ಅಮ್ಮನಾಗುವ ಖುಷಿ.. ಕೆಲ ಕ್ಷಣಗಳಲ್ಲಿಯೇ ಆಘಾತ!

ಇಂಗ್ಲಿಷ್‌ ಮೂಲ : ಅಸಿತ ಪ್ರಭುಶಂಕರ
ಕನ್ನಡಕ್ಕೆ : ರವಿ ಕೃಷ್ಣಾ ರೆಡ್ಡಿ

[email protected]

ಮುಂದಿನ ಕೆಲವು ವಾರಗಳು ಗೊಂದಲಮಯವಾಗಿದ್ದವು. ಅನು ತನ್ನ ಮನೆಯಲ್ಲಿ ಬಾಡಿಗೆ ಇದ್ದವರಿಗೆ ನೋಟಿಸ್‌ ಕೊಟ್ಟು, ಅವರು ಖಾಲಿ ಮಾಡಿದ ನಂತರ ತನ್ನ ಸ್ವಂತ ಮನೆಗೆ ವಾಸ ಬದಲಾಯಿಸಿದಳು. ಒಂದು ದಿನ, ಸುಮಾರು ರಾತ್ರಿ 8 ಗಂಟೆಯ ಸಮಯದಲ್ಲಿ ಡ್ಯಾನ್‌ ಕರೆ ಮಾಡಿದ. ''ಹೇ, ಅನು, ಈಗ ತಾನೆ ನನ್ನ ಪಾಳಿ ಮುಗಿಯಿತು. ಏನು ಮಾಡುತ್ತಿದ್ದೀಯ?"" ಅವನು ಈ ಮಧ್ಯೆ ಮತ್ತೂ ಆತ್ಮೀಯನಾಗಿ, ಆಪ್ತ ಸ್ನೇಹಿತನಾಗಿದ್ದ.

''ಆರ್ಡರ್‌ ಮಾಡಿರುವ ತಿಂಡಿತರುವುದಕ್ಕೆ ಭಾರತೀಯ ರೆಸ್ಟಾರೆಂಟ್‌ ಒಂದಕ್ಕೆ ಹೋಗಿಬರಲು ಈಗ ತಾನೆ ಮನೆ ಬಿಡುತ್ತಿದ್ದೇನೆ, ಡ್ಯಾನ್‌.""

''ನನಗೂ ತರಲು ಸಾಧ್ಯವೆ?""

''ಖಂಡಿತ. ನಾನು ಈಗಾಗಲೇ ಆರ್ಡರ್‌ ಮಾಡಿಬಿಟ್ಟಿದ್ದೇನೆ. ಅದು ನಮ್ಮಿಬ್ಬರಿಗೂ ಸಾಕಾಗುತ್ತದೆ.""

''ನನಗೆ ತಂದೂರಿ ಕೋಳಿ ಮತ್ತು ನಾನ್‌ ಬೇಕು.""

ನಾನು ಎಂದೂ ಇಷ್ಟು ಸಂಕೋಚ ಬಿಟ್ಟು ಕೇಳಲಾರೆ. ಅಮೇರಿಕಾದವರು ಸಂಕೋಚ ಪಟ್ಟುಕೊಳ್ಳುವುದು ಬಹಳ ಕಮ್ಮಿ. ''ಸರಿ, ಅದನ್ನು ಆರ್ಡರ್‌ ಮಾಡುತ್ತೇನೆ. ನಿನ್ನ ಈವತ್ತಿನ ದಿನ ಹೇಗಿತ್ತು?""

''ನಿನ್ನನ್ನು ನೋಡಿದ ಮೇಲೆ ಅದು ಇನ್ನೂ ಉತ್ತಮಗೊಳ್ಳುತ್ತದೆ."" ಯಾವಾಗಲೂ ಸರಸ! ಅವನು ಗಂಭೀರವಾಗಿದ್ದದ್ದನ್ನು ಅವಳೆಂದೂ ಕಂಡಿರಲಿಲ್ಲ.

''ಇನ್ನು ಸ್ವಲ್ಪ ಹೊತ್ತಲ್ಲಿ ಅಲ್ಲಿ ಇರುತ್ತೇನೆ.""

ಅವಳು ರೆಸ್ಟಾರೆಂಟ್‌ನಿಂದ ಹಿಂದಿರುಗಿದಾಗ ಡ್ಯಾನ್‌ ತನ್ನ ಕಾರನ್ನು ರಸ್ತೆಬದಿಯಲ್ಲಿ ನಿಲ್ಲಿಸಿರುವುದನ್ನು ನೋಡಿದಳು. ಅವಳು ಕಾರು ನಿಲ್ಲಿಸುವ ಗರಾಜಿನ ಬಾಗಿಲು ತೆರೆಯಲು ರಿಮೋಟ್‌ ಅನ್ನು ಒತ್ತಿದಳು. ಆಗ ಇದ್ದಕ್ಕಿದ್ದಂತೆ ಅವಳ ಹೊಟ್ಟೆಯಲ್ಲಿ ತೀಕ್ಷ್ಮವಾದ ಪ್ರಾಣಾಂತಿಕ ನೋವು ಪ್ರಾರಂಭವಾಯಿತು. ಕಾರಿನ ಕಿಟಕಿಯ ವಿದ್ಯುತ್‌ಚಾಲಿತ ಗಾಜನ್ನು ಇಳಿಸಲು ಅದರ ಬಟನ್‌ ಅನ್ನು ಅಮುಕಿದಳು.

''ಡ್ಯಾನ್‌,"" ಭಯ ಹಾಗು ನೋವಿನಿಂದ ಉಸಿರುಗಟ್ಟುತ್ತ ಅವನನ್ನು ಕೂಗಿದಳು.

ಅವಳು ಕೆಳಗೆ ತನ್ನ ಕಾಲುಗಳತ್ತ ನೋಡಿದಾಗ ದಟ್ಟ ರಕ್ತವರ್ಣದ ಕಲೆಗಳು ಅವಳ ಸ್ಕರ್ಟಿನ ಮೇಲೆಲ್ಲ ಆಗಿರುವುದು ಕಾಣಿಸಿತು. ಡ್ಯಾನ್‌ ಕಾರಿನ ಬಾಗಿಲನ್ನು ದೊಡ್ಡದಾಗಿ ತೆರೆದು, ಅವಳ ಕಾಲುಗಳನ್ನು ಹೊರಗೆ ಇಳಿಸಿದ. ಅವನ ಕೈ ಅವಳ ಕುತ್ತಿಗೆ ಹಿಂದೆ ಬಳಸಿ ಬಂದು ಅವಳ ತಲೆಯನ್ನು ಸ್ವಲ್ಪವೆ ಮುಂದಕ್ಕೆ ತಳ್ಳುತ್ತಿರುವುದು ಅವಳ ಅನುಭವಕ್ಕೆ ಬಂತು. ನನಗೆ ಪ್ರಜ್ಞೆ ತಪ್ಪುತ್ತಿದೆಯೆ? ಎಷ್ಟೊಂದು ರಕ್ತ ಎಂದು ಭಯದಿಂದ ಯೋಚಿಸಿದಳು. ಇದೇನಾದರು ಒಂದು ಭಯಂಕರವಾದ ಮುಟ್ಟೇ?

''ನಾನು ಮಾತಾಡುತ್ತಿರುವುದು ಕೇಳಿಸುತ್ತಿದೆಯಾ, ಅನು?""

ಮುಂದೆ ಓದಿ »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+