ಸಮಯದ ಹೊಡೆತಕ್ಕೆ ಸಿಕ್ಕು ಮಾರ್ಪಾಟಾದ ವಾಚ್

ಮೊದಮೊದಲು ವಾಚು ತಯಾರಿಕೆ ಸ್ವಿಟ್ಜರ್‌ಲ್ಯಾಂಡಿನ ಸ್ವಾಮಿತ್ವದಲ್ಲಿದ್ದರೂ, ಕ್ರಮೇಣ ಜಪಾನೀಯರು, ನಂತರ ಏಷಿಯಾದ ಇತರ ದೇಶಗಳೂ ವಾಚು ತಯಾರಿಕೆಯಲ್ಲಿ ಪ್ರಾವೀಣ್ಯತೆ ಪಡೆದರು. ಜಗತ್ತಿಗೆ ಮೊಟ್ಟ ಮೊದಲು ಕ್ವಾರ್ಟ್ಸ್ ವಾಚನ್ನು ಪರಿಚಯಿಸಿದವರು ಜಪಾನಿನ ಸೀಕೋ (Seiko) ಕಂಪನಿಯವರು.
ಎಂಭತ್ತರ ದಶಕ ಮತ್ತು ಅದಕ್ಕೂ ಮುಂಚೆ ಭಾರತದಲ್ಲಿ ವಾಚುಗಳನ್ನು ತಯಾರಿಸುವ ಕಂಪನಿ ನಮ್ಮ ಬೆಂಗಳೂರಿನಲ್ಲೇ ಇರುವ ಎಚ್ ಎಮ್ ಟಿ ಮಾತ್ರ. ಕೇಂದ್ರ ಸರಕಾರದ ಸ್ವಾಮಿತ್ವದ ಈ ಕಂಪನಿ ಜಪಾನಿನ ಸಿಟಿಜನ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಅನೇಕ ಸುಂದರ ವಿನ್ಯಾಸದ ವಾಚುಗಳನ್ನು ಉತ್ಪಾದಿಸುತ್ತಿತ್ತು. "ಎಚ್ಎಮ್‌ಟಿ ದೇಶ ಕಿ ಧಡಕನ್" ಎಂಬುದು ಅದರ ಮೂಲಮಂತ್ರವಾಗಿತ್ತು. ಆದರೆ ಎಂಭತ್ತರ ದಶಕದಲ್ಲಾದ ಉದ್ದಿಮೆಗಳ ಉದಾರೀಕರಣದಿಂದ ಅನೇಕ ಖಾಸಗಿ ಸ್ವಾಮ್ಯದ ವಾಚು ಉದ್ದಿಮೆಗಳು ಕಾಲಿರಿಸಿ ಎಚ್ ಎಮ್ ಟಿ ವಾಚುಗಳು ಸ್ಪರ್ಧೆಯಲ್ಲಿ ಕಳೆಗುಂದಿ ಮೂಲೆಗೊತ್ತಲ್ಪಟ್ಟಿತು.
1987ರಲ್ಲಿ ಕಾಲಿಟ್ಟ ಟಾಟಾ ಕಂಪನಿಯ ಸ್ವಾಮ್ಯದ ಟೈಟಾನ್ ತನ್ನ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡು ಜನಪ್ರಿಯತೆಯ ತುದಿಗೇರಿತು. ಆಗ ತಾನೇ ಮನೆಮನೆಗಳಲ್ಲಿ ಕಾಲಿಟ್ಟಿದ್ದ ದೂರದರ್ಶನದಲ್ಲಿ ಟೈಟಾನ್ ನೀಡುತ್ತಿದ್ದ ಮೋಜಾರ್ಟ್‌ನ 25ನೆಯ ಸಿಂಫೊನಿಯ ಇಂಪಾದ ಸಂಗೀತ ಹೊಂದಿದ ಸುಂದರ ಜಾಹೀರಾತು ಯಾರಿಗೆ ನೆನಪಿಲ್ಲ?
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications