ರೂಪಾ ಮತ್ತು ಪವನ್ ತಲೆಗೆ ದೀಪಕ್ ಮರ್ಡರ್ ಕೇಸ್!?
ಈಗ, ಕೊನೆಗೂ ಅವಳು ರೂಪಾಳ ನೈಜಸ್ವರವನ್ನು ಕೇಳುತ್ತಿದ್ದಳು. ‘‘ಇಲ್ಲ, ಅದು ನನಗೆ ಎಂದಾದರೂ ಅರ್ಥವಾಗಬಹುದು ಎಂದು ನನಗನ್ನಿಸುವುದಿಲ್ಲ. ನಾನು ಚಿಕ್ಕವಳಾಗಿದ್ದಾಗಿನಿಂದಲೂ ನಮ್ಮ ಅಪ್ಪಅಮ್ಮ ನಾನು ಸ್ವತಂತ್ರವಾಗಿರುವಂತೆ ಪ್ರಚೋದಿಸುತ್ತಿದ್ದರು. ನನ್ನ ಸ್ನೇಹಿತೆಯರೆಲ್ಲ ಮದುವೆ ಮಾಡಿಕೊಂಡಾಗಲೂ ಅವರಿಗೆ ನಾನು ಆಗಲೆ ಮದುವೆ ಮಾಡಿಕೊಳ್ಳುವುದು ಬೇಕಾಗಿರಲಿಲ್ಲ. ನನ್ನ ಕ್ಲಾಸಿನಲ್ಲಿ ಕೆಲವೇ ಹುಡುಗಿಯರಿದ್ದರೂ ಅವರಿಗೆ ನಾನು ಇಂಜಿನಿಯರಿಂಗ್ ಓದುವುದು ಬೇಕಾಗಿತ್ತು. ಅವರು ಯಾಕೆ ನನ್ನನ್ನು ಅಷ್ಟು ಮುಂದೂಡುತ್ತಿದ್ದಾರೆ ಎಂದು ನನಗೆ ಆಗ ಅರ್ಥವಾಗುತ್ತಿರಲಿಲ್ಲ. ಈಗ ಅರ್ಥವಾಗುತ್ತಿದೆ... ಹೌದು, ಯಾಕೆಂದು ನನಗೀಗ ಗೊತ್ತಾಗಿದೆ...’’
‘‘ನೀನು ದೀಪಕ್‌ನನ್ನು ಬಿಟ್ಟಾಗ ನಿಮ್ಮ ಮನೆಯವರು ನಿನಗೆ ಬೆಂಬಲ ಕೊಟ್ಟರೆ?’’
‘‘ಹೌದು, ಸಂಪೂರ್ಣವಾಗಿ! ನಾನು ದೀಪಕ್‌ನನ್ನು ಭೇಟಿಯಾದ ಮೇಲೆ ಅವನನ್ನು ಮದುವೆಯಾಗುತ್ತಿದ್ದೇನೆ ಎಂದು ಅವರಿಗೆ ಹೇಳಿದಾಗಲೂ ಬೆಂಬಲ ಕೊಟ್ಟರು. ನಾನು ಅವನನ್ನು ಬಿಟ್ಟುಬಿಟ್ಟಾಗಲೂ ಅಷ್ಟೇ ಬೆಂಬಲ ಕೊಟ್ಟರು.’’
‘‘ನೀವು ಬ್ರಾಹ್ಮಣರೇ?’’
ಅನು ಮುಖ ಗಂಟಿಕ್ಕಿಕೊಂಡಳು. ‘‘ಯಾಕೆ ಕೇಳುತ್ತಿದ್ದೀಯ?’’
‘‘ನಮ್ಮ ಮನೆಯವರು ಸಂಪ್ರದಾಯಸ್ಥ ಬ್ರಾಹ್ಮಣರು. ನಮ್ಮಮ್ಮ ಮನೆಯ ಹೊರಗೆ ಯಾವ ತಿಂಡಿಯನ್ನೂ ಮುಟ್ಟುವುದಿಲ್ಲ. ಅವರು ತಮ್ಮ ಕೈಯಿಂದ ಮಾಡಿದ್ದನ್ನು ಮಾತ್ರ ತಿನ್ನುತ್ತಾರೆ. ಅವರು ನನ್ನ ಆಕ್ಕನ ಮನೆಯಲ್ಲಿ ನೀರನ್ನು ಸಹ ಕುಡಿಯುವುದಿಲ್ಲ, ಯಾಕೆಂದರೆ ನಮ್ಮಕ್ಕ ಬೇರೆ ಜಾತಿಯವರನ್ನು ಮದುವೆಯಾಗಿದ್ದಾಳೆ. ನಾನೇನಾದರು ದೀಪಕ್‌ನನ್ನು ಬಿಟ್ಟು ಹೋಗಿದ್ದರೆ ನಮ್ಮನೆಯವರು ನನಗೆ ಬೆಂಬಲ ಕೊಡುತ್ತಿರಲಿಲ್ಲ. ಹಾಗಾಗಿದ್ದರೆ ನಾನು ಎಲ್ಲಿಗೋಗಲಿ?’’
