• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಸ್ತ್ ಮಜಾ ಮಾಡಲು ಝಾಂಝಿಬಾರ್ ಗೆ ಬನ್ನಿ, ಇಲ್ಲಿ ಎಲ್ಲವೂ ಸಸ್ತಾ

By ಡಿ.ಶ್ರೀಹರ್ಷ
|

ಒಂದು ದೇಶದ, ಪುಟ್ಟ ದ್ವೀಪದ, ದೊಡ್ಡ ಹೋಟೆಲ್ ನಲ್ಲಿ ಕೆಲಸ ಮಾಡುವ ನಾನು ಇಲ್ಲಿನ ಬಗ್ಗೆ ಕೆಲವು ವಿಷಯಗಳನ್ನು ಹೇಳಬೇಕು ಅಂದುಕೊಂಡಿದ್ದೀನಿ. ಕರ್ನಾಟಕದಲ್ಲಿ ವಿಪರೀತ ಬಿಸಿಲಂತೆ. ನನ್ನ ಪ್ರೀತಿಯ ಬೆಂಗಳೂರಿನಲ್ಲಿ ರಸ್ತೆ ಕೂಡ ಕಾದ ಕಾವಲಿಯಂತೆ ಆಗಿದೆಯಂತೆ. ಆದರೆ ತಾಂಜೇನಿಯಾ ದೇಶದ, ಝಾಂಝಿಬಾರ್ ಎಂಬ ಪುಟ್ಟ ದ್ವೀಪ ಮಾತ್ರ ವರ್ಷದ ಎಲ್ಲ ಕಾಲವೂ ತಂಪು ತಂಪು ಕೂಲ್ ಕೂಲ್.

ನಮ್ಮ ಹೋಟೆಲ್ ನ ಎದುರಿಗೆ ಉದ್ದೋಉದ್ದಕ್ಕೆ ಮೈ ಚಾಚಿ ಮಲಗಿರುವ ಹಿಂದೂ ಮಹಾಸಾಗರ ಏರಿಳಿತಗಳಿಲ್ಲದೆ ನಮ್ಮ ಮಾಜಿ ಪ್ರಧಾನಿ ಶುದ್ಧ ಮನಮೋಹನ್ ಸಿಂಗ್ ರ ಥರ ಪ್ರಶಾಂತವಾಗಿಯೇ ಇರುತ್ತದೆ. ಈಗಿನ ಬೆಂಗಳೂರನ್ನು ಇಪ್ಪತ್ತು ವರ್ಷದ ಹಿಂದಕ್ಕೆ ಎಳೆದುಕೊಂಡು ಹೋಗಿ, ನೆನಪಿಸಿಕೊಂಡರೆ ಎಷ್ಟು ತಂಪಾದ ಹವೆ ಇತ್ತೋ ಇಲ್ಲಿ ಈಗ ಅಂಥದ್ದೇ ಹವಾಮಾನ.

ಪ್ರವಾಸ ಕಥನ : ಪಟ್ಟಾಯದ 'ಸ್ಯಾಂಚುರಿ ಆಫ್ ಟ್ರುಥ್ ' ದೇಗುಲದಲ್ಲೊಂದು ಸುತ್ತು

ತಾಂಜೇನಿಯಾ ಶಿಲ್ಲಾಂಗ್ ವಿನಿಮಯದ ಬೆಲೆ ಏನು ಗೊತ್ತಾ? ಒಂದು ಶಿಲ್ಲಾಂಗ್ ಅಂದರೆ ಭಾರತದ ಮೂವತ್ತು ಪೈಸೆಗೆ ಸಮ. ಮುನ್ನೂರು ರುಪಾಯಿಗೆ ಹತ್ತು ಸಾವಿರ ಶಿಲ್ಲಾಂಗ್. ಇಲ್ಲಿ ಕೆಲಸ ಮಾಡುವ ಭಾರತೀಯರಿಗೇ ಸಂಬಳ ಹೆಚ್ಚು. ಸ್ಥಳೀಯರಿಗಾದರೆ ಭಾರತದ ರುಪಾಯಿಯಲ್ಲಿ ಹೇಳಬೇಕು ಅಂದರೆ, ಹೆಚ್ಚೆಂದರೆ ಇಪ್ಪತ್ತೆಂಟು ಸಾವಿರ ರುಪಾಯಿ ಸಂಬಳ. ಅದು ಕೂಡ ಮ್ಯಾನೇಜರ್ ಮಟ್ಟದಲ್ಲಿ ಇರುವವರಿಗೆ. ಉಳಿದಂತೆ ಏಳು, ಎಂಟು, ಹತ್ತು ಸಾವಿರ ಅಂದರೆ, ಅಷ್ಟೇ ಸಂಬಳ.

