ದೀಪಕ್‌ ಕಂಪನಿಯಲ್ಲಿ ಪವನ್‌ ಕೆಲಸಕ್ಕೆ ಸೇರಿದ್ದೇಕೆ?


ಎಲ್ಲಾ ನೌಕರರಿಗೆ,

ನಮ್ಮ ಕಂಪನಿಯ ಅಮೂಲ್ಯವಾದ ಜನರಲ್ಲಿ ಒಬ್ಬರಾಗಿದ್ದ, ನಮ್ಮ ವಿಶ್ವವ್ಯಾಪಿ ಮಾರಾಟ ವಿಭಾಗದ ಉಪಾಧ್ಯಕ್ಷ ಶ್ರೀ ದೀಪಕ್‌ ರಂಜನ್‌ರನ್ನು ನಾವು ಕಳೆದುಕೊಂಡೆವೆಂದು ನಿಮಗೆ ತಿಳಿಸಲು ವಿಷಾದಿಸುತ್ತೇವೆ. ಅವರು ನೆನ್ನೆ ರಾತ್ರಿ ತೀರಿಕೊಂಡರು. ಅವರು ತಮ್ಮ ಶ್ರೀಮತಿ ರೂಪ ರಂಜನ್‌ರನ್ನು ಅಗಲಿದ್ದಾರೆ.

ಶವ ಸಂಸ್ಕಾರದ ಸ್ಥಳ ಹಾಗು ಸಮಯವನ್ನು ನಿಮಗೆ ನಂತರ ತಿಳಿಸುತ್ತೇವೆ.

ಆದರದಲ್ಲಿ,
ಫ್ರ್ಯಾಂಕ್‌ ಸಿಲ್ವರ್‌ಮನ್‌
ಅಧ್ಯಕ್ಷರು ಹಾಗು ಸಿಇಓ

ನನಗೆ ಇದನ್ನು ನಂಬಲಾಗುತ್ತಿಲ್ಲ, ಪವನ್‌ ಮುಂದುವರಿಸಿದ್ದ. ನಾನು ಅದೆ ದಿನ ರಾತ್ರಿ ಆತನನ್ನು ನೋಡಿದ್ದೆ. ಹಾಗು ಅವನ ಜೊತೆಯೆ ಊಟವನ್ನೂ ಮಾಡಿದ್ದೆ. ಅದಾದ ಮೇಲೆ ನಾನು ವಿಮಾನ ನಿಲ್ದಾಣಕ್ಕೆ ತೆರಳಿದೆ. ಓಹ್‌! ನಮ್ಮ ಸರದಿ ಯಾವಾಗ ಬರುತ್ತದೆ ಎಂದು ನಮಗೆ ಎಂದೂ ಗೊತ್ತಾಗುವುದಿಲ್ಲ.

‘‘ಇದನ್ನು ಡಿಲೀಟ್‌ ಮಾಡಬೇಡ,’’ ಡ್ಯಾನ್‌ ನಿಟ್ಟುಸಿರು ಬಿಟ್ಟ. ‘‘ಪಿಜ್ಜಾ ಬರುವುದಕ್ಕಿಂತ ಮುಂಚೆ ನಾನು ಸ್ನಾನ ಮುಗಿಸಿಕೊಂಡು ಬಂದುಬಿಡುತ್ತೇನೆ.’’

‘‘ಸರಿ.’’ ಅವನು ಬಾತ್‌ರೂಮಿನ ಕಡೆ ಹೋಗುವುದನ್ನೆ ನೋಡಿ, ಅವನು ಮರೆಯಾದ ತಕ್ಷಣ ಲ್ಯಾಪ್‌ಟಾಪಿನತ್ತ ತಿರುಗಿ ಪವನ್‌ ಆನ್‌ಲೈನಿನಲ್ಲಿ ಇರುವನೇನೊ ಎಂದು ತಿಳಿದುಕೊಳ್ಳಲು ಮೆಸ್ಸೆಂಜರ್‌ಗೆ ಲಾಗಿನ್‌ ಆದಳು. ಅವನು ಇದ್ದ!

ಪವನ್‌, ಇದ್ದಿಯಾ? ಅವಳು ಯಾಹೂ! ಮೆಸೆಂಜರ್‌ನಲ್ಲಿ ಟೈಪ್‌ ಮಾಡಿದಳು.

ಹೌದು.

ನೀನು ಆ ಸಂಜೆ ದೀಪಕ್‌ನ ಜೊತೆಯಲ್ಲಿ ಯಾಕಿದ್ದೆ?

ನಮ್ಮ ಕಂಪನಿಯ ವಿಶ್ವವ್ಯಾಪಿ ಸೇಲ್ಸ್‌ ಕಾನ್ಫರೆನ್ಸ್‌ಗಾಗಿ. ನಾನು ಅವನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.

ಏನು? ಯಾವಾಗಿನಿಂದ?

ಈಗ ಸುಮಾರು ಎರಡು ತಿಂಗಳಿನಿಂದ.

ಯಾಕೆ?

ಅವರು ಭಾರತದಲ್ಲಿ ಒಬ್ಬ ಪ್ರಾದೇಶಿಕ ಸೇಲ್ಸ್‌ ಮ್ಯಾನೆಜರ್‌ಗಾಗಿ ಹುಡುಕುತ್ತಿದ್ದರು.

ಯಾಕೆ, ಪವನ್‌? ನಿನಗೆ ಅವನ ಬಗ್ಗೆ ಎಲ್ಲ ತಿಳಿದ ಮೇಲೂ ಅವನ ಜೊತೆ ಯಾಕೆ ಕೆಲಸ ಮಾಡುತ್ತಿದ್ದೆ?

ಅದು ಒಳ್ಳೆಯ ಕಂಪನಿ.

ಇಲ್ಲ... ಇಲ್ಲಿ ಅದಕ್ಕಿಂತ ಹೆಚ್ಚಿನ ಕಾರಣಗಳಿವೆ ಎಂದು ನನಗೆ ಖಂಡಿತವಾಗಿ ಗೊತ್ತು... ಯಾಕೆ ಎಂದು ಹೇಳು ನನಗೆ.

ಪವನ್‌ ಉತ್ತರಿಸಲಿಲ್ಲ. ಅದು ಅವನ ಶೈಲಿ... ಸುಮ್ಮನೆ ಇದ್ದುಬಿಡುವುದು.

ಅದಕ್ಕೆ ಕಾರಣಗಳಿದ್ದವು ಎಂದು ಅವಳಿಗೆ ಗೊತ್ತು. ಅವನು ದೀಪಕ್‌ನ ಸಂಸ್ಥೆಯಲ್ಲಿ ಕೆಲಸ ಹುಡುಕಲು ಹೋಗಿದ್ದು ಯಾಕೆಂದರೆ ದೀಪಕ್‌ ಒಬ್ಬನೆ ಒಂಟಿಯಾಗಿ ಕೈಗೆ ಸಿಗುತ್ತಾನೆ ಎಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+