ವಸಂತ ಸಾಹಿತ್ಯೋತ್ಸವಕ್ಕೆ ಭರದ ಸಿದ್ಧತೆ

ಅಮೆರಿಕದ ರಾಜಧಾನಿ ಪ್ರದೇಶದ ಕಾವೇರಿ ಕನ್ನಡ ಸಂಘದ ಸಹಯೋಗದಲ್ಲಿ ಮೇ 30, 31ರಂದು, ಮೇರೀಲ್ಯಾಂಡಿನ ರಾಕ್‌ವಿಲ್ ನಗರದಲ್ಲಿರುವ "ಯೂನಿವರ್ಸಿಟೀಸ್ ಎಟ್ ಶೇಡೀ ಗ್ರೋವ್" ಒಳಾಂಗಣದಲ್ಲಿ ನಾಲ್ಕನೆಯ ವಸಂತ ಸಾಹಿತ್ಯೋತ್ಸವವನ್ನು ಆಚರಿಸಲು ಸಿದ್ಧತೆ ನಡೆದಿದೆ. ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ತರೂ ಕಾಲೇಜಿನ ಪ್ರಾಂಶುಪಾಲರೂ ಆಗಿ ನಿವೃತ್ತರಾಗಿರುವ ಕನ್ನಡದ ಬರಹಗಾರ್ತಿ ವೀಣಾ ಶಾಂತೇಶ್ವರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಕಳೆದ ಮುವತ್ತು ವರ್ಷಗಳಲ್ಲಿ ಕನ್ನಡ ಕಾದಂಬರಿಯ ಬರವಣಿಗೆ ಮತ್ತು ಬೆಳವಣಿಗೆಗಳನ್ನು ಕುರಿತು ದೀರ್ಘವಾಗಿ ಪ್ರಸ್ತಾಪಿಸಲಿದ್ದಾರೆ. ಕನ್ನಡದ ಮತ್ತೊಬ್ಬ ಬರಹಗಾರ್ತಿ ವೈದೇಹಿಯವರು ವಿಶೇಷ ಅತಿಥಿಯಾಗಿ ಬಂದು ತಮ್ಮ ಕತೆ ಕವನಗಳನ್ನು ಓದಲಿದ್ದಾರೆ. ಇವರಿಬ್ಬರೂ ಸಹ ಅಮೆರಿಕದ ಮಹಿಳಾ ಲೇಖಕಿಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕವಿಗೋಷ್ಠಿ, ಸಾಹಿತ್ಯ ಸಂಕಿರಣ ಮತ್ತು ಗಣಕದಲ್ಲಿ ಕನ್ನಡ' ಎಂಬ ವಿಶೇಷ ಪ್ರಾತ್ಯಕ್ಷಿಕೆಯೂ ಏರ್ಪಾಟಾಗಿದೆ.
ಈ ವಿಶೇಷ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ರಂಗದ ನಾಲ್ಕನೆಯ ಪ್ರಕಟಣೆ --"ಕನ್ನಡ ಕಾದಂಬರಿ ಲೋಕದಲ್ಲಿ...ಹೀಗೆ ಹಲವು..." ಎಂಬ ಅಮೆರಿಕದಲ್ಲೇ ನೆಲೆಸಿರುವ ಕನ್ನಡ ಬರಹಗಾರರಿಂದಲೇ ಸೃಷ್ಟಿಯಾದ ವಿಮರ್ಶಾಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಕನ್ನಡ ಸಾಹಿತ್ಯ ರಂಗ ಮತ್ತು ಅಭಿನವ ಸಂಸ್ಥೆಯ ಈ ಜಂಟಿ ಪ್ರಕಟಣೆಯನ್ನು ಅಮೆರಿಕದ ಕನ್ನಡ ಕೂಟಗಳ ಆಗರ --"ಅಕ್ಕ" ಸಂಸ್ಥೆಯು ಪ್ರಾಯೋಜಿಸಿದೆ. ಕನ್ನಡದ ಅತ್ಯಂತ ಗೌರವಾನ್ವಿತ ವಿಮರ್ಶಕರಲ್ಲಿ ಒಬ್ಬರಾದ ಡಾ|| ಜಿ.ಎಸ್. ಆಮೂರರು ಬರೆದಿರುವ ಮುನ್ನುಡಿಯಲ್ಲಿ ಅವರ ಕೆಲವು ಉದ್ಗಾರಗಳು ಹೀಗಿವೆ:
"...ಈ ಪುಸ್ತಕ್ಕಕ್ಕೆ ಸೇರಿದ ಲೇಖನಗಳನ್ನು ಬರೆದವರಲ್ಲಿ ಹೆಚ್ಚಿನವರು ಸಾಹಿತ್ಯಕ್ಷೇತ್ರಕ್ಕೆ ಹೊರಗಿನವರು ...ಕನ್ನಡ ಓದುಗರಿಗೆ ಹೊಸಬರು, ಆದರೆ ಚೆನ್ನಾಗಿ ಬರೆಯಬಲ್ಲವರು. ಇವರನ್ನು ಒಳಗೊಳ್ಳುವ ಮೂಲಕ ಈ ಪುಸ್ತಕಕ್ಕೆ ತಾಜಾತನ ಹಾಗೂ ವೈವಿಧ್ಯ ಬಂದಿದೆ."