ಇಪ್ಪತ್ತೆಂಟು ಸಾವಿರ ರುಪಾಯಿ ಸಂಬಳ ತೆಗೆದುಕೊಂಡರೆ ಇಲ್ಲಿ ಅವರೇ ರಾಜ-ರಾಣಿ ಎಲ್ಲ.

ಸೊಹಿಲಿ ಎಂಬುದು ಇಲ್ಲಿನ ಸ್ಥಳೀಯ ಭಾಷೆ

ಸೊಹಿಲಿ ಎಂಬುದು ಇಲ್ಲಿನ ಸ್ಥಳೀಯ ಭಾಷೆ

ಇದು ಮುಸ್ಲಿಮ್ ದೇಶ. ಒಂದು ಕಾಲಕ್ಕೆ ಒಮನ್ ದೇಶದ ಆಳ್ವಿಕೆಗೆ ಒಳಪಟ್ಟಿತ್ತು. ಆದರೆ ಈಗ ಸ್ವತಂತ್ರ ಸರಕಾರವಿದೆ. ಸೊಹಿಲಿ ಎಂಬ ಸ್ಥಳೀಯ ಭಾಷೆ ಮಾತನಾಡುವ ಈ ಜನಕ್ಕೆ ತುಂಬ ಬೇಡಿಕೆಗಳಿಲ್ಲ. ಹೆಣ್ಣುಮಕ್ಕಳು ತೀರಾ ಸಂಪ್ರದಾಯ ಎಂದು ಕಟ್ಟುಬಿದ್ದವರಲ್ಲ. ಮುಸ್ಲಿಮ್ ದೇಶಗಳಲ್ಲೇ ಸ್ವಲ್ಪ ಎಂಜಾಯ್ ಮಾಡುವಂಥವರನ್ನು ನೋಡಬೇಕು ಅಂದರೆ ಇಲ್ಲಿ ಖಂಡಿತಾ ನೀವು ಬರಲೇಬೇಕು. ಈ ದೇಶದಲ್ಲಿ ಸಾವಯವ ಕೃಷಿಗೆ ಪ್ರಾಧಾನ್ಯತೆ. ಯಾವುದಕ್ಕೂ ರಾಸಾಯನಿಕಗಳು ಬಳಸಲ್ಲ. ಬಹುತೇಕ ಬೇಕಾದ ಪದಾರ್ಥಗಳೆಲ್ಲ ದುಬೈನಿಂದ ಆಮದಾಗುತ್ತವೆ. ಇಲ್ಲಿನ ವಾತಾವರಣ ತುಂಬ ಚೆನ್ನಾಗಿದೆ ಹಾಗೂ ಬಹಳ ಕಡಿಮೆ ದುಡ್ಡಲ್ಲಿ ಲೈಫ್ ಎಂಜಾಯ್ ಮಾಡಬಹುದು ಎಂದು ಇಲ್ಲಿಗೆ ಬರುವವರೇ ಹೆಚ್ಚು. ನಿಮಗೆ ಇಲ್ಲಿಗೆ ಬರುವ ಉದ್ದೇಶ ಇದ್ದರೆ ವಿಮಾನದ ಬುಕ್ಕಿಂಗ್ ಅನ್ನು ಝಾಂಝಿಬಾರ್ ನಿಂದಲೇ ಮಾಡಿಸಿ. ಅಂದರೆ ಭಾರತದಿಂದ ಇಲ್ಲಿಗೆ ಹಾಗೂ ಇಲ್ಲಿಂದ ಭಾರತಕ್ಕೆ ಎರಡೂ ಕಡೆಯದ್ದನ್ನು ತಾಂಜೇನಿಯಾ ದೇಶದಿಂದಲೇ ಮಾಡಿದರೆ ಬೆಲೆ ಕಡಿಮೆ ಎನ್ನುತ್ತಾರೆ. ಆದರೆ ಒಂದು ಸಲ ನೀವು ಪರೀಕ್ಷೆ ಮಾಡಿಕೊಂಡು ಬಿಡಿ. ಇನ್ನು ದಿನಕ್ಕೆ ಹತ್ತರಿಂದ ಇಪ್ಪತ್ತು ಡಾಲರ್ ನಲ್ಲಿ ರೂಮ್ ಗಳು ಬಾಡಿಗೆಗೆ ಸಿಗುತ್ತವೆ. ಸಿಲ್ಕ್ ರೂಟ್ ಎಂಬುದೊಂದು ಭಾರತೀಯ ಹೋಟೆಲ್ ಇದ್ದು, ಇಲ್ಲಿನ ವೆಜ್ ಬಿರಿಯಾನಿ ನ ಭೂತೋ ನ ಭವಿಷ್ಯತ್.

