ಕತಾರ್ ನಲ್ಲಿ ಸಿಂಪಲ್ಲಾಗಿ ಸುಗಮ ಸಂಗೀತ ಸಂಭ್ರಮ

By: ಎಚ್ ಕೆ ಮಧು, ಕತಾರ್
Subscribe to Oneindia Kannada

ಕತಾರ್ ಕನ್ನಡ ಸಂಘ ವನಿತಾ ಪ್ರತಿಭಾ ಸಂಭ್ರಮ ಮತ್ತು ಮಕ್ಕಳ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ಫೆಬ್ರವರಿ 10, ಶುಕ್ರವಾರ ಸಂಜೆಯಂದು ಇಂಡಿಯನ್ ಕಲ್ಚರ್ ಸೆಂಟರ್ ನ ಅಶೋಕ ಹಾಲ್ ನಲ್ಲಿ ಹಮ್ಮಿಕೊಂಡಿದೆ.

ಸಂಜೆ 4.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕದ ಸುಗಮ ಸಂಗೀತ ಕ್ಷೇತ್ರದ ದಿಗ್ಗಜರು ಭಾವ ಸಂಗಮದ ಅನಾವರಣ ಮಾಡಲಿದ್ದು, ಮಧುರ ಗೀತೆಗಳ ಭೋರ್ಗರೆತದ ಜಲಪಾತ ಸೃಷ್ಟಿಸಲಿದ್ದಾರೆ.

ಈ ನಾದಮಯ ಯಾನದಲ್ಲಿ ಸುಗಮ ಸಂಗೀತದಲ್ಲಿ ಹೆಸರು ಮಾಡಿರುವ ರತ್ನಮಾಲ ಪ್ರಕಾಶ್, ಇಂದು ವಿಶ್ವನಾಥ್ ಮತ್ತು ಯುವ ಪ್ರತಿಭೆ ಪಂಚಮ್ ಹಳಿಬಂಡಿ ಕತಾರ್ ಕನ್ನಡಿಗರನ್ನು ರಸಮಯ, ಆನಂದಮಯ, ಕಾವ್ಯಮಯ ಲೋಕಕ್ಕೆ ಕರೆದೊಯ್ಯಲಿದ್ದಾರೆ.

Kannada Cultural activities by Karnataka Sangha Qatar

ಇಷ್ಟು ಮಾತ್ರವಲ್ಲ, ನೋಡಿದಾಕ್ಷಣ ನಮ್ ಮನೆ ಹುಡ್ಗಿ ಎನಿಸುವ, 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದಲ್ಲಿ ಬೆರಗುಗೊಳಿಸುವಂತೆ ನಟನೆ ಮಾಡಿದ್ದ ತಾರೆ ಶ್ವೇತಾ ಶ್ರೀವಾತ್ಸವ್ ಸಮಾರಂಭಕ್ಕೆ ಮೆರುಗು ತರಲಿದ್ದಾರೆ.

ಇನ್ನೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡಿಗರನ್ನು ರಂಚಿಸಲು ತಯಾರಾಗುತ್ತಿವೆ. ಸ್ಥಳೀಯ ಕನ್ನಡಿಗರಿಗಾಗಿ ಫ್ಯಾಷನ್ ಶೋ, ಗೆದ್ದ ಸ್ಪರ್ಧಿಗಳಿಗೆ ಬಹುಮಾನಗಳ ವಿತರಣೆ ಇರಲಿದೆ.

ನಾರಿಶಕ್ತಿ ಮತ್ತು ಮಕ್ಕಳ ಸಾಧನೆಗಳ ಸುಂದರ ಕ್ಷಣಗಳಿಗೆ ನೀವೂ ಸಾಕ್ಷಿಯಾಗಿ. ಮರೆಯದೆ ಬನ್ನಿ. ನಿಮ್ಮ ಕುಟುಂಬ/ ಸ್ನೇಹಿತರೊಂದಿಗೆ ಬನ್ನಿ. ಹೆಚ್ಚಿನ ವಿವರಗಳಿಗಾಗಿ ಕತಾರ್ ಕನ್ನಡ ಸಂಘದ ವೆಬ್ ಸೈಟಿಗೆ ಭೇಟಿ ನೀಡಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Sangha Qatar is celebrating Vanitha Prathibha Sambrama & Children's Talent Search - 2017 - Event on 10.02.2017 at 4.30 pm in Ashoka Hall, ICC. Light music singers Pancham Halibandi, Rathnamala Prakash, Indu Vishwanath, actress Shwetha Srivastav are the chief guests.
Please Wait while comments are loading...