"...ಇಂಥ ಲೇಖನಗಳು ವಿಮರ್ಶೆಯ ಪ್ರಾಥಮಿಕ ಕರ್ತವ್ಯವನ್ನು ಸಮರ್ಥವಾಗಿ ಹಾಗೂ ಅಚ್ಚುಕಟ್ಟಿನಿಂದ ನೆರವೇರಿಸುತ್ತವೆ. ಆದರೆ ಕೃತಿಗಳೊಡನೆ ಇನ್ನೂ ಹೆಚ್ಚು ಗಂಭೀರವಾದ ತೊಡಗಿಕೊಳ್ಳುವಿಕೆಯನ್ನು ತೋರುವ ಹಲವಾರು ಲೇಖನಗಳೂ ಈ ಪುಸ್ತಕದಲ್ಲಿವೆಯೆನ್ನುವುದು ಮಹತ್ವದ್ದಾಗಿದೆ."
"...ಹಲವಾರು ಮಹಿಳೆಯರ ಲೇಖನಗಳಿರುವುದು ಈ ಸಂಕಲನದ ಒಂದು ಗಮನಾರ್ಹ ವೈಶಿಷ್ಟ್ಯವಾಗಿದೆ. ಕನ್ನಡದ ಬೇರೆ ಯಾವ ಪ್ರಾತಿನಿಧಿಕ ವಿಮರ್ಶಾ ಸಂಕಲನದಲ್ಲಿಯೂ ಈ ಪ್ರಮಾಣದಲ್ಲಿ ಲೇಖಕಿಯರು ದೊರೆಯಲಾರರು."
ಅಮೆರಿಕದ ಕನ್ನಡ ಬರಹಗಾರರಲ್ಲಿ ಪ್ರಸಿದ್ಧರಾಗಿರುವ ಮೈ.ಶ್ರೀ. ನಟರಾಜರ ದಟ್ಸ್ ಕನ್ನಡ ಅಂಕಣ ಬರಹಗಳ ಸಂಕಲನ "ಜಾಲತರಂಗಿಣಿ" ಎಂಬ ಪುಸ್ತಕ ಸಹ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅಲ್ಲದೇ, ಅಮೆರಿಕದ ಹಲವಾರು ಲೇಖಕ/ಲೇಖಕಿಯರನ್ನು ಪರಿಚಯಮಾಡಿಕೊಡಲೋಸುಗವೇ "ನಮ್ಮ ಬರಹಗಾರರು" ಎಂಬ ಒಂದು ವಿಚಾರ ಸಂಕಿರಣವೂ ಸಮ್ಮೇಳನದ ಒಂದು ಮುಖ್ಯ ಅಂಗವಾಗಿದೆ. ಅಮೆರಿಕದಲ್ಲಿ ಕನ್ನಡ ಕಲಿಯುತ್ತಿರುವ ಚಿಣ್ಣರ ಕಾರ್ಯಕ್ರಮದೊಂದಿಗೆ ಕನ್ನಡ ದುಂದುಭಿಯನ್ನು ಮೊಳಗಿಸುವ ಈ ಸಾಹಿತ್ಯೋತ್ಸವದಲ್ಲಿ ನೂರಾರು ಮಂದಿ ದೇಶದ ನಾನಾ ಮೂಲೆಗಳಿಂದ ಬಂದು ಭಾಗವಹಿಸಲಿದ್ದಾರೆ. ಕಾವೇರಿಯ ಹೆಸರಾಂತ ಕಲಾವಿದರಿಂದ ಎರಡು ನಾಟಕಗಳು ಮತ್ತು ಮಾಲತೀ ಶರ್ಮರ ಭಾವಗೀತೆಗಳು ಸಾಂಸ್ಕೃತಿಕ ಕಾರ್ಯಕ್ರಮದ ಮುಖ್ಯ ಭಾಗಗಳಾಗಿವೆ. ರಸದೌತಣಗಳೂ ಏರ್ಪಾಟಾಗಿವೆ ಎಂದು ಬೇರೆ ಹೇಳಬೇಕಿಲ್ಲ!
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications