, ಮತ್ತು ನೆಗಟಿವ್‌ ಇನ್ಫಿನಿಟಿಯಿಂದ ಇನ್ಫಿನಿಟಿ ವರೆಗೆ. ಗಣಿತ ಶಾಸ್ತ್ರ ಮತ್ತು ವಿಜ್ಞಾನದ ವಿವಿಧ ಕ್ಷೇತ್ರಗಳನ್ನೂ ಸೇರಿ, ನಮ್ಮ ಪರಿಸರವೆಲ್ಲ ಅನಂತದ ತತ್ತ್ವ, ಉದಾಹರಣೆ, ಮತ್ತು ಕರೆಗಳಿಂದ ತುಂಬಿದೆ. ಪರಿಮಿತ ಶಕ್ತಿ, ಇರವು, ಬಲ ಹೊಂದಿದ ಈ ಲೋಕದ ಜೀವಿಗಳು ದಿನೇ ದಿನೇ ಎದುರಿಸುವ ಅನಂತದ ತತ್ತ್ವಗಳೇ ನಮ್ಮ ನೇರ ಅನುಭವಕ್ಕೆ ಬರುವ ದೈವ ತತ್ತ್ವ ಎನ್ನುವುದೇ ಈ ಕವನದ ಸಾರಾಂಶ.
ಅನಾದ್ಯನಂತ
Anadyanantha poem by Jayarama K Udupa
ಅಂತ್ಯವಿಲ್ಲದ ಆದಿ, ಆದಿಇಲ್ಲದ ಅಂತ್ಯ,
ಆದಿ ಅರಿಯದ ಮೂಲ, ಕೊನೆಯು ಕಾಣದ ಅಂತ,
ಶುರುವು ಋಣಾನಂತ, ಮುಗಿವು ಘನಾನಂತ;
ಜೀವಜಾತಿಯ ಇರವು ಪರಿಮಿತಾದ್ಯಂತ,
ಕಾವ ಶಕ್ತಿಯ ಹರವು ಅನಾದ್ಯನಂತ.

ಸೃಷ್ಟಿ ತತ್ವದ ನಿಯಮ ಮರ್ತ್ಯ ಶಕ್ತಿಗೆ ಮಿಗಿಲು,
ವಿಶ್ವಾಖಿಲಾಂಡವಿಡಿ ಅಗ್ರಾಹ್ಯ ಮುಗಿಲು,
ಪಂಚಮಹಾಭೂತಗಳ ಸೆಲೆ ಅಮಿತ ಮಡಲು;
ಶಾಖ-ಶೀತ ದಿವ-ರಾತ್ರಿ ಘನ-, ಋಣ-ಅನಂತ,
ಅಜಾಂಡ ವ್ಯೋಮವದು ಅಮೇಯಾನಂತ.

ಸಂದು ಸಲ್ಲುವುದೊಂದೆ ಸಮಯ ಚರಕದ ಕಾರ್ಯ,
ನಿಲ್ಲದೆಂದೂ ಅದರ ಗತಿಯ ಚರ್ಯ;
ಮುಂದು ಬರಲಿದೆ ಎಂದೆ ಜೀವ ನಿಶ್ಚಿಂತ,
ಮೋಹ ಜಾಲದಿ ಬರಿಯೆ ಕಾಲವಾಂತ;
ಕಾಲದೋಗದ ಪರಿಯೆ ಅಜಸ್ರಾನಂತ.

ಗಾತ್ರ ಗಣಿಸದೆ ವೃತ್ತವ್ಯಾವುದನೆ ಕೊಡಲು,
ಕ್ಷೇತ್ರ ತುಂಬಲು ಬೇಕು ಅಮಿತ ಬಿಂದುಗಳಡಲು,
ಸೂತ್ರ ಗ್ರಹಿಸಲು ಸಾಕು ಅನಂತದ ಒಡಲು.
ಅಮಿತ-ಗಣಿತಗಳಲ್ಲಿ ಅರ್ಥ ಪ್ರತಿಕೂಲ!
ಗಣಿತ ಶಾಸ್ತ್ರದಲಿದೆ ಅಗಣಿತದ ಮೂಲ.

ಜೀವಜಂತುಗಳನಿಗೆ ಭಾವತಂತುವೆ ನಾಡಿ,
ನಿರ್ಭಾವ ಜೀವನವು ನೀರಸದ ಹಾಡಿ;
ಭಾವ ಚಿಲುಮೆಗೆ ಬೇಕು ನವರಸದ ಹವನ,
ರಸದ ಒಸರಿಗೆ ಬೇಕು ಮನದ ಹದ, ದಮನ;
ಭಾವಲೋಕದ ವಿಸರ ಅಪರಿಮಿತ ಕವನ.

ಸಪ್ತ ಲೋಕಗಳಲ್ಲಿ ಸತ್ಯ ಲೋಕವು ಮೇಲು,
ಸರ್ವ ಯುಗಯುಗಗಳಲಿ ಸತ್ಯ ಯುಗ ಮೊದಲು;
ಅಂಕೆಯಿಲ್ಲದ ಶುದ್ಧ ಸ್ವತಂತ್ರ ಸತ್ಯ
ಶೆಂಯಿಲ್ಲದೆ ಸಿದ್ಧಿಸಲಾಗದಿದು ತಥ್ಯ;
ಸಂಖೆಯಲಬದ್ಧ ಇದಕನಂತವೇ ಅಗತ್ಯ!

ದೇವರಿಹರಿಲ್ಲರೋ, ದಿವಿಯು ಇಹುದಿಲ್ಲವೋ,
ಇರುವ ಇರಾ ಪರಿಧಿಯಲಿ ಅನಂತದ ವ್ಯೋಮವೋ;
ಸೃಷ್ಟಿ ಶಕ್ತಿಯನಂತ, ಸತ್ಯ ಸಮಯವನಂತ,
ಭಾವ ಜ್ಞಾನವನಂತ, ಇವೇ ದೈವ ಅನಂತ;
ಅನಂತಾನಂತವೇ ಅನಾದ್ಯನಂತ.


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+