• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೆಂಗಿನಕಾಯಿಗೆ ಸಬ್‌ಸ್ಟಿಟ್ಯೂಟ್ ಜುಟ್ಟು!

By * ಶ್ರೀವತ್ಸ ಜೋಶಿ
|

Coconut
ಇನ್ನು, ಕಲಶಕ್ಕೆ ಇಡಲು ಜುಟ್ಟಿರುವ ತೆಂಗಿನಕಾಯಿ ಬೇಕಲ್ಲ? ಅಮೆರಿಕದ ಗ್ರೋಸರಿಸ್ಟೋರ್‌ಗಳಲ್ಲಿ ತೆಂಗಿನಕಾಯಿಯೇನೋ ಸಿಗುತ್ತೆ, ಆದರೆ ಜುಟ್ಟಿಲ್ಲ. ಅದಕ್ಕೊಂದು ಭಲೇ ಉಪಾಯ ಮಾಡಿಕೊಂಡಿದ್ದಾರೆ ಒಹಾಯೊ ರಾಜ್ಯದ ಕೊಲಂಬಸ್‌ನಲ್ಲಿರುವ ಉಷಾ ಅಶ್ವಥ್. ಅವರು ಭಾರತದಿಂದ ಒಂದಿಷ್ಟು ಸ್ಪೇರ್ ತೆಂಗಿನಕಾಯಿ ಜುಟ್ಟುಗಳನ್ನಷ್ಟೇ ತಂದಿಟ್ಟುಕೊಂಡಿದ್ದಾರೆ. ಇಲ್ಲಿ ಕೊಳ್ಳುವ ತೆಂಗಿನಕಾಯಿಗೆ ಜುಟ್ಟನ್ನು ಜೋಡಿಸಿ ಸೆಲ್ಲೋಟೇಪ್ ಹಚ್ಚಿಬಿಟ್ಟರೆ ಕಲಶಕ್ಕೆ ಪಕ್ಕಾ ಜುಟ್ಟಿರುವ ತೆಂಗಿನಕಾಯಿ ರೆಡಿ! ಮೇರಿಲ್ಯಾಂಡ್‌ನ ಡಾ.ಮೈ.ಶ್ರೀ.ನಟರಾಜ್ ನಾನು ಉನ್ನತ ವಿದ್ಯಾಭ್ಯಾಸಕ್ಕೆಂದು ಅಮೆರಿಕಕ್ಕೆ ಬಂದ ಹೊಸತರಲ್ಲಿ ತೆಂಗಿನಕಾಯಿಯೂ ಸಿಗ್ತಿರಲಿಲ್ಲ, ಆಗ ಸಹಪಾಠಿಯೊಬ್ಬ ಜೇಡಿಮಣ್ಣಿನ ತೆಂಗಿನಕಾಯಿ (ಆಕಾರ) ಮಾಡಿದ್ದ, ನಾನದಕ್ಕೆ ಮರದ ಜುಟ್ಟು ಜೋಡಿಸಿದ್ದೆ. ಕೆನಡಿಯನ್ ಮೇಪಲ್ ಮರದ ಎಲೆಗಳೇ ಮಾವಿನೆಲೆಗಳಾಗಿದ್ದವು. ಅಂತೂ ಗಣೇಶಹಬ್ಬ ಗಡದ್ದಾಗಿ ಆಚರಿಸಿದ್ದೆವು ಎಂದು ಮೂವತ್ತು ವರ್ಷಗಳ ಹಿಂದಿನ ನೆನಪು ಮಾಡಿಕೊಳ್ತಾರೆ.

ಮಿನ್ನೆಸೊಟಾದಲ್ಲಿರುವ ಶ್ರೀಲಕ್ಷ್ಮೀ ಹೊನ್ನವಳ್ಳಿ ಅದೆಲ್ಲ ಸಮಸ್ಯೆಯೇ ಬೇಡ ಅಂತ ಭಾರತದಿಂದ ಬೆಳ್ಳಿಯ ಹೂಗಳು, ಬೆಳ್ಳಿಯ ವೀಳ್ಯದೆಲೆ (ಬೆಳ್ಳಿಯ ತೆಂಗಿನಕಾಯಿ ಸಹ?) ತಂದಿಟ್ಟುಕೊಂಡಿದ್ದಾರಂತೆ. ಒಂದೆಡೆ ಭಕ್ತಿಯೂ ಆಯ್ತು, ಮತ್ತೊಂದೆಡೆ ರೀಯೂಸ್/ರೀಸೈಕ್ಲಿಂಗ್ ಮಂತ್ರದ ಪರಿಪಾಲನೆಯೂ ಆದಂತಾಯ್ತು! ಟೆಕ್ಸಸ್‌ನಲ್ಲಿರುವ ಮೀನಾ ಭಾರದ್ವಾಜ್ ಅವರಂತೂ ತೆಂಗಿನಕಾಯಿ ಬಳಸೋದೇ ಇಲ್ಲ. ಸತ್ಯನಾರಾಯಣ ವ್ರತಕಥೆಯ ವೇಳೆ ಒಂದೊಂದು ಅಧ್ಯಾಯದ ನಂತರ ಒಂದೊಂದು ತೆಂಗಿನಕಾಯಿ ಒಡೆದು ಕೊಲೆಸ್ಟ್ರಾಲ್ ಹೆಚ್ಚಿಸಿಕೊಳ್ಳುವುದೇಕೆ ಅಂತ ತೆಂಗಿನಕಾಯಿ ಬದಲಿಗೆ ಕಿತ್ತಳೆ, ಸೇಬು ಹಣ್ಣಿನ ನೈವೇದ್ಯ ಮಾಡ್ತಾರಂತೆ.

