ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬಾನುಲಿಯಲ್ಲಿ ವೀಣಾ ಶಾಂತೇಶ್ವರ ಸಂದರ್ಶನ

By Staff
|
Google Oneindia Kannada News

Veena Shanteshwar
ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವ ಸಂಭ್ರಮದ ಈ ಹೊತ್ತಿನಲ್ಲಿ ನಾಡಿನ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಅವರೊಂದಿಗೆ ಸ್ಟಾನ್‌ಫರ್ಡ್ ಬಾನುಲಿ ಕೇಂದ್ರದಲ್ಲಿ ಜೂನ್ 11ರಂದು ಗುರುವಾರ ಸಂದರ್ಶನ ಪ್ರಸಾರವಾಗಲಿದೆ. ರೇಡಿಯೋ ಜಾಕಿ ಆಗಿರುವ ಮಧು ಕೃಷ್ಣಮೂರ್ತಿ ಅವರು ನಡೆಸಿಕೊಡುವ ಈ ಕಾರ್ಯಕ್ರಮಗಳು ವಿಶ್ವದಾದ್ಯಂತ ಶ್ರೋತೃಗಳು ಸಂದರ್ಶನವನ್ನು ಆಲಿಸಬಹುದು.

ಇಂದಿಗೆ 100 ವರ್ಷಗಳ ಹಿಂದೆ (1909) ಧಾರವಾಡದ ಸಂತೂಬಾಯಿ ನೀಲಗಾರ ತಮ್ಮ ಮೊದಲ ಕಾದಂಬರಿ "ಸದ್ಗುಣಿ ಕೃಷ್ಣಾಬಾಯಿ"ಯ ಮೂಲಕ ಹೊಸಗನ್ನಡದಲ್ಲಿ ಸ್ತ್ರೀ ಸಮಾಜದ ವೈಚಾರಿಕ ಜಾಗೃತಿಗಾಗಿ ಹಾಗು ಸ್ತ್ರೀ ಶಿಕ್ಷಣದ ಪರವಾಗಿ ಮೊದಲ ಬಾರಿಗೆ ದನಿ ಎತ್ತಿದರು. ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವವಾಗಿರುವ (1909 - 2009) ಪ್ರಸ್ತುತ ಸಂದರ್ಭದಲ್ಲಿ ವೀಣಾ ಶಾಂತೇಶ್ವರ್ ಅವರ ಸಂದರ್ಶನ ಅತ್ಯಂತ ಸಂಗತವಾಗಿದೆ.

ಕಾರ್ಯಕ್ರಮದ ವಿವರ :

ವಿಷಯ : ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವ
ದಿನಾಂಕ : 2009 ಜೂನ್ 11 ಗುರುವಾರ
ಸಮಯ : ಬೆಳಗ್ಗೆ 6.00ರಿಂದ 7.30 AM PST (ಕ್ಯಾಲಿಫೋರ್ನಿಯ ಸಮಯ) - ಸಂಗೀತದ ಕಾರ್ಯಕ್ರಮ.
7.30 - 9.00 AM PST (ಕ್ಯಾಲಿಫೋರ್ನಿಯ ಸಮಯ) ಡಾ. ವೀಣಾ ಶಾಂತೇಶ್ವರ ಅವರೊಂದಿಗೆ ಸಂದರ್ಶನ.
(ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.)
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ : http://kzsulive.stanford.edu/ (from anywhere in the world)

ನಡೆಸಿಕೊಡುವವರು : ಮಧು ಕೃಷ್ಣಮೂರ್ತಿ

ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು : http://www.itsdiff.com/Kannada.html
ಭಾರತೀಯ ಕಾಲಮಾನ: ಗುರುವಾರ ರಾತ್ರಿ 6.30ರಿಂದ 9.30

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X