ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಳಿಯನನ್ನು ಮದುವೆಯಾಗಲು ಅನು, ದೀಪಕ್‌ನನ್ನು ಬಿಟ್ಟಳೇ?

By Staff
|
Google Oneindia Kannada News


‘ಆಕೆ ದೀಪಕ್‌ನ ಹೆಂಡತಿ. ರಾತ್ರಿ ನಮ್ಮನ್ನು ಜೊತೆಯಾಗಿ ನೋಡಿದ ಮೇಲೆ ಮನೆಗೆ ಹೋಗಿ ಅವಳನ್ನು ಚೆನ್ನಾಗಿ ಹೊಡೆದಿದ್ದಾನೆ. ಬಹಳ ಹಿಂದೆ ನಾನು ಮತ್ತು ದೀಪಕ್‌ ಜೊತೆಯಾಗಿ ಸಾಂಟಾ ಕ್ರೂಜ್‌ಗೆ ಹೋಗಿದ್ದಾಗ, ನೀನು ಮತ್ತು ನಾನು ಅಲ್ಲಿಗೆ ಹೋಗಿದ್ದರ ಬಗ್ಗೆ ಹಾಗೂ ನಾವು ಹರಿಜನರ ಬಗ್ಗೆ ಮಾತನಾಡಿದ್ದರ ವಿಷಯ ಅವನಿಗೆ ಹೇಳಿದ್ದೆ. ಅದಾದ ಮೇಲೆ ಯಾವಾಗೆಂದರೆ ಆಗ ನಿನ್ನ ವಿಷಯ ಎತ್ತುತ್ತಿದ್ದ.’

‘ನನ್ನ ವಿಷಯ ಯಾಕೆ?’

‘ನಾನು ನಿನ್ನ ಜೊತೆ ಏನಾದರು ಮಲಗಿದ್ದೆನೆ ಎಂದು ಪದೇಪದೆ ಕೇಳುತ್ತಿದ್ದ. ಮದುವೆ ಆಗುವ ತನಕ ಹೆಣ್ಣು ಯಾವುದೆ ಸಂಬಂಧಗಳನ್ನು ಇಟ್ಟುಕೊಳ್ಳದೆ ಇರುವುದು ಭಾರತೀಯ ಗಂಡಸಿಗೆ ಬಹಳ ಮುಖ್ಯವಾದ ವಿಷಯ. ನಿನ್ನ ಜೊತೆ ನನಗೆ ದೈಹಿಕ ಸಂಬಂಧ ಇತ್ತೆ ಇಲ್ಲವೆ ಎನ್ನುವ ವಿಷಯಕ್ಕೆ ಅವನಿಗೆ ಉತ್ತರ ಕೊಡಬೇಕು ಎಂದು ನನಗೆ ಅನ್ನಿಸಲಿಲ್ಲ. ಆಮೇಲೆ ಅವನು ಭಾರತದಲ್ಲಿ ಎಲ್ಲರಿಗೂ ನಾನು ಅವನಿಗೆ ಮೋಸ ಮಾಡಿದೆ ಎಂದು, ನಿನ್ನ ಜೊತೆ ಓಡಿ ಹೋದೆ ಎಂದು... ಇನ್ನೇನೇನೊ ಹೇಳಿಕೊಂಡು ಬಂದ.’

‘ಅದು ಹುಚ್ಚಾಟ. ಅವನು ಈಗಾಗಲೆ ಮತ್ತೊಂದು ಮದುವೆ ಆಗಿದ್ದಾನೆಯೆ?’