ಇವೆಲ್ಲಕ್ಕಿಂತಲೂ ಹೃದಯಸ್ಪರ್ಶಿಯಾದ ಒಂದು ಸಬ್‌ಸ್ಟಿಟ್ಯೂಟ್ ಸಂಸ್ಕೃತಿ ಅನುಭವ ಬರೆದಿದ್ದಾರೆ ಗುರುಭೀಮ ಜೋಯಿಸ್. ನಾಲ್ಕು ವರ್ಷಗಳ ಹಿಂದೆ ನನ್ನ ತಾಯಿ ತೀರಿಕೊಂಡರು. ಉತ್ತರಕ್ರಿಯೆ ವಿಧಿಗಳನ್ನೆಲ್ಲ ಪೂರೈಸಿ ನಾನು ಟಾಂಜಾನಿಯಾಕ್ಕೆ ಹಿಂದಿರುಗುವಾಗ ನಮ್ಮಪ್ಪ ಹೇಳಿದ್ದರು- ಪ್ರತಿ ತಿಂಗಳು ಮಾಸಿಕ ಮಾಡುವುದು ಹೇಗೆ ಅಂತ ಚಿಂತೆ ಮಾಡಬೇಡ. ಅಲ್ಲೇ ಆಕಳಿಗೆ ಸ್ವಲ್ಪ ಬೆಲ್ಲ ಮತ್ತು ಅಕ್ಕಿ ತಿನ್ನಲು ಮುಂದಿಟ್ಟು ನೀನು ಪ್ರದಕ್ಷಿಣೆ ಮಾಡು. ಅಷ್ಟು ಸಾಕು. ನನಗೂ ಸ್ವಲ್ಪ ನೆಮ್ಮದಿ ಅನಿಸ್ತು. ಆದರೆ ಅದು ಎಷ್ಟು ಕಷ್ಟಕರ ಎಂದು ಇಲ್ಲಿಗೆ ಬಂದಮೇಲೆ ತಿಳಿಯಿತು. ಆಕಳನ್ನು ಹುಡುಕುವುದೇ ಒಂದು ಯಜ್ಞ. ಒಂದು ಹುಲ್ಲುಗಾವಲಿದೆ, ಅಲ್ಲಿ ದನಗಳು ಮೇಯುವದನ್ನು ನೋಡಿದ್ದೇವೆ, ಆದರೆ ನೀನು ಅಕ್ಕಿಬೆಲ್ಲ ಇಟ್ಟು ಪ್ರದಕ್ಷಿಣೆ ಮಾಡೋದನ್ನು ಸ್ಥಳಿಯರು ನೋಡಿದರೆ ನೀನು ಪೋಲಿಸ್‌ ಸ್ಟೇಷನ್ ಪ್ರದಕ್ಷಿಣೆ ಮಾಡಬೇಕಾಗಿ ಬರುತ್ತೆ ಜಾಗ್ರತೆ! ಅಂತ ಹೆದರಿಸಿದರು ನನ್ನ ಕೆಲ ಸ್ನೇಹಿತರು/ಸಹೋದ್ಯೋಗಿಗಳು. ಬೇರೇನೂ ಮಾಡಲಾಗದೆ ಅಲ್ಲೇ ಕೃಷ್ಣನಗುಡಿ ಹುಂಡಿಯಲ್ಲಿ ಕಾಣಿಕೆ ಸಲ್ಲಿಸಿ ಸುಮ್ಮನಾದೆ.

ನನಗೆ ಶರಪಂಜರ ಚಿತ್ರದ ಹಾಡಿನ ಸಾಲುಗಳು ನೆನಪಾಗ್ತಿವೆ. ಮುತ್ತುಗದ ಹೂವು ಮಲ್ಲಿಗೆಯೇ, ಅತ್ತಿಯ ಹಣ್ಣು ಅಂಜೂರವೇ... ಬೆಟ್ಟದ ಕಾಳ್ಗಿಚ್ಚು ದೀಪವೇ ಬಿರುಗಾಳಿ ಕೆಂಧೂಳಿ ಧೂಪವೇ... ಮೋಹದಾ ವೇಷ ಭಕ್ತಿಯೇ ಸವಿಯಾದುದೆಲ್ಲ ನೈವೇದ್ಯವೇ... ಅಂದಹಾಗೆ, ಕನ್ನಡನಾಡಿನಲ್ಲಿದ್ದುಕೊಂಡು ನೀವು ಸಹ ಯಾವ ಥರದಲ್ಲಾದರೂ ಈರೀತಿಯ ಸಬ್‌ಸ್ಟಿಟ್ಯೂಟ್ ಸಂಸ್ಕೃತಿಯನ್ನು ಅನುಸರಿಸುತ್ತೀರಾ? ಸ್ವಾರಸ್ಯಕರವಿದ್ದರೆ ಬರೆದು ತಿಳಿಸುತ್ತೀರಾ?

(ಸ್ನೇಹಸೇತು : ವಿಜಯ ಕರ್ನಾಟಕ (ಪರಾಗಸ್ಪರ್ಶ ಅಂಕಣ))

ಸಬ್‌ಸ್ಟಿಟ್ಯೂಟ್ ಸಂಸ್ಕೃತಿ : ಲೇಖನದ ಮೊದಲ ಭಾಗ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more