‘‘ರೂಪ, ನೀನು ಇನ್ನು ಮೇಲೆ ವಿಚ್ಛೇದನದ ಬಗ್ಗೆ ಯೋಚನೆ ಮಾಡುವುದು ಬೇಕಾಗಿಲ್ಲ. ನೀನೀಗ ವಿಧವೆ!’’
‘‘ನೀನು ಬಿಳಿಯನೊಬ್ಬನ ಜೊತೆ ಓಡಿಹೋಗಿ, ಬೇರೆ ಬಿಳಿಯರ ಜೊತೆ ಮಲಗುತ್ತಿರಲಿಲ್ಲವೆ?’’
‘’ಇದು ನನ್ನ ಬಗ್ಗೆ ಅಲ್ಲ, ರೂಪ! ನಾವೀಗ ನಿನ್ನ ಬಗ್ಗೆ ಮಾತನಾಡುತ್ತಿದ್ದೇವೆ.’’
‘‘ಇಲ್ಲ, ಅನು, ನಾವು ನಮ್ಮ ಬಗ್ಗೆ ಮಾತನಾಡುತ್ತಿದ್ದೇವೆ, ನನ್ನ ಬಗ್ಗೆ ಅಲ್ಲ. ಅವನ ತಂದೆತಾಯಿಯರು ಅವರ ಐಷಾರಾಮಿ ಇಂಪೋರ್ಟೆಡ್ ಕಾರಿನಲ್ಲಿ ನಮ್ಮ ಮನೆಯವರ ಜೊತೆ ಮಾತನಾಡಲು ಬಂದ ದಿನ ನನಗೆ ನೆನಪಿದೆ. ಅವತ್ತು ಅವರು ಏನು ಹೇಳಿದರೆಂದರೆ, ದೀಪಕ್‌ನ ಮೊದಲ ಹೆಂಡತಿ ಬಿಳಿಯನೊಬ್ಬನ ಜೊತೆ ಓಡಿ ಹೋದಳು ಹಾಗು ಅವಳಿಗೆ ಬಹಳ ಬಾಯ್‌ಫ್ರೆಂಡ್ಸ್ ಇದ್ದಾರೆ ಅಂತ. ಈಗ ಅವರು ನಾನೆ ಅವರ ಮಗನನ್ನು ಕೊಂದಿದ್ದು ಎಂದು ಎಲ್ಲರಿಗೂ ಹೇಳುತ್ತಾರೆ.’’ ರೂಪ ಅಳಲು ಪ್ರಾರಂಭಿಸಿದಳು. ’’ನನ್ನ ಸ್ವಂತ ಮನೆಯವರೆ ಈಗ ನನ್ನನ್ನು ನಂಬುತ್ತಾರೆ ಅಂದುಕೊಳ್ಳುತ್ತೀಯ? ಅವರು ದೀಪಕ್‌ನ ಮನೆಯವರು ಏನನ್ನು ಹೇಳುತ್ತಾರೊ ಅದನ್ನೆ ನಂಬುತ್ತಾರೆ. ಎಲ್ಲ ತಂದೆತಾುಯರು ನಿನ್ನ ತಂದೆತಾಯಿಯರ ಹಾಗೆ ಇರುವುದಿಲ್ಲ, ಅನು.’’
‘‘ಭಾರತೀಯ ಸಮಾಜ ನಮ್ಮ ಹೆಂಗಸರ ಮೇಲೆ ಬಹಳ ಕಠಿಣವಾಗಿದೆ ಅಂತ ನನಗೆ ಗೊತ್ತು, ರೂಪ. ನೀನು ಹಿಂದಕ್ಕೆ ಹೋಗುವುದೇನೂ ಬೇಕಿಲ್ಲ.’’ ಅನು ಸ್ವಲ್ಪ ನಿಲ್ಲಿಸಿದಳು. ‘‘ಮದುವೆಗೆ ಮುಂಚೆ ನೀನೇನಾದರು ಕಾಗದಪತ್ರಗಳಿಗೆ ಸಹಿ ಹಾಕಿದ್ದೆಯಾ? ಅದನ್ನು ಇಲ್ಲಿ ಪ್ರೀನಪ್ ಎನ್ನುತ್ತಾರೆ. ಹಾಗೆಂದರೆ, ಪ್ರೀ-ನಪ್ಷಲ್ ಅಂತ; ಮದುವೆಗೆ ಮೊದಲು ಎಂದು.’’
‘‘ನಾನು ಯಾವುದಕ್ಕೂ ಸಹಿ ಮಾಡಿದ ಹಾಗೆ ಅನ್ನಿಸುತ್ತಿಲ್ಲ. ಏನದು?’’
