ಲಂಡನ್ನಿನಲ್ಲಿ ಕನ್ನಡ ಚಿತ್ರತಾರೆಯರ ಮೆರವಣಿಗೆ
ಸೈಂಟ್
ಪೌಲ್ ಕ್ಯಾಥೆಡ್ರಲ್ ನಿಂದ ಯಕ್ಷಗಾನ ವೇಷ, ಡೊಳ್ಳು, ಛತ್ರದೊಂದಿಗೆ ಚಿತ್ರನಟರಾದ ಪ್ರಣಯರಾಜ ಶ್ರೀನಾಥ್, ಚಿತ್ರಸಾಹಿತಿ ಡಾ ದೊಡ್ಡರಂಗೇ ಗೌಡ, ಲಕ್ಕಿ ಸ್ಟಾರ್ ನಟಿ ರಮ್ಯ, ಶಾಸಕರಾದ ನರೇಂದ್ರ ಸ್ವಾಮಿ ಮೊದಲಾದ ಗಣ್ಯರು ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಪ್ರವೇಶಿಸಿದ್ದು ಕರ್ನಾಟಕ ಸಾಂಸ್ಕೃತಿಕ ವೈಭವನ್ನು ಲಂಡನ್ನಿನ ಪ್ರಸಿದ್ದ ಸ್ಥಳದಲ್ಲಿ ಪ್ರದರ್ಶಿಸಿದಂತಾಯಿತು. id="toptextpromo">ಉದ್ಘಾಟನೆಗೆ
ಮುಂಚಿತವಾಗಿ ಸಂಗಮದ ಅಧ್ಯಕ್ಷರಾದ ದ್ವಾರಕ್ ನಾಥ್ ಶಾಸ್ತ್ರಿಯವರು ಎಲ್ಲರನ್ನು ಸ್ವಾಗತಿಸುತ್ತಾ, ಬ್ರಿಟನಿನ ರಾಣಿ, ಬ್ರಿಟನಿನ ಪ್ರಧಾನಮಂತ್ರಿ, ಕರ್ನಾಟಕದ ಮುಖ್ಯಮಂತ್ರಿ ಸದಾನಂದ ಗೌಡರ ಸಂದೇಶವನ್ನು ಸಭಿಕರಿಗೆ ತಿಳಿಸಿದರು. href="/nri/article/2011/0331-britain-kannadiga-keeki-thammaiah-is-no-more-aid0038.html" target="_blank">ಸಂಗಮದ ಮೊತ್ತ ಮೊದಲ ಅಧ್ಯಕ್ಷರಾದ ಕಿಕಿ ತಮ್ಮಯ್ಯ, ಮತ್ತೂರು ಕೃಷ್ಣಮೂರ್ತಿ ಹಾಗು ಎಂಪಿ ಪ್ರಕಾಶ್ ರವರಿಗೆ ಶ್ರದ್ದಾಂಜಲಿ ಅರ್ಪಿಸಿದರು. id='are-slot-1' class='oiad oi-axt oiadv'> id='top-searched-articles'>ಸಂಗಮದ
ಪರವಾಗಿ ಸಂಗಮ ಸಂಸ್ಥಾಪಕರಲ್ಲಿ ಒಬ್ಬರಾದ ಸಂಪತ್ ಯದವಾಡ್ ರವರು ಸ್ವಾಗತ ಭಾಷಣವನ್ನು ನೆರವೇರಿಸಿದರು. ಸಂಗಮ ಬೆಳೆದು ಬಂದ ದಾರಿ, ಸಂಗಮದ ಉದ್ದೇಶವನ್ನು ಇನ್ನೊಬ್ಬ ಸಂಸ್ಥಾಪಕ ಕುಂಟಿಕಾನಮಠ ಕುಮಾರ್ ರವರು ತಿಳಿಸಿದರು. ಯೂರೋಪ್ನಲ್ಲಿ ವಿಶ್ವ ಕನ್ನಡ ಸಮ್ಮೇಳನದ ಅಗತ್ಯತೆಯ ಬಗ್ಗೆ ಮತ್ತೊಬ್ಬ ಸಂಸ್ಥಾಪಕ ಶರತ್ ಅಯ್ಯರ್ ತಿಳಿಸಿದರು. ಸಮ್ಮೇಳನ ಆಯೋಜನೆಯಲ್ಲಿ ಬಂದಂತಹ ನೋವು ನಲಿವುಗಳನ್ನು ಇಂಡಿಯಾ ಕ್ಲಾಸಿಕ್ ಆರ್ಟ್ಸ್ ಸಂಸ್ಥೆಯ ನಿರ್ದೇಶಕಿ ರೂಪಾ ಅಯ್ಯರ್ ಮತ್ತು ಮುಖ್ಯಸ್ಥ ರವಿ ರಾಜಗೋಪಾಲ್ ತಿಳಿಸಿದರು.











Click it and Unblock the Notifications