ಏಪ್ರಿಲ್ ನಿಂದ ಜೂನ್ ತನಕ ಆಫ್ ಸೀಸನ್

ಏಪ್ರಿಲ್ ನಿಂದ ಜೂನ್ ತನಕ ಆಫ್ ಸೀಸನ್

ಏಪ್ರಿಲ್, ಮೇ ಹಾಗೂ ಜೂನ್ ಇಲ್ಲಿ ಆಫ್ ಸೀಸನ್. ಪ್ರವಾಸಿಗರು ಹೆಚ್ಚಾಗಿ ಬರುವುದಿಲ್ಲ. ಎಷ್ಟೋ ಕಡೆ ಇಂಥ ಸಮಯದಲ್ಲಿ ಏನೇನೋ ಆಫರ್ ಗಳು ಕೊಡುತ್ತಾರೆ. ಅದರ ಮೇಲಿನ ಆಸೆಯಿಂದ ಬಂದುಬಿಟ್ಟರೋ ಇಲ್ಲಿ ಎಂಜಾಯ್ ಮಾಡುವುದಕ್ಕೆ ಏನೂ ಇರುವುದಿಲ್ಲ. ಜುಲೈನಿಂದ ಶುರುವಾದರೆ ಮಾರ್ಚ್ ಕೊನೆ ತನಕ ಇಲ್ಲಿ ಮಸ್ತ್ ಮಜಾ ಮಾಡಿ. ಇಲ್ಲಿ ಫುಲ್ ಮೂನ್ ಪಾರ್ಟಿ ಎಂದಿರುತ್ತದೆ. ಭಾರತೀಯ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ ಎರಡು ಸಾವಿರ ರುಪಾಯಿಯೊಳಗೆ ಎಂಟ್ರಿ ಫೀ. ಒಳಗೆ ಹೋದ ಮೇಲೂ ಖರ್ಚು ಅಂಥ ವಜ್ಜೆ ಏನಲ್ಲ. ಕುಣಿದು, ಕುಪ್ಪಳಿಸಿ, ಕುಡಿದು (ಅಭ್ಯಾಸ ಇರುವವರು) ಎಂಜಾಯ್ ಮಾಡಬಹುದು. ಸಾಗರದ ಎದುರಿಗೆ ಇಂಥ ಪಾರ್ಟಿಗಳು ರಾತ್ರಿ ಹೊತ್ತು ನಡೆಯುತ್ತವೆ. ನೀವೇನಾದರೂ ಬೆಂಗಳೂರಲ್ಲೇ ಇರುವವರಾದರೆ ನಕ್ಷತ್ರಗಳು, ಚಂದ್ರನನ್ನು ನೋಡಿ ಅದ್ಯಾವ ಕಾಲವಾಯಿತು? ಇಲ್ಲಿ ಚಂದ್ರ, ನಕ್ಷತ್ರ, ಸಮುದ್ರ, ಸೊಗಸಾದ ವಾತಾವರಣ ಖಂಡಿತಾ ಸಂತಸ ನೀಡುತ್ತದೆ. ಒಮನ್ ದೇಶದ ಆಡಳಿತ ಇತ್ತು ಎಂದು ಹೇಳಿದೆನಲ್ಲ, ಅಗ ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಜೈಲು ನಿರ್ಮಿಸಲಾಗಿತ್ತು. ಈಗ ಅದನ್ನು ಪ್ರಿಸನ್ ಐಲ್ಯಾಂಡ್ ಎನ್ನುತ್ತಾರೆ. ಅಲ್ಲಿಗೆ ಹೋದರೆ ನೂರು ವರ್ಷಕ್ಕೂ ಹೆಚ್ಚು ವಯಸ್ಸಾದ ದೈತ್ಯ ಗಾತ್ರದ ಆಮೆಗಳನ್ನು ನೋಡಬಹುದು.

