ಡ್ಯಾನ್‌ ಜೊತೆ ಅನು ಮದುವೆ ನಡೆಯುತ್ತಾ?


‘‘ಡ್ಯಾನ್‌, ಪೋಲಿಸರು ನಿನ್ನನ್ನು ಯಾಕೆ ವಿಚಾರಣೆ ಮಾಡಲು ಕರೆಯುವುದಿಲ್ಲ?’’

‘‘ತಮಾಷೆ ಮಾಡುತ್ತಿದ್ದೀಯ? ನನ್ನನ್ನು ಯಾಕೆ ವಿಚಾರಣೆ ಮಾಡುತ್ತಾರೆ?’’

‘‘ಆವತ್ತು ನಾನು ನಿನ್ನೊಂದಿಗೆ ಕೊನೆಯ ಸಲ ಮಾತನಾಡಿದಾಗ ನೀನು ದೀಪಕ್‌ನ ಕಾರನ್ನು ಗಮನಿಸುತ್ತ ಅಲ್ಲಿ ಕುಳಿತಿದ್ದೆ. ನಂತರ ಸಾಯಂಕಾಲ ಕೆಲಸದಿಂದ 8 ಗಂಟೆಗೆ ಹೊರಟೆ. ಆದರೆ ನನಗೆ 10 ಗಂಟೆಯವರೆಗೂ ಕರೆ ಮಾಡಲಿಲ್ಲ. ಅಷ್ಟೊತ್ತೂ ನೀನು ಎಲ್ಲಿದ್ದೆ? ಪವನ್‌ ಜೊತೆಗಾ? ಅಥವ, ಬಹುಶಃ ಬೇರೆ ಹೆಂಗಸಿನ ಜೊತೆಗಾ?’’

‘‘ನಾನು ಊಟ ತರಲು ಹೋಗಿದ್ದೆ. ಹುಚ್ಚುಚ್ಚಾಗಿ ಮಾತನಾಡಬೇಡ!’’

‘‘ಹ್ಞುಂ... ಯಾರ ಜೊತೆ? ಅದಕ್ಕೆ ನಿನಗೆ ಸಾಕ್ಷಿ ಯಾರು?’’

‘‘ಅನು, ಕೊಲೆ ಮಾಡಿ ಅದನ್ನು ಸ್ವಯಂರಕ್ಷಣೆ ಎಂದು ಹೇಳಿ ಬಚಾವಾಗುವುದು ಹೇಗೆ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದವಳು ನೀನು.’’

‘‘ಆದರೆ ಆ ಪ್ರಶ್ನೆಗಳಿಗೆಲ್ಲ ಉತ್ತರಗಳು ಇದ್ದದ್ದು ನಿನ್ನ ಹತ್ತಿರ!’’

ಆ ಮಾತಿನಿಂದ ಅವರಿಬ್ಬರಿಗೂ ನಗು ಬಂತು. ಜೋರಾಗಿ ನಗಲಾರಂಭಿಸಿದರು.

‘‘ಬಹುಶಃ ನಾವಿಬ್ಬರೂ ಮದುವೆಯಾಗುವುದು ಒಳ್ಳೆಯದು,’’ ಅವನು ಮುಸಿನಗುತ್ತ ಹೇಳಿದ. ‘‘ಆಗ ನಾವು ಒಬ್ಬರ ವಿರುದ್ಧ ಇನ್ನೊಬ್ಬರು ಸಾಕ್ಷ್ಯ ಹೇಳುವಂತೆ ಮಾಡಲು ಅವರಿಂದ ಆಗುವುದಿಲ್ಲ.’’

‘‘ಏನೂ? ಅಂದರೆ ಇದು ನಿನ್ನ ತಪ್ಪೊಪ್ಪಿಕೆಯೆ?’’

ಪೋಲಿಸ್‌ ರೇಡಿಯೋದಲ್ಲಿ ದೀಪಕ್‌ನ ಬಗ್ಗೆ ಕೇಳಿದಾಗ ನಾನು ಕಾರಿನಲ್ಲಿ ಕುಳಿತು ಊಟ ಮಾಡುತ್ತಿದ್ದೆ. ಅದನ್ನು ಈಗಾಗಲೆ ನಿನಗೆ ಹೇಳಿದ್ದೇನೆ.’’

