ಡ್ಯಾನ್‌ ತೆಕ್ಕೆಯಲ್ಲಿ ಕರಗಿದ ಅನುಗೆ ಗಂಡ ನೆನಪಾದ!


ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ವಿಮಾನ ನಿಂತ ಮೇಲೂ ಅದರಿಂದ ಕೆಳಕ್ಕಿಳಿಯುವುದಕ್ಕೆ ಯಾಕೆ ಇಷ್ಟು ಹೊತ್ತು ತೆಗೆದುಕೊಳ್ಳುತ್ತದೆ? ನಮ್ಮ ಸೀಟಿನಿಂದ ಅವಸರವಸರದಲ್ಲಿ ಎದ್ದು, ತಲೆಯ ಮೇಲೆ ಇಟ್ಟಿರುವ ಲಗ್ಗೇಜನ್ನು ಒಬ್ಬರ ಮೇಲೊಬ್ಬರು ಪೈಪೋಟಿ ಮಾಡುತ್ತ ಕೆಳಗೆ ಇಳಿಸಿಕೊಳ್ಳುತ್ತೇವೆ. ನಂತರ? ಅಲ್ಲೆ ಸುಮ್ಮನೆ ಯುಗಗಳಾದವೇನೊ ಎನ್ನುವಷ್ಟು ಹೊತ್ತು ಕಾಯುತ್ತ ನಿಲ್ಲುತ್ತೇವೆ.

ವಿಮಾನದ ಬಾಗಿಲು ತೆರೆಯಲು ಕಾಯುತ್ತ, ಏನಾದರೂ ಸಂದೇಶಗಳಿವೆಯೆ ಎಂದು ಅನು ತನ್ನ ಸೆಲ್‌ಫೋನನ್ನು ಪರೀಕ್ಷಿಸಿದಳು. ವಾರದವಧಿಯ ಈ ಪ್ರವಾಸದ ನಂತರ ಅವಳು ಡ್ಯಾನ್‌ನನ್ನು ನೋಡಲು ಬಹಳ ಕಾತುರಳಾಗಿದ್ದಳು. ರೂಪ ಹೇಗಿದ್ದಾಳೆ? ಅವಳು ನನ್ನ ಸೇಲ್‌ಫೋನ್‌ಗೂ ಕರೆ ಮಾಡಿಲ್ಲ. ಅನು ಊರಿನಲ್ಲಿ ಇಲ್ಲದೆ ಇರುವುದು ರೂಪಳಿಗೆ ಗೊತ್ತಿರಲು ಸಾಧ್ಯವಿರಲಿಲ್ಲ.

ಡ್ಯಾನ್‌ ಅವಳನ್ನು ಬ್ಯಾಗೇಜ್‌ ಕ್ಲೈಮ್‌ ಮಾಡುವ ಜಾಗದಲ್ಲಿ ಭೇಟಿಯಾದನು. ಅವಳನ್ನು ಗಟ್ಟಿಯಾಗಿ ಆಲಿಂಗಿಸಿಕೊಳ್ಳುತ್ತ ಚುಂಬಿಸಿದನು. ನ್ಯೂಯಾರ್ಕ್‌ನಿಂದ ಮರಳಿದ್ದು ಹಾಗು ಅವನೊಂದಿಗೆ ಇರುವುದು ಅವಳಿಗೆ ಬಹಳ ಆನಂದವನ್ನುಂಟು ಮಾಡಿತು. ಆದರೆ, ಯಾವುದೆ ಬಂಧಗಳಾಗಲಿ, ಮುಂದಿನ ಯೋಜನೆಗಳಾಗಲಿ ಇಲ್ಲದೆ ಎಷ್ಟು ದಿನ ಎಂದು ಈ ಅಮೇರಿಕನ್ನರು ಹೀಗೆ ಸುಮ್ಮನೆ ಜೊತೆಯಲ್ಲಿ ತಿರುಗಾಡಿಕೊಂಡು, ಡೇಟ್‌ ಮಾಡಿಕೊಂಡು ಇರುತ್ತಾರೆ? ಕೇವಲ ಮೂರು ಡೇಟ್‌ಗಳಿಗೆ ದೀಪಕ್‌ ಮದುವೆಯ ಪ್ರಪೋಸ್‌ ಮಾಡಿದ್ದ. ಅಥವ ಅದು ಕೇವಲ ಎರಡೇ ಆಗಿತ್ತೆ?