‘ಹೌದು. ನನಗೆ ಗರ್ಭಪಾತವಾದ ತಕ್ಷಣ ಹೋಗಿ ಇನ್ನೊಂದು ಮದುವೆ ಮಾಡಿಕೊಂಡು ಬಂದಿದ್ದಾನೆ. ತನ್ನ ಆಸ್ತಿಗೆ ಒಬ್ಬ ಉತ್ತರಾಧಿಕಾರಿ ಬೇಕಾಗಿರುವುದು ಅವನಿಗೆ ಬಹಳ ಮುಖ್ಯವಾದ ವಿಷಯ. ಅವಳೀಗ ಗರ್ಭಿಣಿ, ಆದರೆ ಈಗಲೂ ಅವನು ಅವಳನ್ನು ಹಿಂಸಿಸುತ್ತಿದ್ದಾನೆ. ನನ್ನ ಮಗುವನ್ನು ಕೊಂದ ಹಾಗೆ ಅವಳ ಹೊಟ್ಟೆಯಲ್ಲಿರುವ ಮಗುವನ್ನೂ ಕೊಂದುಬಿಡುತ್ತೇನೆ ಎಂದೇಕೆ ಅವನಿಗೆ ಭಯವಾಗುತ್ತಿಲ್ಲ?’

ಡ್ಯಾನ್‌ಗೆ ಬಹಳ ಕೋಪ ಬಂತು. ‘ತನ್ನ ಹೆಂಡತಿಗೆ ಹಿಂಸೆ ಕೊಡುತ್ತಿರುವುದಕ್ಕೆ - ಹಾಗೂ ಇನ್ನೂ ಹುಟ್ಟಿರದ ಮಗುವಿನ ಜೀವವನ್ನು ಅಪಾಯಕ್ಕೆ ಸಿಕ್ಕಿಸುತ್ತಿರುವುದಕ್ಕೆ ಅವನನ್ನು ಒಂದು ಸೆಕೆಂಡಿನಲ್ಲಿ ನಾನು ಅರೆಸ್ಟ್‌ ಮಾಡಿಸಬಲ್ಲೆ.’

‘ಅವನು ಹತ್ತಿರ ಗನ್‌ ಸಹ ಇದೆ. ಅವಳೇನಾದರು ಅವನನ್ನು ಬಿಟ್ಟರೆ ಕೊಂದುಬಿಡುವುದಾಗಿ ಯಾವಾಗಲು ಅವಳಿಗೆ ಬೆದರಿಕೆ ಹಾಕುತ್ತಿದ್ದಾನೆ.’

‘ನೀನು ಯಾಕೆ ಇದನ್ನೆಲ್ಲ ನನಗೆ ಮೊದಲೆ ಹೇಳಲಿಲ್ಲ?’

‘ಯಾಕೆಂದರೆ ಇಲ್ಲಿಯತನಕ ಅವಳಿಗೆ ಸಹಾಯ ಬೇಕಾಗಿಲ್ಲ. ಸಹಾಯ ಕೇಳುವ ಮನಸ್ಥಿತಿಗೆ ಅವಳು ಹತ್ತಿರವಾಗುತ್ತಿದ್ದಾಳೆ ಎಂದು ಅನ್ನಿಸುತ್ತಿದೆ ನನಗೆ. ಅದಕ್ಕೆ ಸಮಯ ಹಿಡಿಯುತ್ತದೆ. ಒಂದು ದಿನ ಕ್ಷಣಾರ್ಧದಲ್ಲಿ ಅವಳು ತನ್ನ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿ ಅವನನ್ನು ಬಿಟ್ಟು ಬರಲು ಸಿದ್ಧ ಎಂದು ನನಗೆ ಹೇಳುತ್ತಾಳೆ. ನಾನು ಆ ಸಮಯಕ್ಕಾಗಿ ಕಾಯುತ್ತ ಅವಳಿಗೆ ಜೊತೆ ಕೊಡುತ್ತಿದ್ದೇನೆ. ಯಾಕೆ ಎಂದು ನನಗೆ ಗೊತ್ತಿಲ್ಲ, ಆದರೆ ಅವಳ ಈ ಸ್ಥಿತಿಗೆ ನಾನೆ ಜವಾಬ್ದಾರಳು ಎನ್ನಿಸುತ್ತದೆ ನನಗೆ.’