‘‘ನಾನು ಡಿಟೆಕ್ಟಿವ್‌ ಅಲ್ಲ, ಡ್ಯಾನ್‌. ಅವರು ನಿನ್ನನ್ನು ಕೇಳಿದಾಗ ನೀನು ಇದನ್ನೆಲ್ಲ ವಿವರಿಸಬೇಕಾಗುತ್ತದೆ.’’

ಡ್ಯಾನ್‌ ರೂಮಿನಿಂದ ಹೊರಗೆ ಹೋದ. ಅವಳು ಕಂಪ್ಯೂಟರ್‌ ಅನ್ನು ಗಮನಿಸಿದಾಗ ಪವನ್‌ ಇನ್ನೂ ಆನ್‌ಲೈನ್‌ನಲ್ಲಿ ಇರುವುದು ಕಾಣಿಸಿತು.

ಅನು, ನೀನು ಬನಾರಸ್‌ಗೆ ಬಂದು ನನ್ನನ್ನು ಭೇಟಿಯಾಗುತ್ತೀಯ?

ಯಾಕೆ?

ನಾವು ಕಳೆದ ಹಳೆಯ ದಿನಗಳ ನೆನಪಿಗೋಸ್ಕರ. ಬನಾರಸ್‌ನಲ್ಲಿದ್ದಾಗ ನಾವಿಬ್ಬರೂ ಬೆಸ್ಟ್‌ಫ್ರೆಂಡ್ಸ್‌ ಆಗಿರುತ್ತೇವೆ ಎಂದು ಪರಸ್ಪರ ಮಾತು ಕೊಟ್ಟುಕೊಂಡಿದ್ದೆವು.

ಅಲ್ಲಿಗೆ ಬರುವುದರ ಬಗ್ಗೆ ಯೋಚಿಸುತ್ತೇನೆ, ಪವನ್‌. ಬೈ.

ಪವನ್‌ ಎಷ್ಟು ಸುಲಭವಾಗಿ ದೀಪಕ್‌ನ ಕೊಲೆ ಮಾಡಲು ಸಾಧ್ಯವೊ ಅಷ್ಟೇ ಸುಲಭವಾಗಿ ಡ್ಯಾನ್‌ನಿಂದಲೂ ಅದನ್ನು ಮಾಡಲು ಸಾಧ್ಯವಿತ್ತು. ಅವನು ಕಾರಿನಲ್ಲಿ ಸುಮ್ಮನೆ ತಿನ್ನುತ್ತ ಕುಳಿತಿದ್ದನು ಎನ್ನುವುದನ್ನು ನನ್ನಿಂದ ನಂಬಲಾಗುತ್ತಿಲ್ಲ. ಅಂದು ರಾತ್ರಿ ಅವನಿಂದ ಬಂದ ಸುಮಾರು ಏಳು ಕರೆಗಳನ್ನು ನಾನು ಮಿಸ್‌ ಮಾಡಿಕೊಂಡಿದ್ದೆ. ನಾನು ಯೋಗಾಭ್ಯಾಸಕ್ಕೆ ಹೋಗಿದ್ದ ಸಮಯದಲ್ಲಿ ಅವನು ತನ್ನ ಕಾರಿನಿಂದ 8 ಗಂಟೆಯಿಂದಲೆ ನನಗೆ ಕರೆ ಮಾಡಲು ಆರಂಭಿಸಿರಬೇಕು. ಅಥವ ಆ ಸಮಯದಲ್ಲಿ ಅವನು ಬೇರೊಬ್ಬಳ ಜೊತೆ ಇದ್ದಿರಲೂಬಹುದು. ಅವನೊಬ್ಬ ಬಿಳಿಯ. ಅವನು ನನ್ನನ್ನು ಮಾತ್ರ ಡೇಟ್‌ ಮಾಡುತ್ತಿದ್ದಾನೆ ಎಂದು ನಾನು ಯಾಕೆ ನಂಬಬೇಕು? ಈ ಅಮೇರಿಕನ್ನರು ಬೇರೆಯವರ ಜೊತೆ ಮಲಗುವುದು ನನಗೆ ಗೊತ್ತು.

‘‘ಡ್ಯಾನ್‌,’’ ಅವಳು ಕೂಗಿದಳು, ‘‘ಆವತ್ತು ರಾತ್ರಿ ನಿಜವಾಗಲೂ ನೀನು ಒಬ್ಬನೇ ಇದ್ದೆಯಾ?’’

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+