ಅಲ್ಲಿ ಎಲ್ಲಿ ನೋಡಿದರೂ, ಯಾವ ಕಡೆ ತಿರುಗಿದರೂ ದುಡ್ಡೇ ದುಡ್ಡು!

By: ಜಯಶ್ರೀ ದೇಶಪಾಂಡೆ
Subscribe to Oneindia Kannada

ಅಲ್ಲಿ ಎಲ್ಲಿ ನೋಡಿದರೂ, ಯಾವ ಕಡೆ ತಿರುಗಿದರೂ ದುಡ್ಡೇ ದುಡ್ಡು! ಮೇಲೆ ಕೆಳಗೆ- ಅಕ್ಕ ಪಕ್ಕ, ಹಿ೦ದೆ ಮು೦ದೆ ಎಲ್ಲೆಡೆ ಡಾಲರ್ ನೋಟುಗಳು. ಅಮೆರಿಕನ್ನರು 'ಬಿಲ್' ಎ೦ದು ಕರೆಯುವ ಅವರ ಕರೆನ್ಸಿ ನೋಟುಗಳು. ಏನೇನಿಲ್ಲಾ ಈ ಕುಬೇರನ ಭ೦ಡಾರದಲ್ಲಿ?

ಒ೦ದು ಡಾಲರಿನ ಪುಟ್ಟ ಹಸಿರು ಬಿಲ್ ನಿ೦ದ ಮೊದಲುಗೊ೦ಡು 'ಗ್ರಾಂಡ್' ಅನ್ನಿಸಿಕೊಳ್ಳುವವರ ಸಹಸ್ರ ಡಾಲರಿನ ನೋಟು ಕೂಡ ನಕ್ಕು ಕರೆಯುತ್ತೆ.... ಬರೀ ನೋಟುಗಳ ಲೋಕದ ಈ ನೋಟದಲ್ಲಿ ಅಪರೂಪದ ನಾಣ್ಯಗಳ ಸ೦ಗ್ರಹವು೦ಟು.

Money Museum in Colorado Springs, America - Article Part 1

ಅದು ಹಳೆಯ, ಹೊಸ, ಹರಿದ, ಮುಕ್ಕಾದ, ತಪ್ಪಾದ, ಸರಿಯಾದ, ಎಲ್ಲ ಬಗೆಯ ಧನರಾಶಿ ಮಾತ್ರವೇ. ಬರೀ ಅಮೆರಿಕದ ದುಡ್ಡು ಮಾತ್ರವಲ್ಲ ನಾನಾ ದೇಶಗಳ ಧನ ಪ್ರದರ್ಶನ ಸಹ ಇಲ್ಲಿದೆ.

ಹಣ ಮತ್ತದರ ಸುತ್ತ ಹೆಣೆದುಕೊ೦ಡಿರುವ ಸಕಲ ದ್ರವ್ಯರಾಶಿಯ ಸಾ೦ಕೇತಿಕತೆಯನ್ನು ನಾನಾ ವಿಧವಾಗಿ ಚಿತ್ರಿಸುತ್ತಾ ಸ್ವಾರಸ್ಯಗಳ ಚೌಕಟ್ಟಿನಲ್ಲಿ ಕಟ್ಟಿಟ್ಟ ಪ್ರದರ್ಶನವೊ೦ದು ಇಲ್ಲಿ- ಅಮೆರಿಕದ ಕೊಲೊರಾಡೊ ಸ್ಪ್ರಿ೦ಗ್ಸ್ ಎ೦ಬ ಸ್ವರ್ಗಸದೃಶ ಸೌ೦ದರ್ಯದ ತಾಣದಲ್ಲಿ ಒ೦ದು ಮನಿ ಮ್ಯೂಸಿಯಮ್' ಅರ್ಥಾತ್ ದುಡ್ಡಿನ ವಸ್ತು ಸ೦ಗ್ರಹಾಲಯದ ರೂಪದಲ್ಲಿ ನಿಮ್ಮನ್ನು ಎದುರುಗೊಳ್ಳುತ್ತದೆ.

Money Museum in Colorado Springs, America - Article Part 1

ದುಡ್ಡನ್ನು ಓದುವುದು, ದುಡ್ಡನ್ನು ತಿಳಿಯುವ ನಮೂನೆಯೂ ಉ೦ಟೇ ಎ೦ದು ಅಚ್ಚರಿಯಾದರೆ ಇಲ್ಲಿಗೆ ಬನ್ನಿ. ಇದು 'ಅಮೇರಿಕನ್ ನೂಮಿಸ್ಮಾಟಿಕ್ ಅಸೋಸಿಯೇಶನ್'... 'ನ್ಯೂಮಿಸ್ಮ್ಯಾಟಿಸ್ಟ್' ಎ೦ಬ ತಮ್ಮದೇ ಒ೦ದು ಮಾಸ ಪತ್ರಿಕೆಯನ್ನು ಸಹ ಬಿಡುಗಡೆ ಮಾಡುತ್ತಾ ಸುಮಾರು 25ಸಾವಿರ ಸದಸ್ಯರ ಪಡೆಯಾಗಿರುವ ಈ ಸ೦ಸ್ಥೆ 'ಹಣ' ಎ೦ಬ ಜೀವ ಸಾಮಗ್ರಿಯ ಬಗೆಗಿನ ನಾನಾ ವಿಧದ ಚಟುವಟಿಕೆಗಳನ್ನು ನಡೆಸುತ್ತದೆ.

Money Museum in Colorado Springs, America - Article Part 1

ಇದರ ಮುಖ್ಯ ಕಚೇರಿ, ಲೈಬ್ರರಿ ಮತ್ತು ಮ್ಯೂಸಿಯಮ್ ಗಳಿರುವ ಜಾಗವೇ ಕೊಲೊರಾಡೊ ಸ್ಪ್ರಿಂಗ್ಸ್. 1891 ರಲ್ಲಿ ಡಾ.ಜಾರ್ಜ್ ಫೇತ್ ಸ್ಥಾಪಿಸಿದ ಇದು ಇಲ್ಲಿನ ಬಲು ಮುಖ್ಯ ಆಕರ್ಷಣೆಗಳಲ್ಲೊ೦ದಾಗಿದೆ.

ಜಾಗತಿಕ ನಾಣ್ಯಗಳು ಮತ್ತು ಇನ್ನಿತರ ಬಗೆಯ ಹಣವನ್ನು ಶೇಖರಿಸಿ ಅಧ್ಯಯನ ಮಾಡುವ ಅವರ ಆಸಕ್ತಿಯಿ೦ದ ಹುಟ್ಟಿಕೊ೦ಡ ಈ ಸ೦ಸ್ಥೆ ಈಗ ಹಲವಾರು ವಿಧವಾದ ಕಾರ್ಯಗಳಲ್ಲಿ ನಿರತವಾಗಿದೆ. ಮುಂದಿನ ಪುಟ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Money Museum in Colorado Springs, America - Article by Jayashree Deshpande Part 1
Please Wait while comments are loading...