ದೀಪಕ್‌ ಕಂಪನಿಯಲ್ಲಿ ಪವನ್‌ ಕೆಲಸಕ್ಕೆ ಸೇರಿದ್ದೇಕೆ?


ನೀನು ದೀಪಕ್‌ನನ್ನು ಕೊನೆಯ ಬಾರಿ ನೋಡಿದ್ದು ಯಾವಾಗ?

ಊಟ ಮಾಡುವಾಗ, ರೆಸ್ಟಾರೆಂಟ್‌ನಲ್ಲಿ.

ನೀನು ಯಾವ ಸಮಯಕ್ಕೆ ಅಲ್ಲಿಂದ ಬಿಟ್ಟೆ?

ನನಗೆ ನೆನಪಿಲ್ಲ.

ಹೌದು, ನಿನಗೆ ಗೊತ್ತು, ಅವಳು ತನ್ನಷ್ಟಕ್ಕೆ ಅಂದುಕೊಂಡಳು. ಆ ರೆಸ್ಟಾರೆಂಟಿನಿಂದ ವಿಮಾನ ನಿಲ್ದಾಣಕ್ಕೆ 101 ಫ್ರೀವೇಯಲ್ಲಿ ಹೋದರೆ 40 ನಿಮಿಷಗಳಾಗುತ್ತದೆ, 280 ಫ್ರೀವೇಯಲ್ಲಿ ಹೋದರೆ ಒಂದು ಗಂಟೆ ತೆಗೆದುಕೊಳ್ಳುತ್ತದೆ.

ವಿಮಾನ ನಿಲ್ದಾಣಕ್ಕೆ 280 ಮಾರ್ಗ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಅವಳು ಟೈಪ್‌ ಮಾಡಿದಳು.

ಅವನು ಹೆಚ್ಚು ಸಮಯ ತೆಗೆದುಕೊಳ್ಳುವ ರಸ್ತೆಯನ್ನು ಆಯ್ದುಕೊಂಡ ಎನ್ನುವುದನ್ನು ಅವನು ಒಪ್ಪಿಕೊಳ್ಳಲು ಹಾಗೆ ಪರೋಕ್ಷವಾಗಿ ಹೇಳುವುದರ ಮೂಲಕ ಅವಳು ಪ್ರೇರೇಪಿಸುತ್ತಿದ್ದಾಳೆಯೆ? ಅವನು ಆ ರಸ್ತೆಯನ್ನೇನಾದರೂ ತೆಗೆದುಕೊಂಡಿದ್ದರೆ, ದೀಪಕ್‌ನನ್ನು ಅವನ ಮನೆಯ ತನಕ ಹಿಂಬಾಲಿಸಿ, ನಂತರ ತನ್ನ ವಿಮಾನದ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಹೋಗಲೂ ಸಾಧ್ಯ ಆಗಿರುತ್ತದೆ.

ಹೌದು.

ಆದರೆ 101 ಮಾರ್ಗ ಹತ್ತಿರದ್ದು.

ಬಚ್ಚಲು ಮನೆಯಲ್ಲಿ ನೀರು ನಿಂತಿದ್ದು ಅವಳಿಗೆ ಕೇಳಿಸಿತು. ಡ್ಯಾನ್‌ ತನ್ನ ಸ್ನಾನ ಮುಗಿಸಿದ್ದ.

ನನಗೆ ಅಮೇರಿಕದಲ್ಲಿ ರಸ್ತೆಗಳು ಸರಿಯಾಗಿ ಗೊತ್ತಿಲ್ಲ. ನಾನು ನನಗೆ ಗೊತ್ತಿದ್ದ ಮಾರ್ಗವನ್ನು ಮಾತ್ರ ತೆಗೆದುಕೊಂಡೆ.

ಪವನ್‌, ನಾನು ಈಗ ಹೋಗಬೇಕು. ಪಿಜ್ಜಾ ಡೆಲಿವರಿ ಮಾಡುವ ಮನುಷ್ಯ ಬಂದಿದ್ದಾನೆ. ಅವನಿಗೆ ಅಲ್ಲಿ ಡ್ಯಾನ್‌ ಸಹ ಇದ್ದಾನೆ ಎಂದು ಹೇಳುವ ಧೈರ್ಯ ಮಾಡಬೇಡ!

