ಡ್ಯಾನ್‌ ಜೊತೆ ಅನು ಮದುವೆ ನಡೆಯುತ್ತಾ?


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ವಾರಾಂತ್ಯವನ್ನು ಪ್ರಶಾಂತವಾಗಿ ಕಳೆಯಲು ಆ ಕೇಸಿನ ಬಗ್ಗೆ ಸದ್ಯಕ್ಕೆ ಚರ್ಚಿಸುವುದು ಬೇಡವೆಂಬಂತೆ ಅವರಿಬ್ಬರೂ ತಾತ್ಕಾಲಿಕ ನಿಷೇಧ ಹೇರಿಕೊಂಡರು. ವಾರಾಂತ್ಯ ಹೆಚ್ಚಿನ ಗೊಂದಲಗಳಿಲ್ಲದೆ ಕಳೆಯಿತು. ಸೋಮವಾರದ ಮುಂಜಾನೆ ಪ್ರಕಾಶಮಾನವಾಗಿ ಪ್ರಾರಂಭವಾಯಿತು. ಹಾಗೆಯೆ ಬೇಗನೆಯೂ ಸಹ; ಬೆಳ್ಳಂಬೆಳಗ್ಗೆಯೆ ಡಿಟೆಕ್ಟಿವ್‌ ರಾಬರ್ಟ್ಸ್‌ ಡ್ಯಾನ್‌ನ ಸೆಲ್‌ಫೋನ್‌ಗೆ ಕರೆ ಮಾಡಿದ.

‘‘ನಿನಗೆ ಸುಮ್ಮನೆ ವಿಷಯ ತಿಳಿಸಲು ಕರೆ ಮಾಡಿದೆ. ನಾವೀಗ ವಿಮಾನ ನಿಲ್ದಾಣದಲ್ಲಿ ಇದ್ದೇವೆ. ಮಿಸ್ಟರ್‌ ರಮಾ...ನೂ...ಜಮ್‌ ತೆಗೆದುಕೊಂಡಿದ್ದ ಬಾಡಿಗೆ ಕಾರಿನಲ್ಲಿ ಇರಬೇಕಿದ್ದ ಟೈರ್‌ ರಾಡು ನಾಪತ್ತೆಯಾಗಿದೆ. ಆದರೆ ಅದು ಯಾವಾಗಿನಿಂದ ನಾಪತ್ತೆಯಾಗಿದೆ ಎಂದು ಕಾರು ರೆಂಟಲ್‌ ಏಜೆನ್ಸಿಯವರಿಂದ ಖಚಿತವಾಗಿ ಹೇಳಲಾಗುತ್ತಿಲ್ಲ. ಆತ ಹಿಂದಿರುಗಿಸಿದ ನಂತರ ಅದೇ ಕಾರನ್ನು ಮತ್ತೆ ಬಹಳಷ್ಟು ಜನ ಉಪಯೋಗಿಸಿದ್ದಾರೆ.’’

‘‘ಹಾಗಾದರೆ ಇದರ ಅರ್ಥ ಅವರೆಲ್ಲ ಹೋಟಲ್‌ನಿಂದ ರಾತ್ರಿ 10 ಗಂಟೆಗೆ ಹೊರಟರು ಮತ್ತು ಪವನ್‌ ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋದ ಎಂದು... ಕರೆ ಮಾಡಿದ್ದಕ್ಕೆ ಧನ್ಯವಾದ, ರಾಬರ್ಟ್ಸ್‌.’’

ಡ್ಯಾನ್‌ ಅನೂಳತ್ತ ತಿರುಗಿ ಅವಳಿಗೆ ಎಲ್ಲವನ್ನೂ ವಿವರಿಸಿದ. ಇದು ತುಂಬಾ ಕುತೂಹಲಕರವಾಗಿದೆ ಎಂದುಕೊಂಡಳು ಅವಳು. ಪವನ್‌ ಎರಡು ಗಂಟೆಗಿದ್ದ ವಿಮಾನದ ಸಮಯಕ್ಕೆ ಸರಿಯಾಗಿ ಹೋಗಿದ್ದಾನೆ, ಅಲ್ಲವೆ?

‘‘ನಿನಗೆ ಈ ಮಧ್ಯೆ ಪವನ್‌ ಎಷ್ಟು ಚೆನ್ನಾಗಿ ಗೊತ್ತು?’’

‘‘ಬಹಳ ಚೆನ್ನಾಗಿ.’’ ಆದರೆ ಅದು ಸುಳ್ಳಾಗಿತ್ತು. ಈ ಮಧ್ಯೆ ಅವನಿಂದ ಅವಳಿಗೆ ಯಾವುದೆ ಪತ್ರಗಳು ಬರುತ್ತಿರಲಿಲ್ಲ. ಫೋನ್‌ ಕರೆಗಳೂ ಇರಲಿಲ್ಲ. ಪವನ್‌ನ ಜೊತೆ ಇಂಟರ್‌ನೆಟ್‌ನಲ್ಲಿ ಚಾಟ್‌ ಮಾಡಲು ಅವಳು ರೂಮಿನತ್ತ ಎದ್ದು ಹೋಗುತ್ತಿದ್ದಾಗ ಅವಳ ಎದೆ ವಿಪರೀತವಾಗಿ ಹೊಡೆದುಕೊಳ್ಳುತ್ತಿತ್ತು.

