ಇಪ್ಪತ್ತೈದು ರೂಪಾಯಿಗಳ ಡಿಜಿಟಲ್ ವಾಚು

Story of my wrist watch
ನಾನು ಚಿಕ್ಕವನಿದ್ದಾಗ ನನ್ನ ಅಜ್ಜ ನನ್ನ ಅಣ್ಣನಿಗೊಂದು ವಾಚು ಕೊಟ್ಟರು. ಅದು ನನ್ನ ಅಣ್ಣ ಹತ್ತನೇ ತರಗತಿಯಲ್ಲಿ ಒಳ್ಳೇ ನಂಬರು ಪಡೆದು ಪಾಸಾಗಿದ್ದಕ್ಕೆ ಸಿಕ್ಕ ಬಹುಮಾನ. ಅದು ತುಂಬಾ ದಿನಗಳಿಂದ ನನ್ನ ಅಜ್ಜ ಉಪಯೋಗಿಸುತ್ತಿದ್ದ ಸ್ವಿಟ್ಜರ್‌ಲ್ಯಾಂಡಿನಲ್ಲಿ ತಯಾರಿಸಿದ ಹೆನ್ರಿ ಸ್ಯಾಂಡೋಜ್ ಎಂಬ ವಾಚು.

ಅಂತಹ ವಾಚು ನಾನು ಹತ್ತನೇ ತರಗತಿಯಲ್ಲಿ ಅಂತಹುದೇ ನಂಬರು ಪಡೆದರೆ ನನಗೂ ಸಿಗುವುದೆಂಬ ಭರವಸೆ ಇದ್ದರೂ ನನಗೆ ಆಗಲೇ ವಾಚು ಬೇಕು ಎಂಬ ಆಸೆ. ಅದಕ್ಕಾಗಿ ನನ್ನ ತಂದೆಯನ್ನು ಪೀಡಿಸತೊಡಗಿದೆ. ಅಂದು ಒಳ್ಳೇ ವಾಚು ಎಂದರೆ ನೂರೈವತ್ತು ರೂಪಾಯಿ. ಅಷ್ಟು ಹಣ ಖರ್ಚು ಮಾಡಲು ನನ್ನ ತಂದೆ ಒಪ್ಪಲಿಲ್ಲ. ಕೊನೆಗೆ ಡಿಜಿಟಲ್ ವಾಚು ಕೊಡಿಸಿ ಎಂದು ಒತ್ತಾಯಿಸಿದಾಗ, ಮನಸ್ಸಿಲ್ಲದ ಮನಸ್ಸಿನಿಂದ ಇಪ್ಪತ್ತೈದು ರೂಪಾಯಿಗಳ ಡಿಜಿಟಲ್ ವಾಚು ಕೊಂಡು ಕೊಟ್ಟರು.

ಮುಳ್ಳುಗಳಿಲ್ಲದೇ ಸಮಯವನ್ನು ನಂಬರುಗಳಿಂದ ನೇರವಾಗಿ ತೋರಿಸುತ್ತಿದ್ದ ಆ ವಾಚು ನನಗೆ ತುಂಬಾ ಅಚ್ಚುಮೆಚ್ಚಿನದಾಗಿತ್ತು. ನನ್ನದೇ ಆದ ಮೊತ್ತ ಮೊದಲ ಸ್ವತ್ತಾದ ಅದರ ಮೇಲೇ ನನ್ನ ಮೋಹ ಅತಿಯಾಗಿತ್ತು. ಆದರೆ ಕೇವಲ ಒಂದೇ ತಿಂಗಳಲ್ಲಿ ಬೆಳಗಾವಿಯ ಮಳೆರಾಯನ ಹೊಡೆತಕ್ಕೆ ಸಿಕ್ಕು ಅದು ಅಸು ನೀಗಿದಾಗ, ದುಂಬಾಲು ಬಿದ್ದು ಹಣ ಪೋಲು ಮಾಡಿದ್ದಕ್ಕೆ ಸಿಕ್ಕ ಮನೆಯವರೆಲ್ಲರ ಬೈಗುಳಿಗಿಂತ ಅಪ್ಯಾಯಮಾನವಾದ, ಅಂತರಂಗದ ಮಿತ್ರನೊಬ್ಬನನ್ನು ಕಳೆದುಕೊಂಡ ನೋವು ನನ್ನನ್ನು ಅನೇಕ ದಿನಗಳವರೆಗೆ ಕಾಡಿತ್ತು.

ಮುಂದೆ ಒಂದೇ ವರ್ಷದಲ್ಲಿ ನಾನು ಕೂಡ ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾದೆ. ಆಗ ಅಜ್ಜ ನನಗೆ ವಾಚು ಕೊಳ್ಳಲು ಹಣ ನೀಡಿದರೂ, ನಾನು ವಾಚು ಕೊಳ್ಳಲಿಲ್ಲ. ಕೊನೆಗೆ ನನ್ನ ತಂದೆ ತಾವೇ ವಾಚೊಂದನ್ನು ತಂದುಕೊಟ್ಟರು. ಇನ್ನೂ ಮುಂದೆ ಆರೇಳು ವರ್ಷಗಳ ನಂತರ ನಾನು ನೌಕರಿಗಾಗಿ ದೂರದ ಗುಜರಾತಿಗೆ ಹೋಗಿ ಮೊದಲ ಬಾರಿಗೆ ಊರಿಗೆ ಮರಳಿದಾಗ ತಂದೆಗೊಂದು ವಾಚನ್ನು ತಂದು ಕೊಟ್ಟೆ. ಆಗ ತಾನೇ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಟೈಟಾನ್‌ನ ಸುಂದರವಾದ ಸಭ್ಯ ವಿನ್ಯಾಸದ ವಾಚದು. ಇಂದಿಗೆ ಹತ್ತೊಂಬತ್ತು ವರ್ಷಗಳಾದರೂ ಅವರು ಅದನ್ನು ಇನ್ನೂ ಒಳ್ಳೇ ಸುಸ್ಥಿತಿಯಲ್ಲಿಟ್ಟು ಉಪಯೋಗಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+