ಯೋಗಕ್ಷೇಮ ನೋಡಿಕೊ, ಅನು. ನಾನು ಚೆನ್ನಾಗಿದ್ದೇನೆ. ಯೋಚನೆ ಮಾಡಬೇಡ.

ವಾವ್‌, ಎಂತಹ ಮಾತನ್ನು ಹೇಳಿದೆ! ನನ್ನ ಮಾಜಿ ಗಂಡ ನಿಗೂಢವಾಗಿ ಸತ್ತ ದಿನ ಒಬ್ಬಳನ್ನೆ ಬಿಟ್ಟು ನೀನು ಭಾರತಕ್ಕೆ ಹಾರಿ ಹೋದೆ. ಈಗ ಯೋಚನೆ ಮಾಡಬೇಡ ಎಂದು ಹೇಳುತ್ತಿದ್ದೀಯ? ಅಥವ, ಅವನಿಗೇನೂ ಆಗುವುದಿಲ್ಲ ಎನ್ನುವುದನ್ನು ಸೂಚಿಸುತ್ತಿದ್ದಾನೆಯೆ? ಫೋರೆನ್ಸಿಕ್‌ನವರಿಗೆ ಕಬ್ಬಿಣದ ರಾಡಿನ ಮೇಲೆ ಯಾವುದೇ ಹಸ್ತಮುದ್ರೆ ಸಿಕ್ಕಿಲ್ಲ. ಇವನು ದರಿದ್ರ ಹಾಳಾದ್ದು ಏನು ಮಾಡಿರಬಹುದು? ಅನು ತನ್ನ ಕಂಪ್ಯೂಟರ್‌ ಅನ್ನು ಶಟ್‌ಡೌನ್‌ ಮಾಡಿದಳು.

‘‘ಡ್ಯಾನ್‌, ನೀನು ಇಡೀ ದಿನ ಕೆಲಸ ಮಾಡಿ ಸುಸ್ತಾಗಿದ್ದೀಯ ಎಂದು ನನಗೆ ಗೊತ್ತು. ಆದರೆ ಈಗ ಯಾವುದಾದರೂ ಸಿನಿಮಾಗೆ ಹೋಗಲು ನಿನಗೇನಾದರೂ ಅಭ್ಯಂತರವಿದೆಯಾ?’’ ಇದರ ಬಗ್ಗೆ ಇನ್ನು ಯಾವ ಸಂಭಾಷಣೆಗೂ ಆಸ್ಪದವಿಲ್ಲದಂತೆ ಥಿಯೇಟರಿನ ಕತ್ತಲಿನಲ್ಲಿ ಕುಳಿತುಕೊಂಡು ಮತ್ತೆ ಇದೆಲ್ಲವನ್ನೂ ಕೂಲಂಕುಷವಾಗಿ ಯೋಚಿಸುವುದು ಹೆಚ್ಚು ಹಿತಕರವಾದದ್ದು.

‘‘ಪರವಾಗಿಲ್ಲ, ನಾನು ಬರುತ್ತೇನೆ,’’ ಅವನೆಂದ. ‘‘ನನ್ನ ಮನಸ್ಸಿಗೂ ಇದರಿಂದ ಬಿಡುಗಡೆ ಬೇಕು. ನನಗೆ ಬಹಳ ಆಯಾಸವಾಗಿದೆ, ಆದರೂ ನನಗೆ ನಿದ್ದೆ ಬರುವುದಿಲ್ಲ ಎಂದು ನನಗೆ ಗೊತ್ತು. ಇದೆಲ್ಲ ಮುಗಿಯುವ ತನಕ ನಾನು ನಿನ್ನನ್ನು ನೋಡುವುದು ನಮ್ಮವರಿಗೆ ಬೇಕಾಗಿಲ್ಲ. ಆದರೆ ನಾನು ಅದನ್ನು ಲೆಕ್ಕಿಸುವುದಿಲ್ಲ. ನನಗೆ ನಿನ್ನ ಜೊತೆ ಇರುವುದು ಬೇಕು.’’

‘‘ಬಹಳ ಧನ್ಯವಾದ, ಡ್ಯಾನ್‌. ನಾವಿಬ್ಬರೂ ಹೊರಗೆ ಹೋಗಿ ಸುತ್ತಾಡಿಕೊಂಡು ಬರುವುದು ನಮ್ಮಿಬ್ಬರಿಗೂ ಒಳ್ಳೆಯದು.’’

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+