ಅಮೆರಿಕಾದಲ್ಲಿ ಭಾರತೀಯರ ಧನ್ಯ ಮಿಲನ!

ಅಮೆರಿಕದ ಮಿಲನ್ ಕಲ್ಚರಲ್ ಅಸೋಸಿಯೇಶನ್ ನಡೆಸಿಕೊಟ್ಟ Incredible India Fair 2010 ಬೆಳಿಗ್ಗೆ ಸರಿಯಾಗಿ 10 ಗಂಟೆಗೆ 2 ಮೈಲಿಯ ನಡಿಗೆಯೊಂದಿಗೆ ಪ್ರಾರಂಭವಾಗಿ ಕನೆಕ್ಟಿಕಟ್ ನದಿ ದಂಡೆಯಲ್ಲಿರುವ ರಿವರ್ ಫ್ರಂಟ್ ಪ್ಲಾಜಾಗೆ 12 ಗಂಟೆಗೆ ಬಂದು ತಲುಪಿತು. ಪುಟಾಣಿಗಳೊಂದಿಗೆ ದೊಡ್ಡವರು ಸಹಾ ಬಣ್ಣ ಬಣ್ಣದ ಉಡುಗೆಯಲ್ಲಿ ಉಲ್ಲಾಸ ಉತ್ಸಾಹದಿಂದ ನಡೆದಿದ್ದು ವಿಶೇಷವಾಗಿತ್ತು.
ಪಾರ್ಕ್ ಮುಂಭಾಗದಲ್ಲಿ ಭಾರತೀಯ ಡ್ರೆಸ್ ಮಳಿಗೆ, ಫುಡ್ ಕೋರ್ಟ್, ವಿವಿಧ ರಾಜ್ಯಗಳ ಆಕರ್ಷಕ ಭಿತ್ತಿಚಿತ್ರಗಳು, ಕುತೂಹಲದಿಂದ ನೋಡುತ್ತಾ ಖರೀದಿ ಮಾಡುತ್ತಿದ್ದ ಅಮೆರಿಕನ್ನರು.. ಇವೆಲ್ಲ ನೋಡಿ ನಮ್ಮ ಊರಲ್ಲಿ ನಡೆಯುತ್ತಿದ್ದ ಜಾತ್ರೆಯ ನೆನಪು ಕಾಡಿತು.
ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಚಿಣ್ಣರ ಫ್ಯಾನ್ಸಿ ಡ್ರೆಸ್ ಶೋನೊಂದಿಗೆ ಪ್ರಾರಂಭವಾದವು. ಶಿವ, ಪಾರ್ವತಿ, ಹಕ್ಕ-ಬುಕ್ಕ, ಶಿವಾಜಿ ಹೀಗೆ ನಾನಾ ವಿಧವಾದ ವೇಷಗಳಲ್ಲಿ ವೇದಿಕೆ ಮೇಲೆ ಬಂದಿದ್ದು ನಯನಮನೋಹರವಾಗಿತ್ತು. ನಂತರ ವಿವಿಧ ಭಾಷೆಗಳ (ಕನ್ನಡ, ತಮಿಳ್, ತೆಲುಗು, ಹಿಂದಿ, ಗುಜರಾತಿ, ಬಂಗಾಲಿ, ರಾಜಸ್ತಾನಿ, ಪಂಜಾಬಿ, ಮರಾಠಿ) ಚಲನಚಿತ್ರ , ಜಾನಪದ ಹಾಡುಗಳಿಗೆ ಹತ್ತು ಹಲವಾರು ಪುಟಾಣಿಗಳು, ದೊಡ್ಡವರು ನರ್ತನ ಮಾಡಿದ್ದು ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸ್ಸಿಗೆ ಮುದ ನೀಡಿದವು. ನಿಂತಲ್ಲೇ ದೊಡ್ಡವರು, ಸಣ್ಣವರು ಅನ್ನದೆ ಭಾರತೀಯ ಸಂಗೀತಕ್ಕೆ ಅಮೆರಿಕನ್ನರೂ ಸಹ ತಾಳ ಹಾಕಿದ್ದು ಮತ್ತಷ್ಟು ಹುಮ್ಮಸ್ಸು ನೀಡುವಂತಿತ್ತು. (ಚಿತ್ರಪಟ ನೋಡಿರಿ)
ಸಂಜೆ 4ರತನಕ ನಡೆದ ಈ ರಸಮಂಜರಿ ಕಾರ್ಯಕ್ರಮಗಳು ಕೊನೆಯಾದದ್ದು ನಮ್ಮೆಲ್ಲರ ಮೆಚ್ಚಿನ ಅಗಲಿದ ನಾಯಕ ದಿ|ವಿಷ್ಣುವರ್ಧನ್ ರವರ ನೆನಪಿಗಾಗಿ ಮಲ್ಲಿ ಸಣ್ಣಪ್ಪನವರ್ (ಕನೆಕ್ಟಿಕಟ್ ಕನ್ನಡ ಕೂಟ) ಟೀಂನಿಂದ ನಡೆಸಿಕೊಟ್ಟ "ಹಾಕು ಹೆಜ್ಜೆ ಹಾಕು" ಡಾನ್ಸ್ ಡಾನ್ಸ್ ... ಎಲ್ಲರ ಮೆಚ್ಚುಗೆ ಗಳಿಸಿತು. ಇದಾದ ನಂತರ ಪ್ರಶಸ್ತಿ ವಿತರಣೆಯೊಂದಿಗೆ ಈ 'ಭಾರತೀಯರ ಸಮ್ಮಿಲನ' ಮುಗಿದಿತ್ತು. ಹೀಗೆ ಬೇರೆ ಬೇರೆ ಭಾಷೆ ಮಾತನಾಡುವ ಭಾರತೀಯರು ನಡೆಸಿಕೊಟ್ಟ ಈ ಮಿಲನದಲ್ಲಿ ನಾವೆಲ್ಲರೂ 'ಒಂದೇ ಭಾರತಾಂಬೆಯ ಮಕ್ಕಳು' ಎಂಬ ಭಾವನೆ ಎದ್ದು ಕಾಣುತ್ತಿತ್ತು.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications