ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ಅಮೆರಿಕಾದಲ್ಲಿ ಎಸ್ಪಿಬಿ ರಸಮಂಜರಿ
ಪದ್ಮಶ್ರೀ ಎಸ್ಪಿ ಬಾಲಸುಬ್ರಮಣ್ಯಂ ಅವರಿಂದ 'ಸಂಪೂರ್ಣ ಕನ್ನಡ ಸಂಗೀತ ರಸಸಂಜೆ' ಕಾರ್ಯಕ್ರಮ ಅಮೆರಿಕಾದಲ್ಲಿ ನಡೆಯಲಿದೆ. ಮೇ 9ನೇ ತಾರಿಖು ಭಾನುವಾರ ಸಂಜೆ ನಡೆಯುವ ಈ ಕಾರ್ಯಕ್ರಮವನ್ನು ಬೇ ಏರಿಯಾ ಕನ್ನಡಿಗರ ಸಂಘ ಕೆಕೆಎನ್ ಸಿ ಮತ್ತು ಕಲಾಲಯ ಆಶ್ರಯದಲ್ಲಿ ಆಯೋಜಿಸಲಾಗಿದೆ.
ಎಸ್ಪಿ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮ ಅಮೆರಿಕಾದಲ್ಲಿ ನಡೆಯುವ ಪ್ರಥಮ ಸಂಪೂರ್ಣ ಕನ್ನಡ ಸಂಗೀತ ಸಂಜೆ ಎಂದು ವ್ಯವಸ್ಥಾಪಕರು ಹೇಳಿದ್ದಾರೆ. ಅಲ್ಲದೆ ಮೇ 9ರಂದು ಕಾರ್ಯಕ್ರಮ ನಡೆಯುತ್ತಿರುವುದರಿಂದ ಇದನ್ನು ಮದರ್ಸ್ ಡೇ ವಿಶೇಷ ಎಂದೂ ಕೆಕೆಎನ್ ಸಿ ಮತ್ತು ಕಲಾಲಯದ ಇವೆಂಟ್ ಮ್ಯಾನೇಜರ್ಸ್ ತಿಳಿಸಿದ್ದಾರೆ.
ಈಗಾಗಲೇ ಟಿಕೆಟುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿರುವುದರಿಂದ ಸಭಾಂಗಣದ ಬಾಲ್ಕನಿಯನ್ನೂ ಸಂಗೀತ ಸಂಜೆಗೆ ಬಳಸಿಕೊಳ್ಳಲಾಗುತ್ತಿದ್ದು ಆನ್ ಲೈನ್ ಟಿಕೆಟ್ ಖರೀದಿಸುವವರು www.kknc.org ತಾಣದ ಸೇವೆಯನ್ನು ಪಡೆಯಬಹುದಾಗಿದೆ.
Comments
Story first published: Monday, May 3, 2010, 17:40 [IST]