ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಬೆಳಗಿದ ವಚನಗಳ ನಿರ್ಮಲ ಜ್ಯೋತಿ

By ವೆಂಕಟ್ (ಸಿಂಗಪುರ)
|
Google Oneindia Kannada News

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಚನಸಾಹಿತ್ಯವು ಬಹುದೊಡ್ದ ಪಾತ್ರವನ್ನು ವಹಿಸುತ್ತದೆ. ವಚನಗಳು 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಮುಖ್ಯವಾಹಿನಿಗಳಾಗಿದ್ದವು. ವಚನಗಳೆಂದರೆ ವಚನಕಾರರಿಂದ ಪ್ರಮಾಣದ ರೂಪದಲ್ಲಿ ಬಂದು ಸಾಮಾನ್ಯ ಮನುಷ್ಯನ ಜೀವನದಲ್ಲಿ ಸುಭೀಕ್ಷೆಗಳನ್ನು ತುಂಬಿ ಶಾಂತಿಯುತ ಜೀವನ ಮತ್ತು ಸಮಾಜದ ಸೃಷ್ಟಿಗೆ ಪೂರಕವಾಗಿ ಸಂದೇಶಗಳನ್ನು ನೀಡಿ ಜನರಲ್ಲಿ ಅರ್ಥಪೂರ್ಣ ಬದುಕನ್ನು ಅಳವಡಿಸಿಕೊಂಡು ಮೇಲು, ಕೀಳು ಭಾವನೆಗಳನ್ನು ತೊರೆದು, ಸಾಮರಸ್ಯವನ್ನು ಕಾಪಾಡುವಂತೆ ನಿರ್ದೇಶಿಸುವ, ಯಾವುದೇ ಸಾಹಿತ್ಯದ ಪ್ರಾಕಾರಗಳ ಬಂಧನಗಳ ಸಿಲುಕಿಗೆ ಒಳಗಾಗದೆ ಮೂಡಿ, ಸಾಮಾನ್ಯ ಜನರಿಗೂ ಸಹ ನಿಲುಕಿ, ಅರ್ಥವಾಗುವಂತಹ ಸಂದೇಶಗಳೆನ್ನಬಹುದು.

ಕನ್ನಡ ಸಂಘ ಸಿಂಗಪುರ ಮತ್ತು Woodlands CC IAECಯ ಸಂಯೋಗದಲ್ಲಿ ಶನಿವಾರ ಜುಲೈ 21ರಂದು ವುಡ್‌ಲ್ಯಾಂಡ್ಸ್ ಸಭಾಂಗಣದಲ್ಲಿ "ವಚನಾಂಜಲಿ-2012" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅನಂತ ಮತ್ತು ಸರ್ವಕಾಲಿಕವಾದ ವಚನಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿಯ ಶ್ರಮ ಮತ್ತು ಶ್ರದ್ಧೆಯ ಫಲವೇ ಈ "ವಚನಾಂಜಲಿ" ಕಾರ್ಯಕ್ರಮದ ಉದ್ದೇಶವೆನ್ನಬಹುದು. ಈ "ವಚನಾಂಜಲಿ" ಎಂಬ ಕನಸಿನ ಕೂಸನ್ನು ನನಸಾಗಿಸುವ ಕನ್ನಡ ಸಂಘದ ಉದ್ದೇಶವನ್ನು ಸಾಕಾರ ಮಾಡಿದ ರೂವಾರಿಗಳಾದ ಜಿ.ವಿ.ರೇಣುಕ ಮತ್ತು ರಶ್ಮಿ ಉದಯಕುಮಾರ್ ಅವರ ಶ್ರಮ, ಶ್ರದ್ಧೆ ಮತ್ತು ಸದುದ್ದೇಶ ಶ್ಲಾಘನೀಯ.

