ಗಾಳಿಸುದ್ದಿಗಳನ್ನು ನಂಬಬೇಡಿ - ಅಕ್ಕ ಅಧ್ಯಕ್ಷ

ವಿಂಡಿ ಸಿಟಿ ಶಿಕಾಗೊ ಅಷ್ಟೇ ಅಲ್ಲ, ಉತ್ತರ ಅಮೆರಿಕಾದ ಯಾವುದೇ ರಾಜ್ಯದಲ್ಲೂ ಯೋಗ ಕ್ಯಾಂಪ್ ಆಗಲೀ ಅಥವಾ ಇನ್ಯಾವುದೇ ರೀತಿಯ ಕಾರ್ಯಕ್ರಮವನ್ನು ಅಕ್ಕ ಆಯೋಜಿಸಿಲ್ಲ. ಆದ್ದರಿಂದ ಅಮೆರಿಕನ್ನಡಿಗರು ಇಂಥ ಸುಳ್ಳು ಸುಳ್ಳೇ ಸುದ್ದಿಗಳನ್ನು ಸುತರಾಂ ನಂಬಬಾರದು ಎಂದು ಅಕ್ಕ ಅಧ್ಯಕ್ಷ ದಯಾಶಂಕರ ಅಡಪ್ಪ ಒನ್ಇಂಡಿಯಾ ಕನ್ನಡಕ್ಕೆ ಗುರುವಾರ ತಿಳಿಸಿದರು.
ಯೋಗ ಎಂದರೆ ಜನ ಮುಗಿ ಬೀಳುತ್ತಾರೆ. ಯೋಗ ಶಿಬಿರಗಳಲ್ಲಿ ಕನ್ನಡಿಗರು ಮಾತ್ರವನ್ನು ಎಲ್ಲ ದೇಶ, ಜನಾಂಗಗಳ ಜನತೆಗೂ ಆಸಕ್ತಿ ಇರ್ತದೆ. ಹಾಗಾಗಿ, ಯೋಗ ಶಿಬಿರದ ಬಗ್ಗೆ ವಿವರಣೆ ಕೋರಿ ಅಕ್ಕ ಪದಾಧಿಕಾರಿಗಳಿಗೆ ಅಸಂಖ್ಯಾತ ಕರೆಗಳು, ಈಮೇಲುಗಳು ಬರುತ್ತಿವೆ ಎಂದು ದಯಾಶಂಕರ ಬೇಸರ ವ್ಯಕ್ತಪಡಿಸಿದ್ದಾರೆ.
ಇಷ್ಟಾಗಿಯೂ ಯಾರಿಗಾದರೂ ಅನುಮಾನಗಳಿದ್ದರೆ ತಮಗೆ ಈ ಮೇಲ್ ಬರೆದು ವಿವರಣೆ ಪಡೆಯಬಹುದೆಂದು ಅಕ್ಕ ಅಧ್ಯಕ್ಷರು ಮನವಿ ಮಾಡಿದ್ದಾರೆ. ವಿಳಾಸ [email protected]
ಕರ್ನಾಟಕದಲ್ಲಿ ಆಗಾಗ ವದಂತಿಗಳು ಹಬ್ಬುವುದು ಸಾಮಾನ್ಯ. ಗಣೇಶ ಹಾಲು ಕುಡಿದನಂತೆ, ಮಾರಮ್ಮ ನಕ್ಕಳಂತೆ, ಸಾಯಿಬಾಬಾ ಫೋಟೋದಿಂದ ವಿಭೂತಿ ಉದುರುತ್ತಿದೆಯಂತೆ, ಹಾಗಂತೆ ಹೀಗಂತೆ. ಆದ್ರೆ, ಅಮೆರಿಕಾ ಕನ್ನಡ ವಲಯಗಳಲ್ಲೂ ಹೀಗೆ ಗಾಳಿ ಸುದ್ದಿಗಳು ಹಬ್ಬುವುದ ಕಂಡು ನಮಗೆ ಕೌತುಕವಾಗಿದೆ.












Click it and Unblock the Notifications