ಅಸಿತಾ ಪ್ರಭುಶಂಕರ : ಒಂದು ಕಿರುಪರಿಚಯ

ತಂದೆ-ತಾಯಿಗಳ ಆಶಯದಂತೆ ಅಸಿತಾ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇ.,(ಕಂಪ್ಯೂಟರ್ ಇಂಜಿನೀಯರಿಂಗ್) ಪದವಿ ಪಡೆದರು. 1988ರಲ್ಲಿ ಬಿ.ಇ., ಪದವಿ ಮುಗಿದ ನಂತರ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ತೆರಳಿದರು. ಸ್ಯಾನ್ ಹೋಸೆ ಸ್ಟೇಟ್ ವಿಶ್ವವಿದ್ಯಾಲಯದಿಂದ ಎಂ.ಎಸ್.,(ಎಲೆಕ್ಟ್ರಿಕಲ್ ಇಂಜಿನೀಯರಿಂಗ್) ಪದವಿ ಗಳಿಸಿದರು. ವಿದ್ಯಾಭ್ಯಾಸ ಮುಂದುವರಿಸಿದ ಅವರು, ಫೀನಿಕ್ಸ್ ವಿಶ್ವವಿದ್ಯಾಲಯದಿಂದ ಎಂ.ಬಿ.ಎ., ಪದವಿಯನ್ನೂ ಪಡೆದರು.
ಓದು ಮುಗಿದ ನಂತರ ಸ್ಯಾನ್‌ಫ್ರ್ಯಾನ್ಸಿಸ್ಕೋ ಬೇ ಏರಿಯಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಐಬಿಎಂ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. 1992ರಿಂದ 'ಮೈತ್ರಿ" ಎಂಬ ಸಂಸ್ಥೆಯ ಸ್ವಯಂ ಸೇವಾ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ.
ದಕ್ಷಿಣ ಏಷ್ಯಾದಿಂದ ವಲಸೆ ಬಂದು, ಅಮೆರಿಕಾದಲ್ಲಿ ನೆಲೆಸಿ, ಗಂಡಂದಿರ ಕಿರುಕುಳ ಅನುಭವಿಸುತ್ತಿರುವ ಮಹಿಳೆಯರಿಗೆ ನೆರವು ನೀಡಲು ಹುಟ್ಟಿಕೊಂಡಿರುವ ಸಂಸ್ಥೆಯೇ ಮೈತ್ರಿ. ಅಸಿತಾ ಆ ಮೂಲಕ ಮಾನವೀಯ ಮೈತ್ರಿಗೆ ಧ್ವನಿ ನೀಡುತ್ತಿದ್ದಾರೆ. ಮೈತ್ರಿಯಲ್ಲಿ ಒಬ್ಬ ಕಾರ್ಯಕರ್ತೆಯಾಗಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಡೆದ ಗಾಢ ಅನುಭವ, ವೈಚಾರಿಕತೆ ಅವರ ಈ ಕಾದಂಬರಿಯಲ್ಲಿ ಪಾತ್ರಗಳ ರೂಪದಲ್ಲಿ ಮೂಡಿಬಂದಿದೆ. ಅವರ ಅನುಭವಗಳನ್ನು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ 2004ರ ಸ್ವರ್ಣಸೇತು ವಾರ್ಷಿಕ ಸಂಚಿಕೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಮಹಿಳೆಯರ ಸಬಲೀಕರಣ ಕುರಿತ ಅನೇಕ ಲೇಖನಗಳು ಪ್ರಕಟವಾಗಿವೆ. ಪ್ರಸ್ತುತ ಅವರು ಸ್ಯಾನ್ ಹೋಸೆಯಲ್ಲಿ ಪತಿಯಾಂದಿಗೆ ವಾಸಿಸುತ್ತಿದ್ದಾರೆ.












Click it and Unblock the Notifications