ವಿಮಾನ ನಿಲ್ದಾಣದಿಂದ ಅವಳ ಮನೆಗೆ ಅಷ್ಟೇನೂ ದೂರವಿರಲಿಲ್ಲ. ನ್ಯೂಯಾರ್ಕ್‌ ಮತ್ತು ಅವಳ ಬಡ್ತಿಯ ಬಗ್ಗೆ ಹರಟೆ ಕೊಚ್ಚುತ್ತ, ದಾರಿಯಲ್ಲಿ ಸ್ಯಾನ್‌ ಹೋಸೆಯ ವಿಲ್ಲೊ ಗ್ಲೆನ್‌ ಡೌನ್‌ಟೌನ್‌ನಲ್ಲಿದ್ದ ಚೈನೀಸ್‌ ಹೋಟೆಲಿನಿಂದ ಮೊದಲೆ ಆರ್ಡರ್‌ ಮಾಡಿದ್ದನ್ನು ತೆಗೆದುಕೊಂಡು ಮನೆಗೆ ಬಂದರು.

ಮನೆಯ ಒಳಗೆ ಬಂದ ತಕ್ಷಣ ಡ್ಯಾನ್‌ ಅವಳನ್ನು ಬರಸೆಳೆದುಕೊಂಡು, ತನ್ನ ಬೆಚ್ಚನೆಯ ದೇಹಕ್ಕೆ ಅವಳನ್ನು ಒತ್ತಿಕೊಳ್ಳುತ್ತ ಮತ್ತೊಮ್ಮೆ ಚುಂಬಿಸಿದ.

‘‘ನಿನ್ನನ್ನು ಬಹಳ ಮಿಸ್‌ ಮಾಡಿಕೊಂಡೆ, ಅನು,’’ ಅವನು ಪಿಸುಗುಟ್ಟಿದ. ತನ್ನ ಕೈಯನ್ನು ಅವಳ ಸೊಂಟದ ಕೆಳಗೆಲ್ಲ ಓಡಿಸುತ್ತ, ಅವಳ ನಿತಂಬವನ್ನೆಲ್ಲ ಸವರುತ್ತ, ಮತ್ತೆ ಕೈಗಳನ್ನು ಅವಳ ಬೆನ್ನಿನ ಮೇಲೆ ತಂದು ಅವಳ ಬ್ಲೌಸಿನ ಒಳಗಿನ ಬ್ರಾದ ಗುಂಡಿಗಳನ್ನು ಕಳಚಿದ.

ಅವಳು ತನ್ನ ಕೈಯನ್ನು ಅವನ ಟಿಶರ್ಟಿನ ಒಳಗೆ ತೂರಿಸಿ, ಅವನ ಮೃದುವಾದ ಚರ್ಮ ಹಾಗು ಅದರೊಳಗಿನ ಅವನ ಮಜಬೂತಾದ ಸ್ನಾಯುಗಳ ಸ್ಪರ್ಶವನ್ನನುಭವಿಸಿದಳು. ಅವನು ಅವಳ ಕಣ್ಣಲ್ಲಿ ಕಣ್ಣಿಟ್ಟು ಉತ್ಕಟತೆಯಿಂದ ನೋಡಿದನು. ಆ ನೋಟ ತಮ್ಮಲ್ಲಿ ಉಂಟುಮಾಡಿದ ಗಾಢವಾದ ಭಾವಸಂಪರ್ಕಕ್ಕೆ ಅವಳು ತಲ್ಲಣಿಸಿ ಹೋದಳು. ಅವನಿಗೆ ಅವನು ಏನು ಮಾಡುತ್ತಿದ್ದೇನೆ ಎಂದು ಗೊತ್ತಿದೆ. ಇವೆಲ್ಲವನ್ನು ಮುಂಚೆ ಮಾಡಿರುವ ಅನುಭವ ಅವನಿಗಿದೆ. ನನಗೆ ಇಲ್ಲಿಯ ತನಕ ಕೇವಲ ಅತ್ಯಾಚಾರ ಮಾಡಿಸಿಕೊಂಡ ಅನುಭವವಾಗಿದೆ. ಎಂದೂ ನಾನು ಪ್ರೇಮಿಸಲ್ಪಟ್ಟಿಲ್ಲ. ಅವನು ಏನು ಮಾಡಲು ಇಷ್ಟ ಪಡುತ್ತಾನೊ ಅದನ್ನು ಮಾಡಲು ಬಿಡುತ್ತೇನೆ. ನಾನು ಕೇವಲ ಪ್ರೇಮಿಸಿಕೊಳ್ಳಬಯಸುತ್ತೇನೆ.