Vachananjali-2012

ರಶ್ಮಿ ಉದಯಕುಮಾರ್ ಮತ್ತು ಕನ್ನಡ ಸಂಘದ ಉಪಾಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಅವರ ನೇತೃತ್ವದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿಯವರು ಮುಖ್ಯ ಅತಿಥಿಗಳಾಗಿದ್ದರು. ಅರ್ಚನ ಪ್ರಕಾಶ್ ಅವರು ನಿರೂಪಣೆಯಲ್ಲಿ ವಚನಗಳ ಸಂಕ್ಷಿಪ್ತ ವಿವರಣೆಗಳೊಂದಿಗೆ ಆವುಗಳ ಮಹತ್ವ ಮತ್ತು 12ನೇ ಶತಮಾನದಲ್ಲಿ ವಚನಸಾಹಿತ್ಯದಿಂದಾದ ಸಾಮಾಜಿಕ ಕ್ರಾಂತಿಯನ್ನು ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ವಚನಗಳ ಕೊಡುಗೆಗಳನ್ನು ವಿವರಿಸಿದರು. ಅರವಿಂದ ಜತ್ತಿ, ಭಾಗ್ಯಮೂರ್ತಿ, ಜಿ.ವಿ.ರೇಣುಕ ಮತ್ತು ವಿಜಯ ರಂಗ ಪ್ರಸಾದ್ ಅವರು ಜ್ಯೋತಿ ಬೆಳಗಿ ಎರಡನೆಯ ವರ್ಷಕ್ಕೆ ಕಾಲಿಟ್ಟಿರುವ "ವಚನಾಂಜಲಿ"-2012" ಕಾರ್ಯಕ್ರಮ ಉದ್ಘಾಟಿಸಿದರು. ಜಿ.ವಿ.ರೇಣುಕ ಅವರು ರಚಿಸಿದ, ಸಂಗೀತ ಕಲಾನಿಧಿ ಭಾಗ್ಯಮೂರ್ತಿ ಅವರ ಸಂಗೀತ ಸಂಯೋಜನೆಯ "ಭಾವ ಪುಷ್ಪ ಅರಳಿದಾಗ" ವಚನವನ್ನು ಕುಮಾರಿ ಅಕ್ಷಯ ಪ್ರಭು ಮತ್ತು ಕುಮಾರಿ ಮೇಘನ ಹೆಬ್ಬಾರ್ ಅವರು ಹಾಡಿದರು. ವಿಜಯ ರಂಗ ಪ್ರಸಾದ್ ಅವರು ಎಲ್ಲರಿಗೂ ಸ್ವಾಗತವನ್ನು ಕೋರಿ, ಮುಖ್ಯ ಅತಿಥಿಗಳಾದ ಅರವಿಂದ ಜತ್ತಿ ಅವರ ಕಿರು ಪರಿಚಯ ಮಾಡಿಕೊಟ್ಟರು. ಅರವಿಂದ ಜತ್ತಿ ಅವರು "ವಚನಗಳು" ಎಂಬ ಕನ್ನಡ ಮತ್ತು ಆಂಗ್ಲಭಾಷೆಯ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಅರವಿಂದ ಜತ್ತಿಯವರು "ವಚನಾಂಜಲಿ" ಎಂಬುದು ವಚನಗಳ ಅರ್ಪಣೆ ಎಂದು ವಿವರಿಸುತ್ತಾ, ಈ ಅಪರೂಪದ ವಚನಾಂಜಲಿ ಕಾರ್ಯಕ್ರಮವನ್ನು ಮಾಡಿರುವ ಕನ್ನಡ ಸಂಘ ಸಿಂಗಪುರದ ಪ್ರಯತ್ನ ನಿಜಕ್ಕೂ ಅಭಿವಂದನೀಯವೆಂದರು. ಬಸವಣ್ಣನವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವೆಂಬ ಭಾವನೆಯಲ್ಲಿದ್ದ ಜಗತ್ತಿಗೆ ಇಂದು ಕನ್ನಡ ಸಂಘ ಬಸವಣ್ಣನವರಿಗೆ ನೀಡಿರುವ ಅಗಾಧ ಗೌರವವೆಂದಾಗ ಸಭಿಕರು ಚಪ್ಪಾಳೆ ತಟ್ಟಿ ಪ್ರಶಂಸಿಸಿದರು. ಬಸವಣ್ಣನವರ ಕಲ್ಪನೆಯಲ್ಲಿ "ಇವನ್ಯಾವರ.. ಇವನ್ಯಾವರ.. ಎಂದೆನೆಸದೆ" ಇಡೀ ಜಗತ್ತೇ ನನ್ನ ಮಕ್ಕಳು ಎನ್ನುವಂತಹ ಭಾವನೆಯ ಬಸವಣ್ಣನಿಗೆ ಯಾವುದೋ ಒಂದು ಧರ್ಮದ ಸೀಮಿತತೆಯನ್ನು ಇಟ್ಟು ಅವರು ಮಾತ್ರ ಕಾರ್ಯಕ್ರಮಗಳನ್ನು ಮಾಡಬೇಕೆನ್ನುವದನ್ನು ಬಿಟ್ಟು ಸಿಂಗಪುರ ಕನ್ನಡ ಸಂಘ ಸಿಂಗಪುರ ಎಲ್ಲರನ್ನೂ ಒಟ್ಟುಗೂಡಿಸಿ ಮಾಡಿರುವ ಈ ವಚನಾಂಜಲಿ ನಿಜಕ್ಕೂ ಬಸವಣ್ಣನವರಿಗೆ ಅರ್ಪಣೆಯಾಗಿದೆ ಎಂದು ನುಡಿದರು.

English summary
Vachananjali-2012 was organized by Singapore Kannada Sangha in Singapore on July 21, 2012 in association with Woodlands CC IAEC. A report by Venkat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X