‘‘ಅವನ ತಾಯಿ ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗಿದ್ದರು ಹಾಗೂ ಆತ್ಮಹತ್ಯೆ ಮಾಡಿಕೊಂಡರು ಎಂದು ನೀನು ಹೇಳಿದ್ದೆ ಅಲ್ಲವೆ?’’

‘‘ನೀನು ಏನು ತಿಳಿದುಕೊಳ್ಳಬೇಕು, ಡ್ಯಾನ್‌?’’ ಅವಳು ಮೆಸ್ಸೆಂಜರ್‌ನ ಚ್ಯಾಟ್‌ ವಿಂಡೋದಲ್ಲಿ ಟೈಪು ಮಾಡುತ್ತ ಡ್ಯಾನ್‌ನತ್ತ ತಿರುಗಿ ಕೇಳಿದಳು:

‘‘ಪವನ್‌, ನೀನು ದೀಪಕ್‌ನನ್ನು ಯಾವ ಸಮಯದಲ್ಲಿ ಅಗಲಿದೆ ಎಂದು ಹೇಳಿದ್ದು?’’

‘‘ನನಗೆ ನೆನಪಿಲ್ಲ ಎಂದಷ್ಟೆ ನಾನು ಹೇಳಿದ್ದು’’ ಪವನ್‌ ಪರೀಕ್ಷಿಸುವ ರೀತಿಯಲ್ಲಿ ಜವಾಬು ಕೊಟ್ಟ.

‘‘ಅಂದು ನಿಮ್ಮ ಜೊತೆಯಿದ್ದವರು 10ಕ್ಕೆ ಅಲ್ಲಿಂದ ಬಿಟ್ಟೆವು ಎಂದು ಹೇಳುತ್ತಿದ್ದಾರೆ.’’

‘‘ಹಾಗಿದ್ದರೆ ನಾನೂ ಸಹ 10 ಗಂಟೆಗೇ ಬಿಟ್ಟಿದ್ದೇನೆ.’’

ಹಾಲ್‌ನಲ್ಲಿದ್ದ ಡ್ಯಾನ್‌ ಅಲ್ಲಿಂದಲೆ ಹೇಳಿದ. ‘‘ಅನು, ಇದು ಗಂಭೀರವಾದ ವಿಷಯ. ನಿನ್ನ ಸ್ನೇಹಿತ ಪವನ್‌ಗೆ ಇಲ್ಲಿ ಒಂದು ಉದ್ದೇಶ ಇತ್ತು...’’

‘‘ಡ್ಯಾನ್‌, ಕೊಲೆ ಮಾಡುವ ಉದ್ದೇಶವಿದ್ದ ಹೊಸಹೊಸ ಸಂಶಯಾಸ್ಪದರು ನಿನಗೆ ನಿಮಿಷಕ್ಕೊಬ್ಬರಂತೆ ಕಾಣಿಸುತ್ತಿದ್ದಾರೆ. ಪವನ್‌ನ ತಾಯಿ ಸತ್ತರೆ ಅದಕ್ಕೆ ಅವನು ಅವರಪ್ಪನನ್ನು ಕೊಲ್ಲುತ್ತಾನೆಯೆ ಹೊರತು ದೀಪಕ್‌ನನ್ನು ಅಲ್ಲ.’’

‘‘ಪವನ್‌, ನೀನು 101 ಮಾರ್ಗ ತೆಗೆದುಕೊಂಡೆ, 280 ಅಲ್ಲ... ’’ ಅವನಿಗೆ ಸ್ವಲ್ಪ ಹೆಚ್ಚಿನ ಸಮಯ ಕೊಡಲು ಬೇಕೆಂತಲೆ ಅದನ್ನು ಪುನರಾವರ್ತಿಸಿದಳು.

‘‘ಅದನ್ನೆ ನಾನು ಹೇಳಿದ್ದು.’’

‘‘ಸರಿ, ನಾನೀಗ ಹೋಗಬೇಕು.’’ ಅವಳು ಈಗ ರೂಮಿನಲ್ಲಿಯೆ ಇದ್ದ ಡ್ಯಾನ್‌ನತ್ತ ತಿರುಗಿದಳು. ಅವನು ಬಚ್ಚಲು ಮನೆಗೆ ಹೋಗಿಬರುವ ನೆವದಲ್ಲಿ ಅವಳ ಸುತ್ತಲೆ ಸುಳಿದಾಡುತ್ತಿದ್ದನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+