ಅರಮನೆಯನ್ನು ಹೋಟೆಲ್ ಮಾಡುವ ಪ್ರಿನ್ಸ್ ಚಾರ್ಲ್ಸ್

ಈ ಊಹಾಪೋಹಗಳನ್ನೆಲ್ಲ ಬದಿಗಿಟ್ಟು, ಬಿಬಿಸಿ ಬ್ರಾಡ್ ಕಾಸ್ಟರ್ ಆಂಡ್ರ್ಯೂ ಮಾರ್ ಬರೆದಿರುವ ಪುಸ್ತಕವನ್ನು ನಂಬಿದರೆ, ದಿವಂಗತ ರಾಜಕುಮಾರಿ ಡಯಾನಾ ಗಂಡ ಪ್ರಿನ್ಸ್ ಚಾರ್ಲ್ಸ್ ಅವರು ತಾವು ರಾಜನಾಗುತ್ತಿದ್ದಂತೆ ರಾಜಮನೆತನವನ್ನೆಲ್ಲ ಸ್ಥಳಾಂತರಿಸಿ ಬಕ್ಕಿಂಗ್ ಹ್ಯಾಮ್ ಅರಮನೆಯನ್ನು ಹೋಟೆಲನ್ನಾಗಿ ರೂಪಿಸಲು ಎಲ್ಲ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ಇಷ್ಟು ವರ್ಷ ಅಮ್ಮನ ನೆರಳಲ್ಲೇ ಇದ್ದ ಚಾರ್ಲ್ಸ್ ರಾಜಮನೆತನದ ಮೇಲೆ ತನ್ನ ಪ್ರಭುತ್ವವನ್ನು ಸ್ಥಾಪಿಸಲು ಎಲ್ಲ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.
ಈಗಾಗಲೆ ವೆಸ್ಟ್ ಮಿನಿಸ್ಟರ್ ನಲ್ಲಿರುವ ಅರಮನೆಯಿಂದ ಹೊರಬಿದ್ದಿರುವ ಚಾರ್ಲ್ಸ್ ರಾಜನ ಪಟ್ಟವೇರುತ್ತಿದ್ದಂತೆ ಮೊದಲ ಹಂತದಲ್ಲಿ ಅರಮನೆಯ ವಂದಿಮಾಧಿಗರನ್ನು ಹೊರದಬ್ಬಿ ತನಗೆ ಬೇಕಾದ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದ್ದಾರೆ. ಎರಡನೆಯ ಹಂತದಲ್ಲಿ ಅರಮನೆಯನ್ನು ಹೋಟೆಲನ್ನಾಗಿ ಮಾರ್ಪಡಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ ಎಂದು ರಾಣಿಯ ಜೀವನಚರಿತ್ರೆಯನ್ನು ದಾಖಲಿಸಿರುವ ಪುಸ್ತಕ ತಿಳಿಸಿದೆ. ಈ ಸುದ್ದಿಯಿಂದ ತಳಮಳ ಆಗಿರುವುದು ಮಾತ್ರ ಇಂಗ್ಲೆಂಡಿನ ನಾಗರಿಕರಿಗೆ. ಇಂತಹ ದುರುದ್ದೇಶ ಚಾರ್ಲ್ಸ್ ಗೆ ಯಾಕಾದರೂ ಬಂತಪ್ಪ ಎಂದು ಪರಿತಪಿಸುತ್ತಿದ್ದಾರೆ.
ಈ ಊಹಾಪೋಹವನ್ನು ಅರಮನೆಯ ಮೂಲಗಳು ಸಾರಾಸಗಟಾಗಿ ತಳ್ಳಿಹಾಕಿವೆ. 1952ರಿಂದ ಉತ್ತರಾಧಿಕಾರಿಯಾಗಿಯೇ ಇರುವ ಪ್ರಿನ್ಸ್ ಚಾರ್ಲ್ಸ್ ಬೇರೆಯದೇ ಆದ ಪ್ಲಾನ್ ಹಾಕಿಕೊಂಡಿದ್ದಾರೆ. ಆದರೆ, ಹಣ್ಣುಹಣ್ಣು ಮುದುಕಿಯಾಗಿರುವ ರಾಣಿ ಎಲಿಜಬೆತ್ ಇದಕ್ಕೆ ಒಪ್ಪುತ್ತಾರಾ? ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಸ್ಥಾನ ಮಗನಿಗೆ ಬಿಟ್ಟುಕೊಡುತ್ತಾರಾ? ಬಿಟ್ಟುಕೊಟ್ಟರೂ ಅರಮನೆಯನ್ನು ಹೋಟೆಲನ್ನಾಗಿ ಮಾರ್ಪಡಿಸಲು ಇಬ್ಬರು ಮಕ್ಕಳು ಮತ್ತು ಒಬ್ಬ ಸೊಸೆ ಒಪ್ಪುತ್ತಾರಾ? ಕಾಲವೇ ಉತ್ತರಿಸಲಿದೆ.












Click it and Unblock the Notifications