ಒಳಗೆ ನಡೆದ ಡ್ಯಾನ್‌ ಕಾಫಿ ಪಾಟ್‌ನಿಂದ ಲೋಟಕ್ಕೆ ಕಾಫಿಯನ್ನು ಸುರಿದ. ‘ಅನು, ಇನ್ನೊಂದು ಕಡೆಗೆ ಮುಖ ತಿರುಗಿಸಿಕೊಂಡು ಅದು ಏನಾದರು ಆಗಲಿ ನನಗೇನು ಎಂದುಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ನನಗೊಂದು ಜವಾಬ್ದಾರಿಯಿದೆ - ಹಾಗು, ಹೇಳಬೇಕೆಂದರೆ ಆ ಜವಾಬ್ದಾರಿ ನಿನಗೂ ಇದೆ. ಬೀದಿಯಲ್ಲಿ ಹೋಗುತ್ತಿರುವಾಗ ಯಾರೊ ಒಬ್ಬ ಅಪರಿಚಿತನ ಮೇಲೆ ಇನ್ಯಾರೊ ದಾಳಿ ಮಾಡಿ ಪ್ರಾಣಾಪಾಯದ ಬೆದರಿಕೆ ಹಾಕುತ್ತಿರುವಾಗ, ನೀನು ಕೂಡಲೆ ಪೋಲಿಸರಿಗೆ ಕರೆ ಮಾಡುವುದಿಲ್ಲವೆ?’

‘ನೀನು ಏನು ಹೇಳುತ್ತಿದ್ದೀಯ ಎಂದು ನನಗೆ ಗೊತ್ತು. ಅದರೆ ದಯವಿಟ್ಟು ಅವಳಿಗೆ ಗಾಬರಿ ಮಾಡಬೇಡ. ಅವನನ್ನು ಬಿಟ್ಟು ಬರಲು ನಾನು ಅವಳ ಜೊತೆ ಮಾತನಾಡುತ್ತೇನೆ. ನಾವು ಅವಳಿಗೆ ಒತ್ತಾಯ ಮಾಡಿ ಅವಸರ ಮಾಡಿದರೆ ಅವಳು ಭಯಪಟ್ಟುಕೊಂಡು ಅವನನ್ನು ರಕ್ಷಿಸಲು ಪೋಲಿಸರ ಮುಂದೆ ಅವನ ದೌರ್ಜನ್ಯವನ್ನೆಲ್ಲ ನಿರಾಕರಿಸಿಬಿಡಬಹುದು.’

‘ಆಕೆ ಒಂದು ಸೆಕೆಂಡಿನಲ್ಲಿ ಸಾಯಬಹುದು ಎಂದು ನನಗೆ ಎಷ್ಟು ಚೆನ್ನಾಗಿ ಗೊತ್ತೊ ಅಷ್ಟೆ ಚೆನ್ನಾಗಿ ನಿನಗೂ ಗೊತ್ತು. ಆಮೇಲೆ, ನಿನಗೆ ಗೊತ್ತೆ? ಅವನಿಗೆ ಮನೋವೈದ್ಯರ ಸಹಾಯ ಬೇಕು.’

‘ಡ್ಯಾನ್‌, ದಯವಿಟ್ಟು ನನಗೆ ಸ್ವಲ್ಪ ಸಮಯ ಕೊಡು.’

ಭಾನುವಾರ ಈ ರೀತಿ ಆರಂಭವಾಗಿದ್ದು ಸರಿಯಲ್ಲ! ಡ್ಯಾನ್‌ನ ರಜಾ ದಿನವನ್ನು ಹಾಳು ಮಾಡಿದೆ. ಆದರೆ ಈಗ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ನಾನು ಈಗಲೆ ಒಂದು ಹೊಸ ಸಂಬಂಧವನ್ನು ಪ್ರಾರಂಭಿಸಲು ಸಾಧ್ಯವಾಗದಷ್ಟು ಹೊರೆ ನನ್ನ ಬೆನ್ನಿಗಿದೆ ಎಂದು ನನಗೆ ಗೊತ್ತಿತ್ತು. ದೀಪಕ್‌ನಿಂದ ನಾನು ಇನ್ನೂ ಬಿಡಿಸಿಕೊಂಡಿಲ್ಲ, ಹಾಗೂ ಈಗ ರೂಪ ಬೇರೆ ತನ್ನೊಂದಿಗೆ ನನ್ನನ್ನೂ ಕೆಳಕ್ಕೆ ಜಗ್ಗುತ್ತಿದ್ದಾಳೆ.

