ಆರಾಧನೆ ಸುಕುಮಾರ ರಘುರಾಂsukumar_raghuram& commat yahoo.comಮಲ್ಲಿಗೆಯ ಬಳ್ಳಿಯಲಿ ಬೆಳ್ಳಿ ಎಳೆ ಸುಲಿದಾಗಚೈತ್ರ ಬರುತಿಹನೆಂದು ಉಷೆ ಕೆಂಪನುಟ್ಟಾಗಹುಡುಗ ಹುಡುಗಿಯರೆಲ್ಲ ಕಂಗಳಲೆ ನಕ್ಕಾಗಮಾಮರದ ಚಿಗುರೆಲೆಯ ಕೊನೆಯಲ್ಲಿ ಹಸಿರಿತ್ತುಕೋಗಿಲೆಯ ಕೊರಳಿನಲಿ ಮಾದಕತೆ ಮೆರೆದಾಗಚಿಟ್ಟೆಗಳ ನರ್ತನಕೆ ವೈಯ್ಯಾರ ಬೆರೆತಾಗಉಯ್ಯಾಲೆ ಜೀಕುತ್ತ ಮುತ್ತೊಂದು ಕಸಿದಾಗಮಾಮರದ ಹೂಗಳಲಿ ಹುಣ್ಣಿಮೆಯ ಹಾಲ್ಗನಸುಕಡಲ ನೀಲಿಯ ಸೊಗಸು ಮುಗಿಲಲ್ಲು ಕಂಡಾಗಸೂರ್ಯ ನಗುತಿಹನೆಂದು ಹೊಂಗೆಯಡಿ ಬೆಸೆದಾಗಮೆಲ್ಲುಸಿರ ಗಾನಕ್ಕೆ ಪ್ರಿಯಕರನು ಒಲಿದಾಗಮಾಮರದ ಕಾಯ್ಗಳಿಗೆ ಬಣ್ಣಗಳ ಬಯಕೆಗಳುಮೋಡಗಳ ಮರೆಯಿಂದ ಮಳೆಬಿಲ್ಲು ಇಳಿದಾಗಭಾವಗೀತೆಯ ಕವಿಗೆ ಗಾಯಕಿಯು ದೊರೆತಾಗಹಸಿಯಾಗಿ ಬಿಸಿಯಾಗಿ ಮೈಮನವು ಸೋತಾಗಮಾಮರದ ಹಣ್ಣುಗಳ ರಸದಲ್ಲಿ ಸಿಹಿಯಿತ್ತುPost your viewsಮುಖಪುಟ / ಎನ್‌ಆರ್‌ಐ