ಪ್ರವಾಸಕ್ಕೆ ಹೊರಟ್ರಾ? ನಿಲ್ಲಿ, ಈ ಲೇಖನವನ್ನು ಓದುತ್ತಾ ಮುಂದೆ ಸಾಗಿ

ನಡೆದುಕೊಂಡೇ ಹಲವು ಸ್ಥಳ ನೋಡಬಹುದು

ನಡೆದುಕೊಂಡೇ ಹಲವು ಸ್ಥಳ ನೋಡಬಹುದು

ಝಾಂಝಿಬಾರ್ ನಲ್ಲಿ ಜನ ದೊಂಬಿಯಿಲ್ಲ. ಹತ್ತಿರದ ಡರ್ ಎಸ್ ಸಲಾಂನಲ್ಲಿ ಟ್ರಾಫಿಕ್ ಏನೇನೂ ಇಲ್ಲ. ನಡೆದುಕೊಂಡೇ ಹಲವು ಸ್ಥಳ ನೋಡಬಹುದು. ಇನ್ನು ಕಾರು ಬಾಡಿಗೆಗೆ ಮಾಡುವುದಾದರೆ ಅಂಥ ದುಬಾರಿ ಏನಲ್ಲ. ಡ್ರೈವರ್ ಗಳು ಕಾಯುವುದಕ್ಕೆ ಕಿರಿಕಿರಿ ಏನಿಲ್ಲ. ಒಂದಿಡೀ ದಿನಕ್ಕೆ ಬುಕ್ ಮಾಡಿಕೊಂಡರೂ ದುಬಾರಿ ಎನಿಸುವುದಿಲ್ಲ. ಆದರೆ ಇಲ್ಲಿ ಯಾವುದಾದರೂ ಖರೀದಿ ಮಾಡುವಾಗ ಹೊರಗಿನಿಂದ ಬಂದವರು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಸ್ಥಳೀಯವಾಗಿ ಕರೆನ್ಸಿ ವಿನಿಮಯ ಮಾಡಿಕೊಂಡ ಮೇಲೆ ತುಂಬ ದುಡ್ಡು ನಿಮ್ಮ ಕೈಲಿದೆ ಅನಿಸುತ್ತದೆ. ಅದು ಸತ್ಯ ಕೂಡ. ಆದರೆ ವಿಪರೀತ ದುಬಾರಿ ಬೆಲೆ ಹೇಳಿದರೂ ಅದು ಸಸ್ತಾ ಎಂದೆನಿಸಿ, ಕೇಳಿದಷ್ಟು ಹಣ ಕೊಟ್ಟುಬಿಡುವ ಸಾಧ್ಯತೆ ಇದೆ. ಅದ್ದರಿಂದ ಸ್ಥಳೀಯ ಗೈಡ್ ವೊಬ್ಬರ ಸಹಾಯ ಪಡೆದುಕೊಳ್ಳಿ. ಆಗ ನಿಮಗೆ ಸರಿಯಾದ ಬೆಲೆಗೆ ವಸ್ತುಗಳು ದೊರೆಯುತ್ತವೆ. ಭರ್ಜರಿಯಾದ ಶಾಪಿಂಗ್ ಕೂಡ ಮಾಡಬಹುದು. ಇನ್ನು ಇಲ್ಲಿ ಪುರುಷರ ವೇಶ್ಯಾವಾಟಿಕೆ ವಿಪರೀತ ಜಾಸ್ತಿ. ಯುರೋಪಿಯನ್ ದೇಶಗಳಿಂದ ಇಲ್ಲಿಗೆ ಅದರ ಸಲುವಾಗಿಯೇ ಬರುತ್ತಾರೆ. ಅದರಲ್ಲೂ ಜರ್ಮನಿ, ನೆದರ್ ಲ್ಯಾಂಡ್ಸ್ ನವರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಕಲ್ಲಿನಂತೆ ಕಾಣುವ ಇಲ್ಲಿನ ಗಂಡಸರ ದೈಹಿಕ ದಾರ್ಢ್ಯಕ್ಕೆ ಮನಸೋತು, ಅಲ್ಲಿನ ಹೆಂಗಸರು ಬರುತ್ತಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಸ್ಥಳೀಯ ಹುಡುಗಿಯರ ಜತೆ ಡೇಟ್ ಫಿಕ್ಸ್