‘ಡ್ಯಾನ್‌, ಇಂದು ಬಹಳ ಸುಂದರವಾದ ದಿನ. ಯಾವುದಾದರು ಹತ್ತಿರದ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗೋಣವೆ?’

ರೂಪಾಳ ವಿಷಯ ಏನು ಮಾಡುವುದು ಎಂದು ಇನ್ನೂ ಯೋಚಿಸುತ್ತ, ಇವಳತ್ತ ಸೂಕ್ಷವಾಗಿ ಎಚ್ಚರಿಕೆಯಿಂದ ನೋಡಿದ. ‘ಹೈಕ್‌ ಮಾಡಲು ನೀನು ಖಂಡಿತವಾಗಿ ಸಿದ್ಧಳಾಗಿದ್ದೀಯ?’

‘ಹೌದು. ನಾನು ಈಗ ಹೇಳಲಿರುವ ವಿಷಯ ನಿನಗೆ ಸ್ವಲ್ಪ ಶಾಕ್‌ ಉಂಟುಮಾಡಬಹುದು; ಈ ಸಮಸ್ಯೆ ಈಗಾಗಲೆ ಬಹಳ ದಿನಗಳಿಂದ ನನಗೆ ಜೊತೆಯಾಗಿದೆ. ನಾನು ರೂಪಾಳಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ಅವಳು ಸಿದ್ಧವಾಗಿಲ್ಲ. ಆದರೆ ತನಗೆ ಸಹಾಯ ಮಾಡಲು ನಾನು ಯಾವಾಗಲು ಸಿದ್ಧಳಿದ್ದೇನೆ ಎಂದು ಅವಳಿಗೆ ಗೊತ್ತಿದೆ.’

‘ಸರಿ ಹಾಗಿದ್ದರೆ. ನೀನು ಬಹಳ ಒಳ್ಳೆಯವಳು, ಅನು. ಇಲ್ಲಿಯ ತನಕ ಭೇಟಿಯೆ ಆಗದವರ ಬಗ್ಗೆಯೂ ನೀನು ಇಷ್ಟೊಂದು ಕಾಳಜಿ ವಹಿಸುವುದನ್ನು ನಾನು ಪ್ರಶಂಸಿಸುತ್ತೇನೆ. ನನ್ನ ಹೈಕಿಂಗ್‌ ಬೂಟ್ಸ್‌ ತೆಗೆದುಕೊಳ್ಳಲು ನಮ್ಮ ಅಪಾರ್ಟ್‌ಮೆಂಟಿಗೆ ಬರಲು ಆಗುತ್ತದೆಯೆ?’

‘ಯಾಕಾಗಬಾರದು? ಕೊನೆಗೆ ಈಗಲಾದರು ನಿನ್ನ ಬ್ರಹ್ಮಚಾರಿ ಅಡ್ಡೆ ನೋಡಬಹುದು.’

‘ಹಾಗಿದ್ದರೆ ಬೈಕ್‌ ತೆಗೆದುಕೊಂಡು ಹೋಗೋಣ ಹಾಗು ನಮ್ಮ ಮನೆಯಲ್ಲಿಯೆ ಬೆಳಿಗ್ಗೆಯ ಉಪಾಹಾರ ತೆಗೆದುಕೊಳ್ಳೋಣ.’ ಅವನು ಆ ಇಡೀ ವಾರಾಂತ್ಯವನ್ನು ಅವಳ ಜೊತೆ ಕಳೆಯುತ್ತಿದ್ದಾನೆ ಹಾಗು ಅವಳನ್ನು ತನ್ನ ಮನೆಗೆ ಆಹ್ವಾನಿಸುತ್ತಿದ್ದಾನೆ. ಹಾಗಿದ್ದರೆ, ಈಗ, ನಾನು ಅಧಿಕೃತವಾಗಿ ಆತನ ಗರ್ಲ್‌ ಫ್ರೆಂಡ್‌ ಎಂದಾಯಿತೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X