ಅಕ್ಕ ಹೊಸ ಅಧ್ಯಕ್ಷ ಹಳೇಕೋಟೆ ವಿಶ್ವಾಮಿತ್ರ

ನಾಮಪತ್ರ ಪತ್ರ ವಾಪಸ್ಸು ಪಡೆಯುವ ಕಡೆ ದಿನಾಂಕ 17 ಜನವರಿ ಮುಗಿದ ನಂತರವೂ ಯಾರೂ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲಿಲ್ಲ. ಹಾಗಾಗಿ ಆಡಳಿತ ಮಂಡಳಿಗೆ ಈ ಕೆಳಕಂಡವರು ಚುನಾಯಿತರಾದರು ಎಂದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಎಲೆಕ್ಷನ್ ಟ್ರಸ್ಟ್ ನ (In Bellevue, WA 98009) ಆಡಳಿತ ನಿರ್ದೇಶಕ ಜಾನ್ ಬಾಡಿನ್ ಫಲಿತಾಂಶ ಪ್ರಕಟಿಸಿದ್ದಾರೆ.
ಅಕ್ಕದ ಆರಂಭದ ದಿನಗಳಿಂದಲೂ ಸಂಸ್ಥೆಯ ನಿಷ್ಠಾವಂತ ಕಾರ್ಯಕರ್ತರಲ್ಲಿ ಹಿರಿಯರಾಗಿರುವ ಡಾ. ವಿಶ್ವಾಮಿತ್ರ ಮೂರು ದಶಕಗಳಿಂದ ಅಮೆರಿಕೆಯಲ್ಲಿ ನೆಲೆಸಿದ್ದಾರೆ. ಅಕ್ಕ ಆಡಳಿತ ಅಂಗದ ನಾನಾ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸ್ವಭಾವತಃ ಕಡಿಮೆ ಮಾತನಾಡುವ ಅವರ ಹೆಗಲ ಮೇಲೆ ಈಗ ಹೆಚ್ಚು ಕೆಲಸ ಮತ್ತು ಜವಾಬ್ದಾರಿ ಕುಳಿತಿದೆ.
"ಕೇವಲ ಅಮೆರಿಕ ಅಷ್ಟೇ ಅಲ್ಲ, ವಿಶ್ವದ ಎಲ್ಲ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಅಕ್ಕ ರೂಪುಗೊಂಡಿದೆ. ಇದನ್ನು ಮತ್ತಷ್ಟು ಸದೃಢ ಮಾಡುವುದು ಹಾಗೂ ಕನ್ನಡಿಗರ ಆಶೋತ್ತರಗಳಿಗೆ ಕಿವಿ-ಕಣ್ಣಾಗುವುದು ನನ್ನ ಧ್ಯೇಯ. ಈ ಕಾಯಕದಲ್ಲಿ ಈ ಬಾರಿ ಆಡಳಿತ ಮಂಡಳಿಗೆ ಆಯ್ಕೆಯಾಗಿರುವ ಯುವಕರ ಪಾತ್ರ ತುಂಬ ದೊಡ್ಡದು" ಎಂದು ವಿಶ್ವಾಮಿತ್ರ ಒನ್ಇಂಡಿಯ ಕನ್ನಡಕ್ಕೆ ಬೆಂಗಳೂರಿನಲ್ಲಿ ತಿಳಿಸಿದರು.
ಅಕ್ಕದ 2013-14 ಸಾಲಿನ ಪದಾಧಿಕಾರಿಗಳು ಮತ್ತು ಅವರು ನಿರ್ವಹಿಸುವ ಹುದ್ದೆಗಳು ಹೀಗಿದೆ :
| ಡಾ. ಹಳೇಕೋಟೆ ವಿಶ್ವಾಮಿತ್ರ | ಅಧ್ಯಕ್ಷ | ಮೆಕ್ಲೀನ್, ಟೆಕ್ಸಾಸ್ |
| ಸಂಜಯ್ ರಾವ್ | ಕಾರ್ಯದರ್ಶಿ | ಆಶ್ ಬರ್ನ್, ವರ್ಜೀನಿಯ |
| ವೇಣು ಜಿ ವೈಶ್ಯ | ಕೋಶಾಧಿಕಾರಿ | ಮಿಷಿಗನ್ |
| ನಾಗ್ ಭೂಷಣ್ ಆರಾಧ್ಯ | ಉಪಾಧ್ಯಕ್ಷ | ಟೆಕ್ಸಾಸ್ |
| ರಾಜ್ ಪಾಟೀಲ್ | ಉಪಾಧ್ಯಕ್ಷ | ನ್ಯೂ ಜರ್ಸಿ |
| ಶಂಕರ್ ಶೆಟ್ಟಿ | ಉಪಾಧ್ಯಕ್ಷ | ವೆಸ್ಟ್ ಮಿನಿಸ್ಟರ್, ನ್ಯೂ ಜರ್ಸಿ |
| ವಿಜಯ್ ಲಕ್ಷ್ಮಣ್ | ಜಂಟಿ ಕೋಶಾಧಿಕಾರಿ | ಕ್ಯಾಲಿಫೋರ್ನಿಯ |
| ಡಾ. ನವೀನ್ ಕೃಷ್ಣ | ಜಂಟಿ ಕೋಶಾಧಿಕಾರಿ | ಸೇಂಟ್ ಲೂಯಿ |
| ರವಿ ಬೋರೇಗೌಡ | ಜಂಟಿ ಕಾರ್ಯದರ್ಶಿ | ರಿಚ್ಮಂಡ್, ವರ್ಜೀನಿಯ |
| ಹರಿದಾಸ್ ಲಹರಿ | ಜಂಟಿ ಕಾರ್ಯದರ್ಶಿ | ವಿಯನ್ನ, ವರ್ಜೀನಿಯ |












Click it and Unblock the Notifications