ಸ್ಥಳೀಯ ಹುಡುಗಿಯರ ಜತೆ ಡೇಟ್ ಫಿಕ್ಸ್

ಅದೇ ರೀತಿ ಹೆಣ್ಣುಮಕ್ಕಳು ಸಹ ಬೋಲ್ಡ್. ಹಾಗಂತ ಅವರ ಒಪ್ಪಿಗೆ ಇಲ್ಲದೆ ಮುಂದುವರಿದರೆ ಅದಕ್ಕೆ ತಕ್ಕ 'ಬೆಲೆ' ತೆರಬೇಕಾಗುತ್ತದೆ. ಇಲ್ಲಿ ಕುಟುಂಬ ವ್ಯವಸ್ಥೆ ಇದೆ. ಅಣ್ಣ-ತಮ್ಮ, ತಂಗಿ, ಅಕ್ಕ ಎಂಬ ಅನುಬಂಧ ಇದೆ. ತಮ್ಮ ಮನೆಯ ಹೆಣ್ಣುಮಕ್ಕಳಿಗೆ, ಗಂಡನನ್ನು ಸಂತೋಷವಾಗಿ ಇರಿಸಿಕೊಳ್ಳುವುದು ಹೇಗೆ ಎಂದು ಹೇಳಿಕೊಡುತ್ತಾರೆ. ಅವರ ಪ್ರಪಂಚ ಕೂಡ ಅಷ್ಟೇ; ಗಂಡ, ಮನೆ, ಮಕ್ಕಳು. ಬೇಡಿಕೆಗಳು ಸಹ ಇಲ್ಲ. ಆ ಕಾರಣಕ್ಕೆ ಇಲ್ಲಿನ ಗಂಡಸರು ಸಂಪಾದನೆಗಾಗಿ ಎದ್ದು-ಬಿದ್ದು ಕೆಲಸ ಮಾಡಲ್ಲ. ನಾಳಿನ ಭವಿಷ್ಯ ಹೇಗೆ ಎಂಬ ಚಿಂತೆಯೂ ಇಲ್ಲ. ಮೊದಲೇ ಹೇಳಿದ ಹಾಗೆ ಕೃಷಿಗೆ ಒಂದಿಷ್ಟು ಪ್ರಾಧಾನ್ಯ ಇದೆ. ಸಂಬಾರ ಪದಾರ್ಥಗಳನ್ನು ಬೆಳೆಯುತ್ತಾರೆ. ಅಷ್ಟೇನೂ ದುಬಾರಿ ಅಲ್ಲದ ಬೆಲೆಗೆ ಮಾರಾಟ ಮಾಡುತ್ತಾರೆ. ಕೆಲವು ಕಡೆ ಪ್ರವಾಸಿಗರನ್ನು ದೋಚಿದ ಉದಾಹರಣೆಗಳು ಇವೆ ಎಂದು ಸ್ಥಳೀಯರು ಹೇಳುತ್ತಾರೆ. ಝಾಂಝೀಬಾರ್ ನಲ್ಲಿ ಅಂಥ ಘಟನೆಗಳಾದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಆದರೂ ಹುಷಾರಾಗಿ ಇರುವುದು ಒಳ್ಳೆಯದು. ಇನ್ನು ನೂರು ಡಾಲರ್ ಖರ್ಚು ಮಾಡಿದರೆ ಸ್ಥಳೀಯ ಹುಡುಗಿಯರ ಜತೆಗೆ 'ಡೇಟ್' ಫಿಕ್ಸ್ ಮಾಡಿಕೊಡುತ್ತಾರೆ. ಅದರ ಮೇಲಿನ ಆಸಕ್ತಿಯಿಂದಲೂ ಇಲ್ಲಿಗೆ ಬರುವವರಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
D. Sri Harsha basically from Bengaluru, currently working in Zanzibar, Tanzania. He writes about the beautiful island of an African country Tanzania.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more