‘‘ಹಾಗಿದ್ದರೆ ಅದೇನೂ ಈಗ ಮುಖ್ಯವಲ್ಲ, ಮರೆತು ಬಿಡು. ನೀನು ಓಡಿ ಹೋಗುವುದು ಇರಲಿ, ವಿಚ್ಛೇದನ ಕೂಡ ಕೊಡುವುದಿಲ್ಲ ಎಂದು ದೀಪಕ್‌ಗೆ ಖಾತ್ರಿ ಇತ್ತು. ಸಂಪ್ರದಾಯಸ್ಥ, ಬಡವರ ಮನೆಯ ಅಸಹಾಯಕ ಹುಡುಗಿಯನ್ನೆ ಆರಿಸಿಕೊಂಡಿದ್ದ. ಅಷ್ಟೇ ಅಲ್ಲದೆ, ನಿನ್ನನ್ನು ಹೆದರಿಸಲು ಮನೆಯಲ್ಲಿ ಬಂದೂಕು ಸಹ ತಂದಿಟ್ಟಿದ್ದ.’’ ವಿವಾಹಪೂರ್ವ ಒಪ್ಪಂದ ಇಲ್ಲದೆ ಇರುವುದರಿಂದ ಕೊಲೆ ಮಾಡಲು ಅವಳಿಗೆ ಬಲವಾದ ಕಾರಣವಿತ್ತು ಎಂದು ಪೋಲಿಸರು ಈಗ ವಾದಿಸುವ ಹಾಗಿಲ್ಲ. ಆಗ ಡ್ಯಾನ್ ಅವಳಿಗೆ ಕೇಳು ಎಂದಿದ್ದನ್ನು ನೆನಪಿಸಿಕೊಂಡಳು. ’’ನೆನ್ನೆ ರಾತ್ರಿ ಪೋಲಿಸರು ಇಲ್ಲಿಗೆ ಬಂದಾಗ ಎಲ್ಲಿಗೊ ಹೋಗಲು ಸಿದ್ಧವಾಗಿರುವವಳಂತೆ ನೀನು ಡ್ರೆಸ್ ಮಾಡಿಕೊಂಡು ಇದ್ದೆ ಎಂದು ಡ್ಯಾನ್ ಹೇಳಿದ. ನೀನು ಆಗ ತಾನೆ ಎಲ್ಲಿಗಾದರೂ ಹೋಗಿ ಬಂದಿದ್ದೆಯ? ಪೋಲಿಸರು ಬಂದಾಗ ನೀನು ದೀಪಕ್‌ನಿಗಾಗಿ ಮನೆಯಲ್ಲಿ ಕಾಯುತ್ತಿರಲಿಲ್ಲವೆ?’’
‘‘ಹೌದು, ಎಂದಿನಂತೆ ನಾನು ಅವನಿಗೆ ಕಾಯುತ್ತಿದ್ದೆ... ಅವನು ನನ್ನನ್ನು ಹೊರಗೆ ಆಸ್ಪತ್ರೆಯಂತಹುದಕ್ಕೆ ಕರೆದುಕೊಂಡು ಹೋಗಿದ್ದನ್ನು ಬಿಟ್ಟರೆ ನಾನು ಎಂದೂ ಹೊರಗೆ ಹೋಗುತ್ತಿರಲಿಲ್ಲ. ಅವನಿಗೆ ನಾನು ಯಾವಾಗಲು ಚೆನ್ನಾಗಿ ಡ್ರೆಸ್ ಮಾಡಿಕೊಂಡಿರಬೇಕಿತ್ತು. ಅವರಮ್ಮ ಮನೆಯಲ್ಲಿ ಕೂಡ ಯಾವಾಗಲೂ ರೇಷ್ಮೆ ಸೀರೆಗಳನ್ನು ಹಾಕಿಕೊಂಡಿರುತ್ತಾರೆ ಎಂದು ಹೇಳುತ್ತಿದ್ದ.’’
ಗಂಡಸರಿಗೆ ಅವರ ಹೆಂಡತಿಯರು ತಮ್ಮ ತಾುಯಂತೆ ಕಾಣಿಸಬೇಕು ಎನ್ನಿಸುವುದು ಎಷ್ಟು ಆಸಕ್ತಕರ ವಿಷಯ! ’‘‘ಏನೇ ಇರಲಿ, ನೀನೀಗ ಬಹಳ ಶ್ರೀಮಂತೆ. ನಿನ್ನ ಮಗುವಿನ ಭವಿಷ್ಯದ ಬಗ್ಗೆ ನೀನೇನೂ ಯೋಚನೆ ಮಾಡುವುದು ಬೇಕಿಲ್ಲ. ಅದು ಗಂಡು ಅಥವ ಹೆಣ್ಣೆಂದು ನಿನಗೆ ಗೊತ್ತಿದೆಯೆ?’’












Click it and Unblock the Notifications