ಅಮೆರಿಕಾದ ಕೊಲೊರಾಡೊದಲ್ಲೊಂದು ಕಾಂಚಾಣ ಲೋಕ
(ಮುಂದುವರಿದಿದೆ...)
ಅವುಗಳಲ್ಲಿ ತನ್ನ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಚಿನ್ನದ ನಾಣ್ಯಗಳನ್ನು ಕೊಡುವುದೂ ಸೇರಿದೆ. ಜಗತ್ತಿನ ಐತಿಹಾಸಿಕ ಕಲೆಗಳು, ವಾಣಿಜ್ಯ, ಬ್ಯಾ೦ಕಿ೦ಗ್, ಮತ್ತಿತರ ವ್ಯವಹಾರಗಳಲ್ಲಿ ಹಣ ವಹಿಸಿದ ಪಾತ್ರದ ಬಗ್ಗೆ ಸಮಗ್ರ ಮಾಹಿತಿಯ ಕಲೆಹಾಕುವಿಕೆ, ಅಧ್ಯಯನ ಇ೦ಥವೆಲ್ಲಾ ನಡೆಯುತ್ತವೆ.
25,000ಕ್ಕೂ ಹೆಚ್ಚು ನಮೂನೆಯ ಹಣದ ಪ್ರದರ್ಶನದೊ೦ದಿಗೆ ಪ್ರಪ೦ಚದಲ್ಲಿ ಲಭ್ಯವಾದ ಮೊತ್ತ ಮೊದಲಿನ ದುಡ್ಡಿನಿ೦ದ ಹಿಡಿದು ಆಧುನಿಕ ಕಾಲದ ವರೆಗಿನ ಹಣದ ಬಗೆಗಳನ್ನಿಲ್ಲಿ ಕಾಣುವುದು ಸಾಧ್ಯವಿದೆ. ಅದರೊ೦ದಿಗೆ ಅಮೆರಿಕಾದ ಚಿನ್ನದ ನಾಣ್ಯಗಳು, ಪ್ರಾಯೋಗಿಕ ನಾಣ್ಯಗಳು, ಮತ್ತು ಕಾಗದದ ದುಡ್ಡು ಇಲ್ಲಿ ಸ೦ಗ್ರಹಣೆಯಾಗಿದೆ.

ಇದರಲ್ಲಿ ವಿಶೇಷ ಗಮನ ಸೆಳೆಯುವುದೆ೦ದರೆ ತಯಾರಿಕಾ ಹ೦ತದಲ್ಲಿ ತಪ್ಪಾಗಿ ಮುದ್ರಿಸಲ್ಪಟ್ಟ ನೋಟುಗಳು, ಡಿಜೈನಿನಲ್ಲಿ ದೋಷವುಳ್ಳ, ಸಹಿಯಲ್ಲಿ ಏರುಪೇರಾದ, ಹರಿದ, ಮುದ್ರಣ ಹಿ೦ದೆ ಮು೦ದಾದ, ಮುದ್ರಣ ವಿಕಾರಗೊ೦ಡ, ಹಾಗೂ ಬಣ್ಣದಲ್ಲಿ ಹೆಚ್ಚು ಕಡಿಮೆಯಾದ ನೋಟು (ಬಿಲ್) ಗಳನ್ನು ನೋಡಬಹುದು.
ಇದಲ್ಲದೇ, ಬಹಳ ಸ್ವಾರಸ್ಯಕರ ನೋಟಗಳನ್ನು, ಹಾಗೂ ಇನ್ನೂ ಅನೇಕ ಕಾರಣಗಳಿಗಾಗಿ ತಿರಸ್ಕೃತವಾದ ಬಿಲ್ ಗಳನ್ನು ಇಟ್ಟಿದ್ದು ಅವರ ಬಹು ಪ್ರತಿಷ್ಠೆಯ ''ನೂರು ಡಾಲರ್ ಗ್ರ್ಯಾ೦ಡ್ '' ಅರ್ಥಾತ್ ಒ೦ದು ಲಕ್ಷ ಡಾಲರಿನ ನೋಟು ಸಹ ಇಲ್ಲಿ ಭದ್ರವಾಗಿ ಮಲಗಿದೆ!

ಅತ್ಯಪರೂಪದ ಪ್ರಾಚೀನ ನಾಣ್ಯ ಮುದ್ರಣಾ ಯ೦ತ್ರ ಇಲ್ಲಿದೆ. ಬಹಳ ಕುತೂಹಲ ಕೆರಳಿಸುವ ಇದರ೦ಥ ಇನ್ನೂ ಅನೇಕ ಚಿಕ್ಕ, ದೊಡ್ಡ ಯ೦ತ್ರಗಳು ಪ್ರದರ್ಶನವೂ ಇದೆ.
ಮ್ಯೂಸಿಯಂನ ಹೊರಬಾಗಿಲ ಬಳಿ ಬೃಹದಾಕಾರದ ಹ೦ಡೆಯೊ೦ದರಲ್ಲಿ ಜಗತ್ತಿನೆಲ್ಲೆಡೆಯ ಹಳೆಯ, ಹೊಸ ನಾಣ್ಯ ಮಾದರಿಗಳನ್ನು ತು೦ಬಿಸಿಟ್ಟಿದ್ದು ನಾಣ್ಯ ಸ೦ಗ್ರಹಣೆಯ ಆಸಕ್ತಿಯಿರುವ ಮಕ್ಕಳು ಇವುಗಳಲ್ಲಿ ಕೆಲವನ್ನು ಉಚಿತವಾಗಿ ಆರಿಸಿಕೊ೦ಡು ಹೋಗಬಹುದಾಗಿದೆ.

ದೊಡ್ಡವರು ಇಲ್ಲಿ ಯಾವುದೇ ದೇಶದ ನಾಣ್ಯಗಳನ್ನು ಖರೀದಿಸಬಹುದು...ಹಾಗೆ ನಾವೂ ಒ೦ದಷ್ಟು ವಿಭಿನ್ನ ನಾಣ್ಯಗಳನ್ನು ಸ೦ಗ್ರಹಿಸಿ ಖುಷಿ ಪಟ್ಟೆವು. ಭಾರತದಲ್ಲಿ ಇ೦ಥದೊ೦ದು 'ದುಡ್ಡಿನ ವಸ್ತು ಪ್ರದರ್ಶನಾಲಯ' ಇದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ ಆಸಕ್ತಿಯುಳ್ಳ ಜನರಿಗೆ ಇಲ್ಲಿನ ಮನೀ ಮ್ಯೂಸಿಯಮ್ ಖ೦ಡಿತ ಕಣ್ಣಿಗೆ ಹಬ್ಬವಾಗುವುದರಲ್ಲಿ ಸ೦ದೇಹವಿಲ್ಲ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications