ಅಕ್ಕ ಸಮ್ಮೇಳನಕ್ಕೆ ನೊಂದಾವಣೆ ಆರಂಭ

ಜನವರಿ ಒಂದರಿಂದ ಆನ್ ಲೈನ್ ನೊಂದಾವಣೆ ಆರಂಭವಾಗಿದ್ದು ಮೊದಲ ಹಂತದಲ್ಲೇ (ಜನವರಿ 1ರಿಂದ ಫೆ.28) ನೊಂದಾವಣಿ ಮಾಡಿಕೊಳ್ಳುವವರಿಗೆ ಆಕರ್ಷಕ ರಿಯಾಯಿತಿಗಳನ್ನು ಸಮ್ಮೇಳನ ಸಮಿತಿ ಪ್ರಕಟಿಸಿದೆ. ಬೇಗಬೇಗನೆ ನೊಂದಾವಣೆ ಮಾಡಿಕೊಳ್ಳುವ ಅಮೆರಿಕಾ ವಾಸಿ ಕನ್ನಡಿಗರಿಗೆ ಕೇವಲ 125 ಡಾಲರ್. ಭಾರತದ ಪ್ರತಿನಿಧಿಗಳಿಗೆ 100 ಡಾಲರು.
ಆನ್ ಲೈನ್ ರಿಜಿಸ್ಟ್ರೇಷನ್ ಅರ್ಜಿ ನಮೂನೆಗಳನ್ನು ಇಲ್ಲಿ ಕಾಣಿರಿ :
ಮೂರು ದಿವಸಗಳ ಪೂರ್ತಿ ಸಮ್ಮೇಳನಕ್ಕೆ ಸಾಮಾನ್ಯ ಪ್ರತಿನಿಧಿ ನೊಂದಾವಣೆ ವಿವರಗಳ ಜತೆಗೆ ಸಮ್ಮೇಳನದಲ್ಲಿ ಜರಗುವ ಆರ್ಟ್ ಆಫ್ ಲಿವಿಂಗ್ ಧ್ಯಾನ ಶಿಬಿರ, ವಾಣಿಜ್ಯ ಮೇಳ ಮುಂತಾದ ಇತರ ಉಪ ವಿಭಾಗಗಳಿಗೂ ರಿಜಿಸ್ಟ್ರೇಷನ್ ಮಾಡಬಯಸುವವರಿಗೆ ಮಾಹಿತಿಗಳು ಲಭ್ಯವಿದೆ. ಇದಲ್ಲದೆ ಸಮ್ಮೇಳನಕ್ಕೆ ದೇಣಿಗೆ ನೀಡಬಯಸುವ ಬ್ರಾಂಜ್, ಬೆಳ್ಳಿ, ಸುವರ್ಣ, ಪ್ಲಾಟಿನಮ್, ಪ್ಲಾಟಿನಮ್ ಪ್ಲಸ್ ದಾನಿಗಳಿಗೆ ವಿವರಗಳು ಇವೆ ಎಂದು ಸಮ್ಮೇಳನ ಸಮಿತಿ ತಿಳಿಸಿದೆ.











Click it and Unblock the Notifications