ಲಂಡನ್ನಿನಲ್ಲಿ ಯಶಸ್ವಿ ವಿಶ್ವ ಕನ್ನಡ ಸಮ್ಮೇಳನ
ಕರ್ನಾಟಕ, ಯುರೋಪ್, ಕೊಲ್ಲಿ ರಾಷ್ಟ್ರ ಹಾಗು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ಈ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ. ನಮ್ಮನ್ನಾಳಿದ ಬ್ರಿಟಿಷರ ಕೇಂದ್ರ ಸ್ಥಾನದಲ್ಲಿ ಈ ಕಾರ್ಯಕ್ರಮ ಆಯೋಜಿಸುವುದು ಸಂಗಮದ ಬಹು ದಿನದ ಯೋಜನೆ ಇಡೇರಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನಪರಿಷತ್ ಅಧ್ಯಕ್ಷ ಡಿಎಚ್ ಶಂಕರಮೂರ್ತಿಯವರು ಸಭೆಯನ್ನು ಉದ್ದೇಶಿಸಿ, ದೀಪ ಬೆಳಗುವುದು ಭಾರತೀಯರ ಕ್ರಮ. ಈ ವಿಶ್ವ ಕನ್ನಡ ಸಮ್ಮೇಳನದಿಂದ ನಮ್ಮ ಕನ್ನಡ ಮಾತೆ, ತಾಯಿ ಭುವನೇಶ್ವರಿಯನ್ನು ಲಂಡನ್ನಿನಲ್ಲಿ ಆರಾಧಿಸುವ ಅವಕಾಶ ದೊರಕಿದ್ದು ಬಹು ದೊಡ್ಡ ಭಾಗ್ಯವೆಂದು ಹರ್ಷಿಸಿದರು.
ಮುಖ್ಯ ಅತಿಥಿಯಾಗಿ ಬಂದಿದ್ದ ವೀರೇಂದರ್ ಶರ್ಮ, ಸಂಸದರು, ಸೌತ್ ಹಾಲ್, ಲಂಡನ್ ರವರು ಮಾತನಾಡುತ್ತ ಬ್ರಿಟನ್ ಮತ್ತು ಕರ್ನಾಟಕದೊಂದಿಗೆ ಸಾಂಸ್ಕೃತಿಕ, ಸಾಹಿತ್ಯಕ, ವ್ಯವಹಾರಿಕ ಬಾಂಧವ್ಯವನ್ನು ಬೆಸೆಯಲು ಈ ಸಮ್ಮೇಳನ ನಾಂದಿಯಾಗಲಿ. ಈ ಬೆಸುಗೆಯನ್ನು ಭದ್ರಪಡಿಸಲು ಸಹಕಾರವನ್ನು ಕೊಡುತ್ತೇನೆ ಎಂದರು. ಕಾರ್ಯಕ್ರಮ ಆಯೋಜಿಸಿ ಅವರನ್ನು ಅಹ್ವಾನಿಸಿದ್ದಕ್ಕೆ ಸಂಗಮ ಸಂಸ್ಥೆಯನ್ನು ಶ್ಲಾಘಿಸಿದರು. ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮಾತನಾಡುತ್ತ, ಎಷ್ಟೇ ಕಷ್ಟ ಬಂದರೂ ಲೆಕ್ಕಿಸದೆ ಸಮ್ಮೇಳನವನ್ನು ಆಯೋಜಿಸಿದ್ದು ಪ್ರಶಂಸನಾರ್ಹ. ಕಷ್ಟ ಪಡದೆ ಯಾವುದೇ ಕಾರ್ಯ ಸಿದ್ದಿಸದು ಎಂದರು.













Click it and Unblock the Notifications