ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ರಂಜನೆ ಚಿಂತನೆಯ 'ಸಂಗಮ'!

By Prasad
|
Google Oneindia Kannada News

ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ವೈದ್ಯಕೀಯ ಘೋಷ್ಠಿ, ವ್ಯವಹಾರಿಕ ಘೋಷ್ಠಿ, ಸಾಹಿತ್ಯ ಘೋಷ್ಠಿ ಮೊದಲಾದವುಗಳು ನಡೆದವು. ಇಂಗ್ಲೆಂಡ್ನಲ್ಲಿ ನೆಲೆಸಿರುವ ಕನ್ನಡತಿ ಡಾ ಜ್ಯೋತ್ಸ್ನಾ ಶ್ರೀಕಾಂತ್ ತಮ್ಮ ಪಿಟೀಲು ವಾದನದೊಂದಿಗೆ ಸಭಿಕರನ್ನು ಮಂತ್ರ ಮುಗ್ದರನ್ನಾಗಿ ಮಾಡಿದರು. ಮತ್ತೊಬ್ಬ ಕನ್ನಡ ಪ್ರತಿಭೆ ಮನೋರಮಾ ಪ್ರಸಾದ್ ಕರ್ನಾಟಕ ಸಂಗೀತದಲ್ಲಿ ಪುರಂದರ ಗೀತೆಯನ್ನು ಹಾಡುತ್ತ ಸಂಗೀತ ಸಾಗರವನ್ನೇ ಹರಿಸಿದರು. ಇಂಡಿಯಾ ಕ್ಲಾಸಿಕ್ ಸಂಸ್ಥೆಯ ವೇದಾಸ್ ಯುನಿವರ್ಸಲ್ ಟ್ರುತ್ ನೃತ್ಯ ಬಹು ಸುಂದರವಾಗಿ ಮೂಡಿ ಬಂತು.

ವಿದ್ಯಾರ್ಥಿ ಸಮಾವೇಶದಲ್ಲಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಡಾ ಪುತ್ತೂರಾಯ ಮತ್ತು ಭುವನೇಶ್ವರಿ ಹೆಗಡೆಯವರು ಸಭಿಕರನ್ನು ಹಾಸ್ಯಲೋಕದಲ್ಲಿ ತೇಲಾಡಿಸಿದರು. ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ, ರಮ್ಯ, ದೊಡ್ಡರಂಗೇ ಗೌಡ, ಶ್ರೀನಾಥ್, ಹಂಸಲೇಖ ಮೊದಲಾದವರು ಸ್ಟಾರ್ ನೈಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದರು.

ಎರಡನೆ ದಿನದ ಕಾರ್ಯಕ್ರಮದ ಸಾಹಿತ್ಯ ಘೋಷ್ಠಿಯಲ್ಲಿ ಹಿರಿಯ ಕವಿಗಳಾದ ಪಾವಗಡ ಪ್ರಕಾಶ್ ರವರು ಕರ್ನಾಟಕ ವೈಭವ ಎಂಬ ವಿಚಾರ ಮಂಡನೆ ಮಾಡಿದರು. ದೊಡ್ಡರಂಗೇ ಗೌಡರು ಕನ್ನಡದ ಹಿರಿಮೆಯ ಬಗ್ಗೆ, ಪುತ್ತೂರಾಯರು ಕರ್ನಾಟಕದ ಮೇಲೆ ಜಾಗತೀಕರಣದ ಆಗಿರುವ ಪರಿಣಾಮದ ಕುರಿತು ಚರ್ಚಿಸಿದರು. ಸ್ಪಂದನ ತಂಡದಿಂದ ಹಚ್ಚೇವು ಕನ್ನಡ ದೀಪ ಹಾಡುಗಳು ಕನ್ನಡಿಗರನ್ನು ರೋಮಾಂಚನಗೊಳಿಸಿದವು. ಡಾ ರಮ್ಯ ಮೋಹನ್ ಮತ್ತು ತಂಡ ಸ್ಥಳೀಯ ಪ್ರತಿಭೆಯವರ ಹಾಡುಗಳು ಪ್ರೇಕ್ಷಕರಿಗೆ ಸಂತಸ ತಂದವು. ಡಾ ಬಾಲಕೃಷ್ಣ ಗುರುಜಿಯವರ ಪುನರ್ಜನ್ಮದ ವಿಚಾರ ಪ್ರೇಕ್ಷಕರ ಚಿಂತನೆಗೆ ಆಹಾರವಾಯಿತು. ದೇವಿಕ ರಾವ್ ರವರು ಭರತನಾಟ್ಯ ಮತ್ತು ಡಾ ಬೆನಕ ಕಾರಂತ್ ಮತ್ತು ದೇವಿಕ ಯಕ್ಷಗಾನ ಪ್ರದರ್ಶಿಸಿದರು. ಎರಡನೆ ದಿನ ಕೊನೆಯವರೆಗೆ ಪ್ರೇಕ್ಷಕರು ಕುಳಿತಿದ್ದುದು ಸಮ್ಮೇಳನದ ಯಶಸ್ಸನ್ನು ಪ್ರಕಟಿಸುತ್ತದೆ.

ಕರ್ನಾಟಕದಿಂದ ಬಂದ ಪ್ರತಿಭೆಗಳಾದ ಬದರಿ ಪ್ರಸಾದ್, ದೇವ ಎಲ್ಲ ಪ್ರೇಕ್ಷಕರನ್ನು ಆಕರ್ಷಿಸಿದರು. ಪುಟಾಣಿ ಸಾನಿಯ ಅಯ್ಯರ್ ಎಲ್ಲರ ಮೆಚುಗೆಗೆ ಕಾರಣರಾದರು. ಹಂಸಲೇಖರವರ ಸಾಹಿತ್ಯ ಚಿಂತನೆ ಪ್ರೇಕ್ಷಕರನ್ನು ಚಿಂತನೆಗೆ ದೂಡಿತು. ಒಟ್ಟಿನಲ್ಲಿ ಇಂತಹ ಒಂದು ದೊಡ್ಡ ಸಮ್ಮೇಳನ ಲಂಡನ್ನಿನಲ್ಲಿ ನಡೆದದ್ದು ಕನ್ನಡಿಗರ ಹೆಮ್ಮೆ. ಇಷ್ಟು ಅಲ್ಪಾವಧಿಯಲ್ಲಿ ಇಂತಹ ಕಾರ್ಯಕ್ರಮ ಯಶಸ್ಸು ಸಂಗಮ ಸಂಸ್ಥೆಯ ದೂರ ದೃಷ್ಟಿಯನ್ನು ಪ್ರಕಟಿಸುತ್ತದೆ.

English summary
Vishwa Kannada Sammelana Europe-2011 was conducted on October 22 and 23 in London. Karnataka legislative Council president DH Shankaramurthy inaugurated the conference. Karnataka film artists including Ramya, Ambarish, Sumalatha, Srinath, Doddarange Gowda, Hamsalekha were the mail attractions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X