ಶ್ರೀಮಂತರ ವೈಭವದ ಖಯಾಲಿಯ ವಾಚು

ಜಗತ್ತಿನ ಅತ್ಯಂತ ದುಬಾರಿ ವಾಚು ಚೋಪಾರ್ಡ 201 ಎಂಬ ವಾಚು. ಇದರ ಬೆಲೆ 2.5 ಕೋಟಿ ಅಮೆರಿಕನ್ ಡಾಲರುಗಳು. ಯಾವುದೋ ಅರಬ್ಬೀ ಶೇಖ್ ಇದನ್ನು ಕೊಂಡುಕೊಂಡಿರಬೇಕಷ್ಟೆ. ಒಂದು ಕಾಲಕ್ಕೆ ಸಾಮಾನ್ಯ ವಾಚು ತಯಾರಿಕಾ ಘಟಕಗಳಾಗಿದ್ದ ಸ್ವಿಟ್ಜರ್‌ಲ್ಯಾಂಡಿನ ಪ್ರಮುಖ ಬ್ರ್ಯಾಂಡ್‌ಗಳಾದ ರೋಲೆಕ್ಸ್, ಟ್ಯಾಗ್ ಹೀವರ್, ಕಾರ್ಟಿಯರ್, ಮೊಂಟ್‌ಬ್ಲಾಂಕ್ ಇತ್ಯಾದಿಗಳು ಇಂದು ವೈಭವದ ಬ್ರ್ಯಾಂಡ್‌ಗಳಾಗಿ ಪರಿವರ್ತನೆ ಹೊಂದಿವೆ. ಇದಲ್ಲದೇ ವಾಚುಗಳನ್ನು ರೂಪಾಂತರಗೊಳಿಸಿ ಅಂತರಿಕ್ಷ ಯಾನಕ್ಕೆ ಮತ್ತು ಸಮುದ್ರದಾಳದ ಜಿಗಿತಕ್ಕೆ ಅಣಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಈಗಂತೂ ಆಪಲ್ ಮತ್ತು ಪೆಬಲ್‌ನಂತಹ ತಂತ್ರಜ್ಞಾನದ ದೈತ್ಯ ಕಂಪನಿಗಳು ಈ ಕೈವಾಚುಗಳನ್ನೂ ಇನ್ನೂ ಒಂದು ಹೆಜ್ಜೆ ಮುಂದೆ ಕರೆದೊಯ್ದು, ಈ ವಾಚುಗಳು ನಮ್ಮ ಸ್ಮಾರ್ಟ್ ಫೋನುಗಳೊಂದಿಗೆ ವೈರ್‌ಲೆಸ್ ಸಂಪರ್ಕ ಹೊಂದುವಂತೆ ಅಭಿವೃದ್ಧಿಗೊಳಿಸಿವೆ. ಅಂದರೆ ನಮಗೊಂದು ಎಸ್ ಎಮ್ ಎಸ್ ಅಥವಾ ಫೋನು ಬಂದರೆ, ನಮ್ಮ ವಾಚು ಅಲ್ಲಾಡುತ್ತದೆ ಅಥವಾ ಗುಣುಗುಟ್ಟುತ್ತದೆ! ಇದರರ್ಥ ಕೇವಲ ನಮ್ಮ ಫೋನು ಮಾತ್ರ ಸ್ಮಾರ್ಟ್ ಅಲ್ಲ, ನಮ್ಮ ವಾಚು ಕೂಡ ಸ್ಮಾರ್ಟ್ ವಾಚು ಆಗಿ ಬದಲಾಗುತ್ತಿದೆ! ನಮ್ಮ ಇಂಜಿನಿಯರುಗಳು ಮತ್ತು ವಿಜ್ಞಾನಿಗಳಿಗೆ ಜೈ ಎನ್ನಬಹುದು ತಾನೆ?
ಸಮಯವನ್ನು ತೋರಿಸಲು ತಯಾರಾದ ಈ ಕೈ ವಾಚು ಸಮಯದ ಹೊಡೆತಕ್ಕೆ ಸಿಕ್ಕು ಅನೇಕ ಮಾರ್ಪಾಟುಗಳನ್ನು ಕಂಡಿದೆ. ಪರಿವರ್ತನೆ ಈ ಜಗತ್ತಿನ ನಿಯಮವಷ್ಟೇ? ಅದಕ್ಕೆ ವಾಚು ಕೂಡ ಹೊರತಲ್ಲ. ಕೇವಲ ಸಮಯವನ್ನು ತೋರುವ ಯಂತ್ರಕ್ಕೆ ಸೀಮಿತವಾಗದೇ ಅದು ತನ್ನನ್ನು ನವೀನತೆಯ ಫ್ಯಾಷನ್‌ನ ಚಿಹ್ನವಾಗಿ ಪರಿವರ್ತನೆಗೊಂಡು ಇನ್ನೂ ವಿಕಸಿಸಿದೆ. ಸ್ಮಾರ್ಟ್ ವಾಚು ಆಗಿ ಬದಲಾಯಿಸಿ ವಿಕಾಸದ ಹೊಸ ಶಿಖರವನ್ನೇರತೊಡಗಿದೆ. ಏನೇ ಆಗಲಿ ಈ ಜಗತ್ತಿನ ರಂಗಭೂಮಿಯಲ್ಲಿ ಕಾಲರಾಯನ ಓಟ ಮಾತ್ರ ಸಾಗುತ್ತಿರುತ್ತದೆ. ಅದನ್ನು ನಿಲ್ಲಿಸಲಾಗುವುದಿಲ್ಲ. ನಿಧಾನಗೊಳಿಸಲಾಗುವುದಿಲ್ಲ. ವಸ್ತುಗಳು, ಪಾತ್ರಗಳು ಮತ್ತು ಪ್ರೇಕ್ಷಕರಾದ ನಾವು ನೀವೆಲ್ಲ ಬದಲಾಗುತ್ತಿರುತ್ತೇವೆ ಅಷ್ಟೇ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications