ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೋಸ್ಟನ್‌ನಲ್ಲಿ 2ನೇ ನಾವಿಕ ವಿಶ್ವ ಕನ್ನಡ ಸಮಾವೇಶ 2013

By * ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

ಕನ್ನಡ ನಾಡಿನ ಪ್ರಸಿದ್ದ ಕವಿಗಳ ಈ ಕನ್ನಡ ನಾಣ್ನುಡಿಗಳನ್ನೇ ಧ್ಯೇಯ ಮಾಡಿಕೊಂಡು ಅಮೆರಿಕಾದಲ್ಲಿರುವ ನ್ಯೂ ಇಂಗ್ಲೆಂಡ್ ಕನ್ನಡಿಗರು, ನಮ್ಮ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಇಲ್ಲಿಯೂ ಸಹ ಪಸರಿಸಲು ಮುಂದಿನ ವರುಷ 2013ರ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ಬೋಸ್ಟನ್‌ನಲ್ಲಿ "ನಾವಿಕ(ನಾವು ವಿಶ್ವ ಕನ್ನಡಿಗರು)" ಸಂಸ್ಥೆಯ ಆಶ್ರಯದಲ್ಲಿ ಎರಡನೇ ವಿಶ್ವ ಕನ್ನಡ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ.

ಅಮೆರಿಕಾದ ಅತ್ಯಂತ ಹಳೆಯ ನಗರ, 18ನೆ ಶತಮಾನದಲ್ಲಿ ಅಮೆರಿಕನ್ ಕ್ರಾಂತಿಗೆ ಪ್ರಸಿದ್ದಿಯಾಗಿರುವ, ಅನೇಕ ಸುಂದರ ಪ್ರೇಕ್ಷಣೀಯ-ಆಕರ್ಷಣೀಯ ಸ್ಥಳಗಳನ್ನು ಹೊಂದಿರುವ, ನ್ಯೂ ಇಂಗ್ಲೆಂಡ್ನಲ್ಲೇ ಅತ್ಯಂತ ದೊಡ್ಡ ನಗರಗಲ್ಲಿ ಒಂದಾಗಿರುವ ಬೋಸ್ಟನ್ನಿನಲ್ಲಿ ಈ ನುಡಿಹಬ್ಬ ನಡೆಯಲಿದೆ.

ಮಂದಾರ - ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಹಾಗು ಹೊಯ್ಸಳ - ಕನೆಕ್ಟಿಕಟ್ ಕನ್ನಡ ಕೂಟಗಳ ಸಹಕಾರದೊಂದಿಗೆ ಜರುಗಲಿರುವ ಈ ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಸಿದ್ದತೆ ಮಾಡಿಕೊಳ್ಳಲು ಹಾಗು ನಾವಿಕ ಸಂಸ್ಥೆಯ ಸ್ಥಾಪನೆಯ ಉದ್ದೇಶ ಹಾಗು ಚಟುವಟಿಕೆಗಳ ಬಗ್ಗೆ ವಿವರಿಸಲು ಕನೆಕ್ಟಿಕಟ್ನಲ್ಲಿನ ಶ್ರೀ ಸ್ವಾಮಿ ಸತ್ಯನಾರಾಯಣ ದೇವಸ್ಥಾನದಲ್ಲಿ ಸಭೆಯನ್ನು ಜೂನ್ 17ರಂದು ಡಾ. ರಾಜೂರ್ ಅವರ ನೇತೃತ್ವದಲ್ಲಿ ಕರೆಯಲಾಗಿತ್ತು. ನಾವಿಕದ ಪದಾಧಿಕಾರಿಗಳಾದ ಡಾ. ಕೃಪಾ ರಾಜೂರ, ಗುರು ಪ್ರಸಾದ್ ಹಾಗೂ ಪಲ್ಲವಿ ನಾಗೇಶ ಅವರು ಡಾ. ರಾಜೂರ್ ಅವರ ಜೊತೆಗೂಡಿ ಈ ಸಮಾವೇಶದ ಉದ್ದೇಶ ಹಾಗು ಯೋಜನೆಗಳನ್ನು ವಿವರಿಸಿದರು.

Navika 2nd WKC in Boston, America

ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಕಲಾ ಪ್ರತಿಭೆಯನ್ನು ತೋರಲು ಹಾಗು ಕನ್ನಡನಾಡಿನಲ್ಲಿರುವ ಪ್ರಸಿದ್ದ ಕಲಾಕಾರರನ್ನು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳನ್ನು ಇಲ್ಲಿಗೆ ಆಹ್ವಾನಿಸಿ ಹೊರನಾಡ ಕನ್ನಡಿಗರಿಗೆ ಸಾಂಸ್ಕೃತಿಕ-ಕಲಾತ್ಮಕ ಮನೋರಂಜನೆ ನೀಡಲು ಹೊರಟಿರುವ ನಾವಿಕದ ಈ ಕಾರ್ಯಕ್ಕೆ ಸ್ವಯಂಸೇವಕರ ಕೈ ಕೊಡುಗೆ ಬಹಳ ಮುಖ್ಯ. ಅದಕ್ಕಾಗಿ ಹಣಕಾಸು, ಪ್ರಚಾರ, ಮನೋರಂಜನೆ, ಊಟದ ಮೇಲ್ವಿಚಾರಣೆ, ನೋಂದಣಿ - ಹೀಗೆ ಹಲವಾರು ತಂಡಗಳನ್ನು ಮಾಡಿ ಅವುಗಳ ಸದಸ್ಯರ ಪರಿಚಯದೊಂದಿಗೆ ಮತ್ತೆ ಹೊಸದಾಗಿ ಇನ್ನು ಹತ್ತು ಹಲವಾರು ಸ್ವಯಂಸೇವಕರನ್ನು ಭರ್ತಿ ಮಾಡಿಕೊಳ್ಳಲಾಯಿತು.

ಈ ಮಾಹಿತಿ ಸಭೆಗೆ ಮಂದಾರ ಕನ್ನಡ ಕೂಟದ ಸದಸ್ಯರು, ಹೊಯ್ಸಳ ಕನ್ನಡ ಕೂಟದ ಅಧ್ಯಕ್ಷ ವೇಣು ಗುಡ್ದೆರ ಹಾಗು ಹಲವಾರು ಸದಸ್ಯರು ಭಾಗವಹಿಸಿದ್ದಲ್ಲದೆ ಹಲವಾರು ಕಮಿಟಿಗಳಿಗೆ ಸ್ವಯಂ ಕಾರ್ಯಕರ್ತರಾಗಿ ನೊಂದಣಿ ಮಾಡಿಸಿದರು. ಎಲ್ಲರ ಮುಖದಲ್ಲಿ "ಕನ್ನಡ ಭಾಷಾಭಿಮಾನ, ಕನ್ನಡಕ್ಕಾಗಿ ಯಾವ ಸೇವೆಗಾದರು ನಾವು ಸಿದ್ದ" ಎಂಬ ಮನೋಭಾವ ಕಂಡು ಬರುತ್ತಿದ್ದರಲ್ಲಿ ಎರಡು ಮಾತಿಲ್ಲ. ಲಘು ಉಪಹಾರದೊಂದಿಗೆ ಈ ಚಿಕ್ಕ ಹಾಗು ಚೊಕ್ಕ ವಿಶ್ವ ಕನ್ನಡ ಸಮ್ಮೇಳನದ ಪೂರ್ವಭಾವಿ ಮಾಹಿತಿ ಕಾರ್ಯಕ್ರಮ ಮುಗಿದಾಗ ಸಂಜೆ ಏಳಾಗಿತ್ತು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ : http://navika.org/2012/a_rajurmessage.php

ಸಂಪರ್ಕ : [email protected]

English summary
Navika is getting ready to conduct 2nd World Kannada Conference from August 30 to September 1, 2013 in Boston with the cooperation of Mandara - New England Kannada Koota and Hoysala Kannada Koota, Connecticut, America. A report by Nagaraja Maheswarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X