ಡ್ಯಾನ್‌ ಅವಳನ್ನು ನಿಧಾನವಾಗಿ ಲೆದರ್‌ ಸೋಫಾದ ಬಳಿಗೆ ಕರೆದುಕೊಂಡು ಹೋಗಿ ತನ್ನ ಕೆಳಗೆ ಮಲಗಿಸಿಕೊಂಡ. ತನ್ನ ಶರಟನ್ನು ತಲೆಯ ಮೇಲಿಂದ ಥಟ್ಟನೆ ಮೇಲೆಕ್ಕೆಳೆದೆಸೆದು, ತನ್ನ ಎದೆಯನ್ನು ಅವಳ ಎದೆಗೆ ಒತ್ತಿದ. ಅವನ ಎದೆಯ ಮೇಲಿನ ತೆಳುವಾದ, ಆದರೆ ಮೃದುವಾದ ಕೂದಲು ಅವಳ ಬೆತ್ತಲೆಯ ಚರ್ಮಕ್ಕೆ ಕಚಗುಳಿ ಇಟ್ಟವು.

ದೀಪಕ್‌ ಜೊತೆಗಿನ ಮೊದಲನೆಯ ರಾತ್ರಿಯ ನೆನಪುಗಳು ಈಗಲೂ ಅವಳನ್ನು ಹೆದರಿಸಿದವು. ಅವನು ನನ್ನ ಭಯಾತಂಕಗಳನ್ನು ಆಳಲು ನಾನು ಬಿಡುವುದಿಲ್ಲ. ತನ್ನ ಎಲ್ಲಾ ಆತಂಕಗಳು ತನ್ನಿಂದ ಕಳಚಿಕೊಂಡವೆಂಬಂತೆ ತನ್ನ ಬೆನ್ನನ್ನು ಅವಳು ಕಮಾನಿನಂತೆ ಬಾಗಿಸಿದಳು. ಒಂದು ಕ್ಷಣ ಅವಳ ಮನಸ್ಸು ಎಲ್ಲದರಿಂದ ಮುಕ್ತವಾಗಿ ಸಂಪೂರ್ಣ ಖಾಲಿಯಾದಂತಾಯಿತು. ಅವಳ ತಲೆಯಲ್ಲಿನ ಆ ಕ್ಷೀಣ ಸ್ವರ ನಿಶ್ಯಬ್ಧವಾಯಿತು. ಡ್ಯಾನ್‌ ಬೆತ್ತಲೆ ಇರುವ ದೃಶ್ಯ ಅವಳಲ್ಲಿ ರೋಮಾಂಚನ ಉಂಟು ಮಾಡಿತೆ ಹೊರತು ಭಯವಾಗಲಿ, ನಾಚಿಕೆಯಾಗಲಿ ಉಂಟು ಮಾಡಲಿಲ್ಲ.

ಎಲ್ಲಾ ಮುಗಿದ ಮೇಲೆ, ಡ್ಯಾನ್‌ನ ಬಲವಾದ, ವಿಶಾಲವಾದ ಬೆನ್ನನ್ನು ತನ್ನ ಕೈಗಳು ಸಂಪೂರ್ಣವಾಗಿ ತಬ್ಬಿಕೊಳ್ಳಲಾಗದಿದ್ದರೂ, ಅವನನ್ನು ಆಲಂಗಿಸಿಕೊಂಡು ಹಾಗೆ ಮಲಗಿದ್ದಳು. ಮತ್ತೆ ದೀಪಕ್‌ನ ಬಗ್ಗೆ ಯೋಚಿಸಿದಳು. ಹೇಗೆ ಅವನೊಂದಿಗಿನ ಅನುಭವಗಳು ಭಯಾನಕವಾಗಿದ್ದವು ಹಾಗು ಅವನ ಭಾರಕ್ಕೆ ತಾನು ನಜ್ಜುಗುಜ್ಜಾದಂತೆ ಅನ್ನಿಸುತ್ತಿದ್ದ ಅನುಭವ ನೆನಪಾಯಿತು. ಅದನ್ನು ತನ್ನ ಮನಸ್ಸಿನಿಂದ ಹೊರಕ್ಕೆ ಹಾಕಲು ಪ್ರಯತ್ನಿಸಿದಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+